15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್ ಸೇರ್ಪಡೆ
Team Udayavani, Mar 22, 2023, 6:15 AM IST
ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಿವಿಧ ಸಮುದಾಯಗಳ ಮುಖಂಡರ ರಾಜಕೀಯ ಪಕ್ಷಗಳ ಸೇರ್ಪಡೆ ಭರಾಟೆ ಮುಂದುವರಿದಿದ್ದು, ಮಂಗಳವಾರ ಸುಮಾರು 15ಕ್ಕೂ ಅಧಿಕ ದಲಿತ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಮೊದಲು ದಲಿತ ಸಂಘಟನೆ ಸೇರಿ ಹತ್ತು ಹಲವು ಸಂಘಟನೆಗಳ ಮೂಲಕ ಶೋಷಿತರ ಪರ ಹೋರಾಟ ಮಾಡಿಕೊಂಡು ಬರುತ್ತಿರುವ ಎಡ ಮತ್ತು ಬಲ ಸಮುದಾಯಗಳ ದಲಿತ ನಾಯಕರು, ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ, ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಸಮ್ಮುಖದಲ್ಲಿ “ಕೈ’ ಹಿಡಿದರು. ಪಕ್ಷದ ಧ್ವಜ ನೀಡಿ ಇವರನ್ನು ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ರಣದೀಪ್‌ಸಿಂಗ್ ಸುರ್ಜೇವಾಲ, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಕಾಂಗ್ರೆಸ್ ಸೇರ್ಪಡೆಗೊಂಡ ಬಿಎಸ್‌ಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಿ. ಗೋಪಾಲ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಎಚ್. ಶ್ರೀನಿವಾಸ್, ಮಾಜಿ ಅಧಿಕಾರಿ ಎಚ್.ಪಿ.ಸುಧಾಮದಾಸ್, ಎಂಆರ್‌ಎಚ್‌ಎಸ್ ರಾಜ್ಯ ಮುಖಂಡ ಅಂಬಣ್ಣ ಅರೋಳಿಕರ ಮಾತನಾಡಿದರು.
ಅಮಾವಾಸ್ಯೆ ಹಿನ್ನೆಲೆ; ಬಾರದ ಚಿಂಚನಸೂರ?
ಬಿಜೆಪಿಗೆ ಗುಡ್ ಬೈ ಹೇಳಿರುವ ಬಾಬುರಾವ್ ಚಿಂಚನಸೂರ ಮಂಗಳವಾರ ಕಾಂಗ್ರೆಸ್ ಸೇರ್ಪಡೆಗೊಳ್ಳಲಿಲ್ಲ. ಸೋಮವಾರ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಮತ್ತು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಅವರು, ಮಂಗಳವಾರ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆಂಬ ನಿರೀಕ್ಷೆಯಿತ್ತು. ಆದರೆ, ಅಮಾವಾಸ್ಯೆ ಹಿನ್ನೆಲೆಯಲ್ಲಿ ಸೇರ್ಪಡೆ ಕಾರ್ಯಕ್ರಮ ಮುಂದೂಡಿದರು ಎನ್ನಲಾಗಿದೆ.
ಸೇರ್ಪಡೆಗೊಂಡ ದಲಿತ ಮುಖಂಡರು
ಅಂಬಣ್ಣ ಅರೋಳಿಕರ, ಎಚ್. ಶ್ರೀನಿವಾಸ, ಮಾರೀಶ ನಾಗಣ್ಣವರ, ಸಣ್ಣ ಮಾರೆಣ್ಣ, ವೆಂಕಟೇಶ ಆಲೂರ, ಎ. ನರಸಿಂಹಮೂರ್ತಿ, ಬಿ. ಮರಿಸ್ವಾಮಿ ಕೊಟ್ಟೂರ, ಮುರಳೀಧರ ಮೇಲಿನಮನಿ, ಹಠವಾದಿ ಲಕ್ಷ್ಮಣ, ವಿಜಯಕುಮಾರ, ತಿಮ್ಮಪ್ಪ ಅಲ್ಕೂರ, ರಾಜಣ್ಣ, ಉಡುಚಪ್ಪ ಮಾಳಗಿ, ಮುನಿಕೃಷ್ಣಯ್ಯ, ಯಲ್ಲಪ್ಪ ಗೊರಮಗೊಳ್ಳ, ಮಾರುತಿ ರಂಗಾಪುರಿ, ಎಚ್.ಪಿ. ಸುಧಾಮ ದಾಸ್, ಬಿ. ಗೋಪಾಲ್, ಎ.ಡಿ. ಈಶ್ವರಪ್ಪ, ಪಂಡಿತ ಮುನಿವೆಂಕಟಪ್ಪ, ಪ್ರಭಾಕರ ಚಲವಾದಿ ತೇರದಾಳ, ಶಿವಪ್ಪ ದಿಣ್ಣೆಕೆರೆ.
ಈ ಸಂದರ್ಭದಲ್ಲಿ ಮಾತನಾಡಿದ ರಣದೀಪ್‌ಸಿಂಗ್ ಸುರ್ಜೇವಾಲ, “ಕಾಂಗ್ರೆಸ್ ಬರೀ ಬ್ರಿಟಿಷರ ವಿರುದ್ಧ ಹೋರಾಟ ಮಾಡಲಿಲ್ಲ. ಸಾವಿರಾರು ವರ್ಷಗಳಿಂದ ಅನುಸರಿಸುತ್ತಿದ್ದ ಜಾತಿ, ಅಸ್ಪೃಶ್ಯತೆ ವಿರುದ್ಧವೂ ಹೋರಾಟ ಮಾಡಿಕೊಂಡು ಬಂದಿದೆ. ಈ ಶೋಷಿತ ಸಮುದಾಯಗಳನ್ನು ಮೇಲೆತ್ತಲು ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್ ಒಳಗೊಂಡಂತೆ ಅನೇಕ ಮಹನೀಯರು ಶ್ರಮಿಸಿದ್ದಾರೆ. ಆದರೆ, ಈಗಲೂ ದಲಿತರಿಗೆ ಸಂಕಷ್ಟ ಮುಂದುವರಿದಿದೆ. ಇದುವರೆಗೆ ಹೊರಗಿನಿಂದ ಶೋಷಿತರ ಪರ ಹೋರಾಟ ಮಾಡುತ್ತಿದ್ದ ದಲಿತ ನಾಯಕರು, ಈಗ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಹೋರಾಟ ಮುಂದುವರಿಸಲು ನಿರ್ಧರಿಸಿರುವುದು ಸ್ವಾಗತಾರ್ಹ’ ಎಂದರು.
ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, “ಕಾಂಗ್ರೆಸ್‌ನಿಂದ ಮಾತ್ರ ದಲಿತ ಸಮುದಾಯಗಳಿಗೆ ನ್ಯಾಯ ಕಲ್ಪಿಸಲು ಸಾಧ್ಯ ಎಂಬುದು ದಲಿತ ನಾಯಕರಿಗೆ ಇಂದು ಮನವರಿಕೆಯಾಗಿದೆ. ಇದರ ಫಲವಾಗಿ ಈ ಮೊದಲು ವಿವಿಧ ಸಂಘಟನೆಗಳ ಮೂಲಕ ಹೋರಾಟ ಮಾಡುತ್ತಿದ್ದ ದಲಿತ ನಾಯಕರು, ಕಾಂಗ್ರೆಸ್ ಸೇರ್ಪಡೆಗೊಂಡು ತಮ್ಮ ಹೋರಾಟ ಮುಂದುವರಿಸಲಿದ್ದಾರೆ’ ಎಂದು ಹೇಳಿದರು.
ಕೆ.ಎಚ್.ಮುನಿಯಪ್ಪ ಮಾತನಾಡಿ, “ಹಿಂದಳಿದ ವರ್ಗಗಳ ಏಳಿಗೆ ಬಿಜೆಪಿಗೆ ಬೇಕಿಲ್ಲ ಎನ್ನುವುದು ಅದರ ಧೋರಣೆಗಳಿಂದಲೇ ಗೊತ್ತಾಗುತ್ತದೆ. ಕಾಂಗ್ರೆಸ್‌ನಿಂದ ಮಾತ್ರ ಶೋಷಿತರ ಅಭಿವೃದ್ಧಿ ಸಾಧ್ಯ. ದಲಿತರ ಪರವಾಗಿ ನಾಯಕರು ಸಾಕಷ್ಟು ಹೋರಾಟ ಮಾಡಿದ್ದಾರೆ. ನಿಮ್ಮ ಹೋರಾಟದಿಂದ ನಮಗೆ ಪ್ರಶ್ನೆ ಮಾಡಲು ಅವಕಾಶ ಸಿಕ್ಕಿದೆ’ ಎಂದು ತಿಳಿಸಿದರು.
ಮಾಜಿ ಸಚಿವ ಎಚ್.ಆಂಜನೇಯ, ಕಾಂಗ್ರೆಸ್ ಸೇರ್ಪಡೆಗೊಂಡ ಬಿಎಸ್‌ಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಿ. ಗೋಪಾಲ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಎಚ್. ಶ್ರೀನಿವಾಸ್, ಮಾಜಿ ಅಧಿಕಾರಿ ಎಚ್.ಪಿ.ಸುಧಾಮದಾಸ್, ಎಂಆರ್‌ಎಚ್‌ಎಸ್ ರಾಜ್ಯ ಮುಖಂಡ ಅಂಬಣ್ಣ ಅರೋಳಿಕರ ಮಾತನಾಡಿದರು.
ಅಮಾವಾಸ್ಯೆ ಹಿನ್ನೆಲೆ; ಬಾರದ ಚಿಂಚನಸೂರ?
ಬಿಜೆಪಿಗೆ ಗುಡ್ ಬೈ ಹೇಳಿರುವ ಬಾಬುರಾವ್ ಚಿಂಚನಸೂರ ಮಂಗಳವಾರ ಕಾಂಗ್ರೆಸ್ ಸೇರ್ಪಡೆಗೊಳ್ಳಲಿಲ್ಲ. ಸೋಮವಾರ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಮತ್ತು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಅವರು, ಮಂಗಳವಾರ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆಂಬ ನಿರೀಕ್ಷೆಯಿತ್ತು. ಆದರೆ, ಅಮಾವಾಸ್ಯೆ ಹಿನ್ನೆಲೆಯಲ್ಲಿ ಸೇರ್ಪಡೆ ಕಾರ್ಯಕ್ರಮ ಮುಂದೂಡಿದರು ಎನ್ನಲಾಗಿದೆ.
ಸೇರ್ಪಡೆಗೊಂಡ ದಲಿತ ಮುಖಂಡರು
ಅಂಬಣ್ಣ ಅರೋಳಿಕರ, ಎಚ್. ಶ್ರೀನಿವಾಸ, ಮಾರೀಶ ನಾಗಣ್ಣವರ, ಸಣ್ಣ ಮಾರೆಣ್ಣ, ವೆಂಕಟೇಶ ಆಲೂರ, ಎ. ನರಸಿಂಹಮೂರ್ತಿ, ಬಿ. ಮರಿಸ್ವಾಮಿ ಕೊಟ್ಟೂರ, ಮುರಳೀಧರ ಮೇಲಿನಮನಿ, ಹಠವಾದಿ ಲಕ್ಷ್ಮಣ, ವಿಜಯಕುಮಾರ, ತಿಮ್ಮಪ್ಪ ಅಲ್ಕೂರ, ರಾಜಣ್ಣ, ಉಡುಚಪ್ಪ ಮಾಳಗಿ, ಮುನಿಕೃಷ್ಣಯ್ಯ, ಯಲ್ಲಪ್ಪ ಗೊರಮಗೊಳ್ಳ, ಮಾರುತಿ ರಂಗಾಪುರಿ, ಎಚ್.ಪಿ. ಸುಧಾಮ ದಾಸ್, ಬಿ. ಗೋಪಾಲ್, ಎ.ಡಿ. ಈಶ್ವರಪ್ಪ, ಪಂಡಿತ ಮುನಿವೆಂಕಟಪ್ಪ, ಪ್ರಭಾಕರ ಚಲವಾದಿ ತೇರದಾಳ, ಶಿವಪ್ಪ ದಿಣ್ಣೆಕೆರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.