ಚಾರುಕೀರ್ತಿ ಭಟ್ಟಾರಕ ಶ್ರೀಗಳನ್ನು ಕಾಣಬೇಕಿದ್ದರೆ 12 ವರ್ಷ ಕಾಯಬೇಕಿತ್ತು!
Team Udayavani, Mar 24, 2023, 7:22 AM IST
ಕಾರ್ಕಳ: ಹೆಚ್ಚು ಭಕ್ತಿ, ಅತೀ ಕಡಿಮೆ ಭಯ, ಅಪಾರ ಪ್ರೀತಿ, ಅಭಿಮಾನ… ಇದು ಗುರುವಾರ ಜಿನೈಕ್ಯರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರನ್ನು ಜಾತಿ, ಮತ ಭೇದವಿಲ್ಲದೆ ಎಲ್ಲರೂ ಪ್ರೀತಿಸಲು ಕಾರಣ. ಶ್ರೀಗಳು ಮಹಾಮಸ್ತಕಾಭಿಷೇಕದ ಸಂದರ್ಭ ಹೊರತು ಇತರ ಸಮಯದಲ್ಲಿ ಮಾಧ್ಯಮದವರಿಗೆ ಲಭ್ಯರಾಗುತ್ತಿರಲಿಲ್ಲ; ಅವರನ್ನು ಕಾಣಲು ಮತ್ತೆ 12 ವರ್ಷ ಕಾಯಬೇಕಿತ್ತು ಎನ್ನುತ್ತಾರೆ ಶ್ರೀಗಳ ಹತ್ತಿರದಿಂದ ಬಲ್ಲವರು. ಶ್ರೀಗಳ ಅನೇಕ ಮಂದಿ ಸ್ನೇಹಿತರು ಬಾಲ್ಯದ ಅನುಭವ, ಒಡನಾಟವನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಅವರದು ಶಿಸ್ತುಬದ್ಧ ನಡವಳಿಕೆ. ಗಂಭೀರ ಸ್ವಭಾವ, ಜತೆಗಿರು ವವರನ್ನು ಅತಿಯಾಗಿ ಪ್ರೀತಿಸುತ್ತಿದ್ದರು ಎಂದು 7ನೇ ತರಗತಿಯ ಸಹಪಾಠಿ ಎನ್. ಸುಕುಮಾರ ಜೈನ್ ಮೂಡುಬಿದಿರೆ ಹೇಳಿದರು.
ಗೆಳೆಯನ ಶಿಷ್ಯನಾದೆ: ಶ್ರೀ ಭುಜಬಲಿ ಬ್ರಹ್ಮಚರ್ಯ ಆಶ್ರಮದಲ್ಲಿ ಓದುತ್ತಿರುವಾಗ ಆತ್ಮೀಯ ಗೆಳೆಯರಾಗಿದ್ದೆವು. ಅದೇ ಗೆಳೆತನ ಕೊನೆಗೆ ನನ್ನನ್ನು ಅವರ ಶಿಷ್ಯನನ್ನಾಗಿಸಿತು. ಕಾರ್ಕಳಕ್ಕೆ ಬಂದಾಗ ಅವರ ಪ್ರಾಥಮಿಕ ಶಾಲಾ ಗುರುಗಳಾದ ಜಿ. ಜಗತ್ಪಾಲ ಶೆಟ್ಟಿ ಅವರನ್ನು ಗೌರವಿಸಿ ಅಭಿನಂದಿಸಿದ್ದರು ಎಂದು ಕಾರ್ಕಳದ ಎಂ. ಶಿಶುಪಾಲ ಜೈನ್ ನೆನಪಿಸಿಕೊಂಡರು. ಚಿಕ್ಕವರಿದ್ದಾಗಲೇ ಸರಳ, ಸಜ್ಜನಿಕೆ ಅವರಲ್ಲಿತ್ತು. ಧರ್ಮದ ಬಗ್ಗೆ ಅಪಾರ ಗೌರವ, ಮೋಹ ಹೊಂದಿದ್ದರು. ಅವರ ಬಾಲ್ಯದ ಗುರಿಯು ಮುಂದೆ ಅವರನ್ನು ಓರ್ವ ಶ್ರೇಷ್ಠ ವ್ಯಕ್ತಿಯನ್ನಾಗಿಸಿತು ಎಂದು ಇನ್ನೋರ್ವ ಸಹಪಾಠಿ ಎಸ್. ಸಾಂತಪ್ಪ ಜೈನ್ ಮೈಸೂರು ಸ್ಮರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.