ಶನಿವಾರದ ರಾಶಿಫಲ: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನ ಲಾಭ, ಆರೋಗ್ಯ ಸುದೃಢವಾಗಲಿದೆ
Team Udayavani, Mar 25, 2023, 7:15 AM IST
ಮೇಷ: ವಿದ್ಯಾರ್ಥಿಗಳಿಗೆ ಅದೃಷ್ಟದ ದಿನ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ದೇವತಾ ಸನ್ನಿಧಾನಕ್ಕೆ ಭೇಟಿ. ಗುರುಹಿರಿಯರ ಆಶೀರ್ವಾದದಿಂದ ಸಕಲ ಕಾರ್ಯಗಳಲ್ಲಿ ಜಯ. ಅನಿರೀಕ್ಷಿತ ಧನ ಲಾಭ. ಆರೋಗ್ಯ ಸುದೃಢ.
ವೃಷಭ: ದೂರ ಸಂಚಾರ. ದೂರದ ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ಹೆಚ್ಚಿದ ಜವಾಬ್ದಾರಿ. ಅನಗತ್ಯ ಸಹಾಯ ಮಾಡಲು ಹೋಗಿ ತೊಂದರೆಗೊಳಗಾಗದಿರಿ. ಸತ್ಕಾರ್ಯಕ್ಕೆ ಧನ ವ್ಯಯ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ.
ಮಿಥುನ: ಧೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ವೈಖರಿ. ಪರರಿಗೆ ಸಹಾಯ ಮಾಡಿದ ತೃಪ್ತಿ. ಉದ್ಯೋಗ, ಪಾಲುಗಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯವೈಖರಿ.
ಕರ್ಕ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರ ಗಳಲ್ಲಿ ಕೀರ್ತಿ ಸಂಪಾದನೆ. ಮೆಚ್ಚುಗೆ. ಅನಿರೀಕ್ಷಿತ ಪ್ರಗತಿ. ಗೃಹದಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆದು ಸಂಭ್ರಮದ ವಾತಾವರಣ. ಬಂಧುಮಿತ್ರರ ಆಗಮನ. ಅವಿವಾಹಿತರಿಗೆ ವಿವಾಹ ಭಾಗ್ಯ.
ಸಿಂಹ: ನಿರೀಕ್ಷಿಸಿದಂತೆ ಎಲ್ಲಾ ಕೆಲಸ ಕಾರ್ಯ ಗಳಲ್ಲಿ ಸಫಲತೆ. ಸ್ಥಾನ ಗೌರವಾದಿ ಪ್ರಾಪ್ತಿ. ಮಕ್ಕಳಿಂದ ಸಂತೋಷ. ಜನಪದರಿಂದ ಮೆಚ್ಚುಗೆ. ಅಧಿಕಾರ ಪ್ರಾಪ್ತಿ. ಸಂದರ್ಭೋಚಿತ ಮಾರ್ಗದರ್ಶನ ದಿಂದ ಜನಮನ್ನಣೆ. ಹೆಚ್ಚಿದ ವರಮಾನ.
ಕನ್ಯಾ: ಉಳಿತಾಯದ ಬಗ್ಗೆ ಚಿಂತನೆ. ಹೂಡಿಕೆಗಳಲ್ಲಿ ಆಸಕ್ತಿ. ಎಲ್ಲಾ ವಿಚಾರದಲ್ಲಿ ತಾಳ್ಮೆ ಸಹನೆ ಅಗತ್ಯ. ಅನಗತ್ಯ ವಿಚಾರಗಳಿಗೆ ತಲೆ ಕೊಡದಿರಿ. ಸಾಧ್ಯವಾದಷ್ಟು ಮೌನ ವಹಿಸುವುದು ಉತ್ತಮ. ದೇವತಾ ಸ್ಥಳ ಸಂದರ್ಶನದಿಂದ ನೆಮ್ಮದಿ.
ತುಲಾ: ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಕಲ ವಿಧದ ಲಾಭ. ಪಾಂಡಿತ್ಯ ಸುಖಾದಿಗಳು ವೃದ್ಧಿ. ಸ್ತ್ರೀ ಪುರುಷರಿಗೆ ಪರಸ್ಪರರ ಸಹಕಾರ. ಉತ್ತಮ ಧನ ಸಂಚಯನ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಗೃಹದಲ್ಲಿ ಚರ್ಚೆಗೆ ಅವಕಾಶ ನೀಡದಿರಿ.
ವೃಶ್ಚಿಕ: ಆರೋಗ್ಯ ವೃದ್ಧಿ . ಅನಿರೀಕ್ಷಿತ ಸ್ಥಾನ ಸುಖಾದಿ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಗಣನೀಯ ಮುನ್ನಡೆ. ಹಿರಿಯ ಅಧಿಕಾರಿಗಳ ಸಹಕಾರ ಪ್ರೋತ್ಸಾಹಾದಿ ಲಾಭ. ಮಾನಸಿಕ ನೆಮ್ಮದಿ. ನೂತನ ಮಿತ್ರರ ಸಮಾಗಮ.
ಧನು: ಉತ್ತಮ ದೈಹಿಕ, ಮಾನಸಿಕ ಆರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ ವಿವೇಕತೆ, ಶ್ರಮ ಅಭಿವೃದ್ಧಿ . ಧನಾರ್ಜನೆಗೆ ಕೊರತೆ ಕಾಣದು. ಪಾಲುದಾರರಲ್ಲಿ ಸಾಮರಸ್ಯಕ್ಕೆ ಆದ್ಯತೆ ನೀಡಿ. ವಿದ್ಯಾರ್ಥಿ ಗಳಿಗೆ ಸಣ್ಣ ಪ್ರಯಾಣ ಸಂಭವ.
ಮಕರ: ಧೈರ್ಯ ಪರಾಕ್ರಮ ಸ್ಥಿರ ಬುದ್ಧಿಯಿಂದ ಕೂಡಿದ ಕಾರ್ಯ ವೈಖರಿ. ಬಂಧುಮಿತ್ರರ ಸಹಕಾರ. ಹಣಕಾಸಿನ ವಿಚಾರದಲ್ಲಿ ಏರಿಳಿತವಾದರೂ ಲಾಭಾಂಶ ವೃದ್ಧಿ. ಪರಊರ ಸಹೋದ್ಯೋಗಿಗಳಿಂದ ಸಹಕಾರ ವೃದ್ಧಿ. ಮಕ್ಕಳಿಂದ ಸಂತೋಷ.
ಕುಂಭ: ನೂತನ ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸ್ಥಾನ ಲಾಭ. ಅಧಿಕ ಧನ ಲಾಭ. ಸಾಂಸಾರಿಕ ಸುಖ ತೃಪ್ತಿದಾಯಕ. ಧಾರ್ಮಿಕ ಸ್ಥಳಗಳ ಸಂದರ್ಶನ. ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯಗಳ ಲಾಭ.
ಮೀನ: ಆರೋಗ್ಯ ವೃದ್ಧಿ. ದೈನಂದಿನ ಉದ್ಯೋಗ ವ್ಯವಹಾರಗಳಲ್ಲಿ ಸುದೃಢತೆ. ಸ್ಥಾನ ಗೌರವ ವೃದ್ಧಿ. ಪಾಲುದಾರಿಕಾ ವ್ಯವಹಾರಗಳಲ್ಲಿ ತಾಳ್ಮೆ ಸಹನೆ ಅಗತ್ಯ. ದೀರ್ಘ ಪ್ರಯಾಣ ಸಂಭವ. ಉತ್ತಮ ಧನಾರ್ಜನೆ. ಸಾಂಸಾರಿಕವಾಗಿ ನೆಮ್ಮದಿಯ ದಿನ. ವಿದ್ಯಾರ್ಥಿಗಳು ಅಭ್ಯಾಸದ ಬಗ್ಗೆ ಗಮನಹರಿಸಿ. ಹಿರಿಯರ ಆರೋಗ್ಯ ಗಮನಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.