53 ಲಕ್ಷದ ಪುರಸಭೆ ಉಳಿತಾಯ ಬಜೆಟ್‌


Team Udayavani, Mar 25, 2023, 2:38 PM IST

tdy-14

ದೇವನಹಳ್ಳಿ: ದೇವನಹಳ್ಳಿ ಪುರಸಭೆಯ 2023-24ನೇ ಸಾಲಿನ 39ಕೋಟಿ 57ಲಕ್ಷ 32ಸಾವಿರ ರೂ.ಗಳ ವಿವಿಧ ವೆಚ್ಚಗಳ ಆಯವ್ಯಯವನ್ನು ಪಟ್ಟಣದ ಪುರಸಭಾ ಕಾರ್ಯಾಲಯದಲ್ಲಿ ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ನೀಲೇರಿ ಮಂಜುನಾಥ್‌ ಮಂಡಿಸಿದರು.

2023-24ನೇ ಸಾಲಿನ ಉಳಿಕೆ 53ಲಕ್ಷ ಉಳಿಕೆ. ಪ್ರಾರಂಭಿಕ ಅನುದಾನ 10ಕೋಟಿ 25ಲಕ್ಷ 23ಸಾವಿರ ರೂ. ನಿರೀಕ್ಷಿತ ಪಾವತಿಗಳು 12ಕೋಟಿ 62ಲಕ್ಷ. ಬಜೆಟ್‌ ಮಂಡಿಸಲಾಗಿದೆ. 2022-23ನೇ ಸಾಲಿನ ಆಯ-ವ್ಯಯದ ವಿಶೇಷ ಯೋಜನೆಗಳು ಪೌರಕಾರ್ಮಿಕರಾಗಿ ವಿಶೇಷ ಸೌಲಭ್ಯಗಳು: ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮುಂದುವರೆಸುವುದು. ಹಾಗೂ ಪೌಷ್ಟಿಕತೆಯ ದೃಷ್ಟಿಯಿಂದ ಮೊಟ್ಟೆ ನೀಡುವುದು. ಮೂರು ತಿಂಗಳಿಗೊಮ್ಮೆ ಕಡ್ಡಾಯ ವೈದ್ಯಕೀಯ ತಪಾಸಣೆ, ಕಾಯಂ ಮತ್ತು ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಜೀವ ವಿಮೆ ಸೌಲಭ್ಯ, ಪೌರಕಾರ್ಮಿಕರಿಗೆ ಕೋವಿಡ್‌ ಮುನ್ನೆಚ್ಚರಿಕಾ ಕ್ರಮವಾಗಿ ರûಾ ಕವಚಗಳನ್ನು ಒದಗಿ ಸುವುದು, ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡುವುದು, ಪೌರಕಾರ್ಮಿಕರು ಮತ್ತು ಅವರ ಅವಲಂಬಿತ ಕುಟುಂಬಗಳಿಗೆ ವೈದ್ಯಕೀಯ ಸಹಾಯಧನ ಒದಗಿಸುವುದು.

ನಾಗರಿಕರಿಗೆ ವಿಶೇಷ ಸೌಲಭ್ಯಗಳು: ಪಟ್ಟಣದ ಪ್ರಮುಖ ಬಿ.ಬಿ.ರಸ್ತೆಗೆ ಫ‌ುಟ್‌ಪಾತ್‌ ನಿರ್ಮಾಣ, ಪಾರ್ಕಿಂಗ್‌ ವ್ಯವಸ್ಥೆಗಳನ್ನೊಳಗೊಂಡಂತೆ ಸಮಗ್ರ ಅಭಿ ವೃದ್ಧಿಪಡಿಸುವುದು,(ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ಅನುದಾನ ಸರ್ಕಾರದ ಅನುಮೋದನೆ ಪಡೆದು) ನಾಗರಿಕರ ಆರೋಗ್ಯ ಹಿತದೃಷ್ಟಿಯಿಂದ ದೇವನಹಳ್ಳಿ ಪಟ್ಟಣದ ಪ್ರಮುಖ ಉದ್ಯಾನವನ ಗಳಲ್ಲಿ ವ್ಯಾಯಾಮ ಸಲಕರಣೆಗಳು ಅಳವಡಿಸಲಾಗುವುದು, ಜನಸಂದಣಿ ಮತ್ತು ಅಪಘಾತ ವಲಯಗಳಲ್ಲಿ ಸಿಸಿ ಟೀವಿ ಕ್ಯಾಮೆರಾಗಳನ್ನು ಅಳವಡಿಸಿ ಪೋಲಿಸ್‌ ಇಲಾಖೆಗೆ ಹಸ್ತಾಂತರಿಸುವುದು, ಘನತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿ ಸುವುದು, ಜನಸಂದಣಿ ಇರುವ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವುದು,ಸಿಹಿನೀರು ಕೆರೆ ಏರಿ ಮೇಲೆ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣ ಮತ್ತು ಕೆರೆ ಸುತ್ತಾ-ಮುತ್ತಾ ವ್ಯಾಯಾಮ ಸಲಕರಣೆ ಹಾಗೂಮಕ್ಕಳ ಆಟಿಕೆಗಳನ್ನು ಅಳವಡಿಸಿ ಅಭಿವೃದ್ಧಿಪಡಿಸುವುದು, ಪಟ್ಟಣದಲ್ಲಿರುವ ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳ ಉನ್ನತ್ತೀಕರಣಗೊಳಿಸುವುದು, ಪಟ್ಟಣದ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಹಾಗೂ ಲಘುವಾಹನ ಚಾಲನ ತರಬೇತಿಗೆ ಸಹಾಯಧನ ನೀಡುವುದು, ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು ನೀಡುವುದು, ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕ್ಯಾನ್ಸರ್‌ ರೋಗಿಗಳಿಗೆ ಸಹಾಯಧನ ವಿತರಿಸುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಇತರೆ ಬಡಜನರ ನೀರಿನ ತೆರಿಗೆಯನ್ನು ಪುರಸಭಾ ವತಿಯಿಂದಲೇ ಪಾವತಿಸುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಇತರೆ ಬಡಜನರವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಾವತಿಸುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಇತರೆ ಬಡಜನರ ಎಂಬಿಬಿಎಸ್‌ ಮತ್ತು ಬಿಇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಗಣಕಯಂತ್ರ ವಿತರಣೆ. ದೇವನಹಳ್ಳಿ ಪುರಸಭಾ ವ್ಯಾಪ್ತಿಯ ಬೀದಿ ನಾಯಿಗಳ ಹಾವಳಿಯನ್ನು ನಿವಾರಿಸುವ ಸಲುವಾಗಿ ಅವುಗಳ ಸಂತಾನ ಹರಣಕ್ಕೆ ಕ್ರಮವಹಿಸುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಇತರೆ ಬಡಜನರಿಗೆ ಪಕ್ಕಾಮನೆ ನಿರ್ಮಾಣ/ದುರಸ್ಥಿಗೆ ರೂ.50000/- ಸಹಾಯಧನ ವಿತರಿಸುವುದು.

ಆಯವ್ಯಯ ಘೋಷಣೆ: ಪ್ರಾರಂಭಿಕ ಅನುದಾನ 10ಕೋಟಿ 25ಲಕ್ಷ, ಜಮೆಗಳು 29ಕೋಟಿ 85ಲಕ್ಷ, ಒಟ್ಟು ಲಭ್ಯವಾಗುವ ಮೊತ್ತ 40ಕೋಟಿ 10ಲಕ್ಷ, ಪಾವತಿಗಳು 39ಕೋಟಿ 57ಲಕ್ಷ, ಉಳಿಕೆ 53ಲಕ್ಷ

ಜಮೆಗಳ ವಿವರಗಳು: ಪ್ರಾರಂಭಿಕ ಅನುದಾನ 10ಕೋಟಿ 25ಲಕ್ಷ ಸಾಮಾನ್ಯ ನಿಯ ಆದಾಯ 3ಕೋಟಿ79ಲಕ್ಷ ,ನೀರಿನ ನಿ ಯ ಆದಾಯ 18ಲಕ್ಷ 50ಸಾವಿರ, ಉದ್ಯಮ ನಿಯ ಆದಾಯ 20ಲಕ್ಷ, ರಾಜ್ಯ ಸರ್ಕಾರದ ಅನುದಾನ 12ಕೋಟಿ 43ಲಕ್ಷ, ಕೇಂದ್ರಸರ್ಕಾರದ ಅನುದಾನ 2ಕೋಟಿ 97ಲಕ್ಷ, ನಿರೀಕ್ಷಿತ ಜಮೆಗಳು 10ಕೋಟಿ 26ಲಕ್ಷ ಒಟ್ಟು 40ಕೋಟಿ 10ಲಕ್ಷ 32ಸಾವಿರ.

ಪಾವತಿಗಳ ವಿವರಗಳು: ಕಚೇರಿ ವೇತನ ಮತ್ತು ನಿರ್ವಹಣೆ ವೆಚ್ಚ 2ಕೋಟಿ 73ಲಕ್ಷ, ಆಡಳಿತ ಮಂಡಳಿಯ ವೆಚ್ಚ 31ಲಕ್ಷ 50ಸಾವಿರ, ಪ.ಜಾ ಮತ್ತು ಪ.ಪಂ 49ಲಕ್ಷದ 10ಸಾವಿರ ಮತ್ತು ಇತರೆ ಬಡವರ್ಗ ಕಲ್ಯಾಣ ನಿ ಧಿಗಳ ವೆಚ್ಚ 25ಲಕ್ಷ 61ಸಾವಿರ. ಬೀದಿ ದೀಪ ಅಳವಡಿಕೆ ಮತ್ತು ನಿರ್ವಹಣೆ ವೆಚ್ಚ 2ಕೋಟಿ 7ಲಕ್ಷ, ನೀರು ಸರಬರಾಜು ಕಾಮಗಾರಿ ಮತ್ತು ನಿರ್ವ ಹಣೆ ವೆಚ್ಚ 6ಕೋಟಿ 34ಲಕ್ಷ, ಆರೋಗ್ಯ ವಿಭಾಗ ಮತ್ತು ಘನತ್ಯಾಜ್ಯ ನಿರ್ವಹಣೆ ವೆಚ್ಚ 5ಕೋಟಿ 39ಲಕ್ಷ, ಪುರಸಭಾ ಸದಸ್ಯ ಜಿ.ಎರವೀಂದ್ರ ಮಾತನಾಡಿ, ಶವಸಂಸ್ಕಾರಕ್ಕೆ ಹೆಚ್ಚಿನ ಅನುದಾನವನ್ನು ಇಡಬೇಕು. 20/30 ಅಂತರದ ನಿವೇಶನದಲ್ಲಿ ಮನೆ ಕಟ್ಟಿದ ಬಡವರಿಗೆ ನೀರಿನ ತೆರಿಗೆಯನ್ನು ಪುರಸಭಾ ನಿಧಿಯಿಂದ ನೀಡಬೇಕು. ಜನರಿಗೆ ಬಜೆಟ ನ ಎಲ್ಲಾ ಅಂಶಗಳು ಜಾರಿಯಾಗಬೇಕು ಎಂದರು.

ಪುರಸಭಾ ಸದಸ್ಯ ಚೈತ್ರ ಮಾತನಾಡಿ, 19ನೇ ವಾರ್ಡ್ ನಲ್ಲಿ ರಾಜಕಾಲುವೆ ಸ್ವತ್ಛಗೊಳಿಸಬೇಕು. ಕೂಡಲೆ ಕಾಮಗಾರಿಗಳು ಆಗಬೇಕು ಎಂದು ಹೇಳಿದರು. ಪುರಸಭಾ ಸದಸ್ಯ ಜಿ.ಸುರೇಶ ಮಾತನಾಡಿ, ಯಾವುದೇ ಕೆಲಸಗಳು ವಾರ್ಡ್‌ಗಳಲ್ಲಿ ಆಗುವಾಗ ಸದಸ್ಯರ ಗಮನಕ್ಕೆ ತರಬೇಕು. ಸದಸ್ಯರ ಗಮನಕ್ಕೆ ಬರದೆ ಕಾಮಗಾರಿಗಳನ್ನು ಮಾಡಬಾರದು. ಅದಕ್ಕಾಗಿ ನಡೆಯುತ್ತಿರುವ ಕಾಮಗಾರಿಯನ್ನು ನಿಲ್ಲಿಸಿದ್ದೇನೆ. 17ನೇ ವಾರ್ಡಿನಲ್ಲಿ ಪೈಪ್‌ಲೈನ್‌ ಕಾಮಗಾರಿ ಆಗಬೇಕು ಎಂದು ಸಭೆಯ ಗಮನಕ್ಕೆ ತಂದರು.

ಈ ವೇಳೆಯಲ್ಲಿ ಪುರಸಭಾ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ ಶ್ರೀಧರ್‌, ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ ಹಾಗೂ ಪುರಸಭಾ ಸದಸ್ಯರು, ಹಾಗೂ ನಾಮಿನಿ ಪುರಸಭಾ ಸದಸ್ಯರು ಇದ್ದರು.

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

13

Bangalore: ಶಾಸಕ ಶಾಮನೂರು ಹೆಸರಿನಲ್ಲಿ ವಂಚನೆ: ಇಬ್ಬರ ಸೆರೆ

Untitled-5

Bangalore: ಇಬ್ಬರು ಮಕ್ಕಳನ್ನು ಕೊಂದ ಮಲತಂದೆಯ ಬಂಧನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.