ಇಂಟೆಲ್ ಸಹ ಸಂಸ್ಥಾಪಕ ಗಾರ್ಡನ್ ಮೂರ್ ನಿಧನ
Team Udayavani, Mar 25, 2023, 7:30 PM IST
ಸ್ಯಾನ್‌ಫ್ರಾನ್ಸಿಸ್ಕೋ: ಆಧುನಿಕ ಕಂಪ್ಯೂಟಿಂಗ್ ಸಾಧನಗಳ ಅಭಿವೃದ್ಧಿಯ ಹಿಂದಿನ ಪ್ರೇರಕ ಶಕ್ತಿಯಾಗಿದ್ದ ಇಂಟೆಲ್‌ನ ಸಹ ಸಂಸ್ಥಾಪಕ ಗಾರ್ಡನ್ ಮೂರ್ (94) ನಿಧನರಾಗಿದ್ದಾರೆ.
ಮಾರ್ಚ್ 24 ರಂದು ವಯೋಸಹಜ ಸಮಸ್ಯೆಯಿಂದ ಹವಾಯಿಯಲ್ಲಿರುವ ಅವರ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ.
ಕಂಪ್ಯೂಟರ್ ವಿಜ್ಞಾನ ಜಗತ್ತಿನ ದಾರ್ಶನಿಕ, ಸೆಮಿಕಂಡಕ್ಟರ್ ಚಿಪ್ ಉದ್ಯಮ ಪ್ರವರ್ತಕರಾಗಿ ಆಧುನಿಕ ತಂತ್ರಜ್ಞಾನ ಕ್ಷೇತ್ರದ ಹಾದಿ ಸುಗಮಗೊಳಿಸಿದ್ದ ಹೆಗ್ಗಳಿಕೆ ಇವರದ್ದಾಗಿತ್ತು.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಇಂಟೆಲ್ ಕಂಪನಿಯನ್ನು ರಾಬರ್ಟ್ ನಾಯ್ಸ ಜತೆಗೂಡಿ 1968ರಲ್ಲಿ ಸ್ಥಾಪಿಸಿದ್ದರು. ಆ ಸಂದರ್ಭದಲ್ಲಿ ಅದರ ಹೆಸರು ಎನ್.ಎಂ.ಇಲೆಕ್ಟ್ರಾನಿಕ್ಸ್ ಎಂದು ಇತ್ತು.
ಮೂರ್ ಸಿಲಿಕಾನ್ ವ್ಯಾಲಿಯಲ್ಲಿ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಮೂರ್ ನಿಧನಕ್ಕೆ ಆಪಲ್ ಟಿಮ್ ಕುಕ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ನೆನೆದು ಟ್ವೀಟ್ ಮಾಡಿದ್ದಾರೆ.
ಮೂರ್ ಅವರನ್ನು ನೆನಪಿಸಿಕೊಳ್ಳುತ್ತಾ, ಟಿಮ್ ಕುಕ್ ಟ್ವೀಟ್ ಮಾಡಿದ್ದು, “ಗಾರ್ಡನ್ ಮೂರ್‌ನಲ್ಲಿ ಜಗತ್ತು ಒಬ್ಬ ದೈತ್ಯನನ್ನು ಕಳೆದುಕೊಂಡಿತು, ಅವರು ಸಿಲಿಕಾನ್ ವ್ಯಾಲಿಯ ಸ್ಥಾಪಕ ಪಿತಾಮಹರಲ್ಲಿ ಒಬ್ಬರು ಮತ್ತು ತಾಂತ್ರಿಕ ಕ್ರಾಂತಿಗೆ ದಾರಿ ಮಾಡಿಕೊಡಲು ಸಹಾಯ ಮಾಡಿದ ನಿಜವಾದ ದಾರ್ಶನಿಕರಾಗಿದ್ದರು. ಅವರ ಮಾರ್ಗದರ್ಶನಕ್ಕೆ ನಾವೆಲ್ಲರೂ ಅವರಿಗೆ ಕೃತಜ್ಞತೆಯ ಋಣವನ್ನು ನೀಡಬೇಕಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.” ಎಂದು ಟ್ವೀಟ್ ಮಾಡಿದ್ದಾರೆ.
The world lost a giant in Gordon Moore, who was one of Silicon Valley’s founding fathers and a true visionary who helped pave the way for the technological revolution. All of us who followed owe him a debt of gratitude. May he rest in peace.
— Tim Cook (@tim_cook) March 25, 2023
ಇದನ್ನೂ ಓದಿ: ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ
RIP Gordon Moore. His vision inspired so many of us to pursue technology, was an inspiration to me. Thoughts with his family and everyone at Intel https://t.co/8bzKDJ8l79
— Sundar Pichai (@sundarpichai) March 25, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.