ಕುಷ್ಟಗಿ: ಚುನಾವಣೆ; ದಾಖಲೆ ರಹಿತ 2.50 ಲಕ್ಷ ರೂ ನಗದು ಪತ್ತೆ, ಸ್ಕಾರ್ಪಿಯೋ ವಶ
Team Udayavani, Mar 26, 2023, 10:47 AM IST
ಕುಷ್ಟಗಿ: ಮಹಾರಾಷ್ಟ್ರ ಅಹ್ಮದ ನಗರದಿಂದ ಕೋಲಾರ ಜಿಲ್ಲೆಗೆ ಸಂಚರಿಸುತ್ತಿದ್ದ ವಾಹನವನ್ನು ಶನಿವಾರ ಸಂಜೆ ಪೊಲೀಸರು ತಡೆದು ಪರಿಶೀಲಿಸಿ, ದಾಖಲೆ ರಹಿತ 2.50 ಲಕ್ಷ ರೂ ನಗದು ಪತ್ತೆಯಾದ ಪ್ರಕರಣ ಕ್ಯಾದಿಗುಪ್ಪ ಹೆದ್ದಾರಿ ಚೆಕ್ ಪೋಸ್ಟ್ ನಲ್ಲಿ ಬೆಳಕಿಗೆ ಬಂದಿದೆ.
ಮಹೇಂದ್ರ ಸ್ಕಾರ್ಪಿಯೋ ವಾಹನದಲ್ಲಿ 7 ಜನರು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಹೆದ್ದಾರಿ ಚೆಕ್ ಪೊಸ್ಟ್ ನಲ್ಲಿ ಪೊಲೀಸರು ತಡೆದು ವಾಹನದಲ್ಲಿದ್ದವರ ವಿಚಾರಣೆ ನಡೆಸಿದ್ದಾರೆ.
ಆಗ ಅನುಮಾನಗೊಂಡು ಪರಿಶೀಲಿಸಿದಾಗ ಸೀಟಿನ ಅಡಿಯಲ್ಲಿ 2.50 ಲಕ್ಷ ರೂ. ಹಣದ ಚೀಲ ಪತ್ತೆಯಾಗಿದೆ. ಈ ಹಣದ ಬಗ್ಗೆ ದಾಖಲಾತಿ ನೀಡದಿರುವುದು, ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡದೇ ಇರುವುದು 7 ಜನ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹೇಂದ್ರ ಸ್ಕಾರ್ಪಿಯೋ ವಶಕ್ಕೆ ತೆಗೆದುಕೊಂಡಿದ್ದಾರೆ.
ಸುದಾಮ್ ಪಂಡಿತ್, ಗಣೇಶ ಗೋಡ್ಕೆ, ಸತೀಶ್ ತಾಂಬೆ, ಭಾಗದತ್ತರಾವ್ ಡೋಬಿ,ಶರದ್ ಇರ್ಕಾರ್, ಮಾರುತಿ ಗೋಡ್ಕೆ, ಗ್ಯಾನೇಶ್ವರ ಡೋಭಿ ಈ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಆರೋಪಿಗಳು ಮಹಾರಾಷ್ಟ್ರ ರಾಜ್ಯದ ಅಹ್ಮದನಗರ ಜಿಲ್ಲೆಯವರಾಗಿದ್ದು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಗೆ ವ್ಯಾಪಾರಕ್ಕೆ ಹೊರಟಿದ್ದರು ಎಂದು ತಿಳಿಸಿದ್ದು ಯಾವ ವ್ಯಾಪಾರ ಎಂಬುದು ಸ್ಪಷ್ಟಪಡಿಸಿಲ್ಲ. ಈ ಆರೋಪಿಗಳು ಸೀಟಿನ ಅಡಿಯಲ್ಲಿ ಯಾಕೆ ಇಟ್ಟಿದ್ದರು ಅನುಮಾನಕ್ಕೆ ಎಡೆಮಾಡಿದೆ.
ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.