ಸ್ವಯಂ ಘೋಷಿತ ದೇವ ಮಾನವ ಕರೌಲಿ ಬಾಬಾರ ಒಂದು ಹವನಕ್ಕೆ 1.51 ಲ – 2.51 ಲಕ್ಷ ರೂ.!

"ಭಾರತ – ಪಾಕಿಸ್ತಾನ ನಡುವಿನ ಸಮಸ್ಯೆಯನ್ನು ಬಗೆಹರಿಸಬಲ್ಲೆ" ಎಂದ ಬಾಬಾ

Team Udayavani, Mar 26, 2023, 12:56 PM IST

ಸ್ವಯಂ ಘೋಷಿತ ದೇವ ಮಾನವ ಕರೌಲಿ ಬಾಬಾರ ಒಂದು ಹವನಕ್ಕೆ 1.51 ಲ – 2.51 ಲಕ್ಷ ರೂ.!

ಲಕ್ನೋ: ತನ್ನ ದೊಡ್ಡ ದೊಡ್ಡ ಹೇಳಿಕೆಗಳಿಂದ ಸುದ್ದಿಯಾಗಿರುವ ಉತ್ತರ ಪ್ರದೇಶದ ಕಾನ್ಪುರದ ಸ್ವಯಂ ಘೋಷಿತ ದೇವ ಮಾನವ ಕರೌಲಿ ಬಾಬಾ (ಸಂತೋಷ್ ಸಿಂಗ್ ಭಡೋರಿಯಾ – ನಿಜವಾದ ಹೆಸರು) ಹವನಗಳನ್ನು ಮಾಡಿಸಲು ನಿಗದಿಪಡಿಸಿರುವ ನೂತನ ಶುಲ್ಕಗಳು ಗಮನ ಸೆಳೆದಿದೆ.

ಇತ್ತೀಚೆಗಷ್ಟೇ ನೋಯ್ಡಾ ಮೂಲದ ವೈದ್ಯರೊಬ್ಬರು ಸ್ವಯಂ ಘೋಷಿತ ದೇವ ಮಾನವ ಕರೌಲಿ ಬಾಬಾ ವಿರುದ್ಧ ದೂರು ದಾಖಲಿಸಿದ್ದರು. ಬಾಬಾರ ಮಂತ್ರ ಪಠಣದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಕ್ಕೆ ಬಾಬಾರ ಬೆಂಬಲಿಗರು ನನಗೆ ಥಳಿಸಿದ್ದಾರೆ ಎಂದು ವೈದ್ಯ ಪೊಲೀಸ್‌ ಠಾಣೆಯಲ್ಲಿ ಕರೌಲಿ ಬಾಬಾನ ವಿರುದ್ಧ ದೂರು ದಾಖಲಿಸಿದ್ದರು.

ಇದಾದ ಬಳಿಕ ಕರೌಲಿ ಬಾಬಾ ಬೆಳಕಿಗೆ ಬಂದಿದ್ದರು. ರೋಗಗಳನ್ನು ಗುಣಪಡಿಸುವುದು, ದೊಡ್ಡ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಅವರ ಹವನ ಆಚರಣೆಗಳ ಮೂಲಕ ರಾಜಕೀಯ ವಿವಾದಗಳನ್ನು ಪರಿಹರಿಸುತ್ತೇನೆ ಎನ್ನುವ ಕರೌಲಿ ಬಾಬಾ ಇದೀಗ ತನ್ನ ಹವನದ ಶುಲ್ಕವನ್ನು ಬರೋಬ್ಬರಿ 1 ಲಕ್ಷ ರೂ. ಗೆ ಏರಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಪುಕ್ಕಲುತನದಿಂದ ವರುಣಾಗೆ ಬರುತ್ತಿದ್ದಾರೆ: ಪ್ರತಾಪ್ ಸಿಂಹ

ಬಾಬಾರ ಆಶ್ರಮದಲ್ಲಿ ಹವನ ಮಾಡಿಸಲು ಹೋಗುವಾಗ 3,500 ರೂ.ವಿನ ಕಿಟ್‌ ನೀಡಲಾಗುತ್ತದೆ. ಸಮಸ್ಯೆಯ ಪರಿಹಾರಕ್ಕಾಗಿ 31,500 ರೂ.ಗಳಿಗೆ ಕನಿಷ್ಠ ಒಂಬತ್ತು ಹವನಗಳು ಬೇಕಾಗುತ್ತವೆ ಅದನ್ನು ಪಾವತಿಸುವ ಭಕ್ತರಿಗೆ ಆಶ್ರಮದಲ್ಲಿ ಊಟ ಹಾಗೂ ವಾಸ್ತವ್ಯದ ವ್ಯವಸ್ಥೆಯೂ ಇರುತ್ತದೆ.

ಇದೀಗ ಬಾಬಾ ಬೆಳಕಿಗೆ ಬಂದ ಮೇಲೆ ಒಂದು ದಿನದ ಹವನ ಮಾಡಿಸುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅತ್ಯಂತ ಬ್ಯುಸಿಯಾಗಿರುವ ಭಕ್ತರಿಗೆ ಹವನ ಶೀಘ್ರದಲ್ಲಿ ಮಾಡಿಸಬೇಕಾದರೆ 1.51 ಲಕ್ಷದಿಂದ 2.51 ಲಕ್ಷ ರೂ.ವನ್ನು ಪಾವತಿಸಬೇಕು. ಈ ಹವನ ಕ್ರಮ ಏ. 1ರಿಂದ ಜಾರಿಗೆ ಬರಲಿದೆ ಎಂದು ಬಾಬಾ ಸಹಾಯಕ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಅವಧಿಯಲ್ಲಿ ಕೆಲಸ ಮಾಡಿದ್ದ ಯುಪಿಯ ಮಾಜಿ ಡಿಜಿಪಿ ನನ್ನ ಮೇಲೆ ಕೇಳಿ ಬಂದ ಎಲ್ಲಾ ಆರೋಪಗಳ ಹಿಂದೆ ಇದ್ದಾರೆ. ಅವರೇ ನನ್ನ ಆಶ್ರಮಕ್ಕೆ ವೈದ್ಯನನ್ನು ಕಳುಹಿಸಿ ನನ್ನ ಮೇಲೆ ಎಫ್‌ ಐಆರ್‌ ದಾಖಲಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಬಾಬಾ ಹೇಳಿದ್ದಾರೆ.

ಭಾರತ – ಪಾಕಿಸ್ತಾನ ನಡುವೆ ಇರುವ ಸಮಸ್ಯೆಯನ್ನು ರಾಜಕೀಯ ಪಕ್ಷಗಳು ಬಂದು ಕೇಳಿದರೆ ನಾನು ಪರಿಹರಿಸುತ್ತೇನೆ ಎಂದು ಹೇಳುವ ಬಾಬಾ, ಕೋವಿಡ್‌ ಸಂದರ್ಭದಲ್ಲಿ ನನ್ನ ಯಾವ ಭಕ್ತರೂ ಮೃತಪಟ್ಟಿಲ್ಲ ಎನ್ನುವುದನ್ನೂ ಹೇಳಿದ್ದಾರೆ.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.