ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಮುಖಂಡರು
Team Udayavani, Mar 26, 2023, 3:21 PM IST
ಚಿಂತಾಮಣಿ: ರಾಜ್ಯದ ರೈತರ ಬಗ್ಗೆ ಯೋಚನೆ ಮಾಡುವ ಏಕೈಕ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಬ್ಬರೆ. ಅವರ ಕೈ ಬಲಪಡಿಸಬೇಕಾದರೆ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಬೇಕು ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವಿಕುಮಾರ್ ತಿಳಿಸಿದರು.
ಚಿಂತಾಮಣಿ ತಾಲೂಕು ಚಿಲಕಲನೇರ್ಪು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಲ್ವಾವಧಿಯಲ್ಲಿ ಆಡಳಿತ ನಡೆಸಿ ರೈತರ ಸಾವಿರಾರು ಕೋಟಿ ರೂ. ಸಾಲಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬರೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿ ಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗುವುದು ಶತಸಿದ್ಧ ಎಂದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೂ ಕೂಡ ಶುಕ್ರದೆಸೆ ಬಂದು ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಆಗಲಿದೆ. ಚಿಲಕಲನೇರ್ಪು ಹೊಬಳಿಯಲ್ಲಿ ಹಣಕ್ಕೆ ಬೆಲೆ ಕೊಡದ ಸ್ವಾಭಿಮಾನಿ ಮತದರಾರರಿದ್ದು, ಈ ಬಾರಿಯಲ್ಲಿ ಚುನಾವಣೆಯಲ್ಲಿ ತನಗೆ ತಮ್ಮಲ್ಲರ ಅಮೂಲ್ಯವಾದ ಮತವನ್ನು ನೀಡಿ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಸೇರ್ಪಡೆ: ಚಿಲಕಲನೇರ್ಪು ಗ್ರಾಮದ ಆರ್.ಟಿ.ಪ್ರಸಾದ್, ಕೆ.ಆರ್ ರಾಜಾರಾಮ್, ಆಂಜನೇಯರೆಡ್ಡಿ, ಆಂಜಿ, ನಾರಾಯಣಸ್ವಾಮಿ ಸೇರಿದಂತೆ ಚಿಲಕಲ ನೇರ್ಪು, ಹೊಸಹುಡ್ಯ, ದ್ವಾರಪಲ್ಲಿ, ಮಿಂಚಲ ಹಳ್ಳಿ, ಕಟ್ಟಿಗೇನಹಳ್ಳಿ ವ್ಯಾಪ್ತಿಯ ಹಾಲಿ ಗ್ರಾಪಂ ಸದಸ್ಯರು, ಮಾಜಿ ಸದಸ್ಯರು, ನಿವೃತ್ತ ಅಧಿ ಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಜನರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಮೇಲೂರು ರವಿಕುಮಾರ್ ನೇತೃತ್ವದಲ್ಲಿ ಸೇರ್ಪಡೆಯಾದರು.
ಚಿಲಕಲನೇರ್ಪು ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಮಾಜಿ ಜಿಪಂ ಸದಸ್ಯ ಬಂಕ್ ಮುನಿಯಪ್ಪ, ನಂದನವನ ಶ್ರೀರಾಮರೆಡ್ಡಿ, ಕೆಂಚಾರ್ಲಹಳ್ಳಿ ಕೃಷ್ಣಾರೆಡ್ಡಿ, ಎಂ.ಎಸ್. ಶ್ರೀನಿವಾಸ್, ಬಿ.ವೆಂಕಟರಾಯರೆಡ್ಡಿ, ತಿಮ್ಮಸಂದ್ರ ಡಾ. ಶೆಫಿ, ತುಳವನೂರು ಬಿ. ರವಿ, ಮಾಜಿ ಗ್ರಾಪಂ ಅಧ್ಯಕ್ಷ ಆರ್.ಟಿ. ಪ್ರಸಾದ್, ಬ್ಯಾಂಕ್ ನಾರಾಯಣಪ್ಪ. ಮಾಜಿ ತಾಪಂ ಸದಸ್ಯ ಶೆಫಿವುಲ್ಲಾ, ಶ್ರೀನಾಥ ಬಾಬು, ಅನಿಲ್ ಕುಮಾರ್ ಹಾಗೂ ಮತಿತ್ತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.