ನ್ಯುರೊಬ್ಲಾಸ್ಟೊಮಾ ಉತ್ತಮ ಗುಣ ಕಾಣುವುದಕ್ಕೆ ಉತ್ತಮ ಚಿಕಿತ್ಸೆ ಅಗತ್ಯ


Team Udayavani, Mar 26, 2023, 3:43 PM IST

5-health

ನ್ಯುರೊಬ್ಲಾಸ್ಟೊಮಾ ಮಕ್ಕಳಲ್ಲಿ ಅತೀ ಸಾಮಾನ್ಯವಾಗಿ ಕಂಡುಬರುವ ಗಡ್ಡೆ, ಇದು ಮಿದುಳನ್ನು ಬಿಟ್ಟು ದೇಹದ ಇತರ ಭಾಗದಲ್ಲಿ ಉಂಟಾಗುತ್ತದೆ. ಮಕ್ಕಳಲ್ಲಿ ಉಂಟಾಗುವ ಕ್ಯಾನ್ಸರ್‌ ಪ್ರಕರಣಗಳ ಪೈಕಿ ಶೇ. 8ರಷ್ಟು ನ್ಯುರೊಬ್ಲಾಸ್ಟೊಮಾ ಆಗಿರುತ್ತವೆ.

ತಾಯಿಯ ಗರ್ಭದಲ್ಲಿ ಬೆಳವಣಿಗೆಯಾಗುವ ಸಂದರ್ಭದಲ್ಲಿ ಹಿಂದುಳಿದ ಜೀವಕೋಶಗಳಿಂದ ನ್ಯುರೊಬ್ಲಾಸ್ಟೊಮಾ ಉಂಟಾಗುತ್ತದೆ. ಇದು ತಲೆದೋರುವುದರಲ್ಲಿ ಪರಿಸರದ ಯಾವುದೇ ಪಾತ್ರ ಇಲ್ಲ. ಇದು ದೇಹದ ಯಾವುದೇ ಭಾಗದಲ್ಲಿ ತಲೆದೋರಬಹುದು. ಅತೀ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಅಂಗ ಎಂದರೆ ಎರಡು ಅಡ್ರಿನಾಲಿನ್‌ ಗ್ರಂಥಿಗಳಲ್ಲಿ ಒಂದು ಅಥವಾ ಕಶೇರುಕ ಕೊಳವೆಯ ಗುಂಟ ಸಾಗುವ ನರ ಅಂಗಾಂಶ, ಕುತ್ತಿಗೆ, ಎದೆ, ಹೊಟ್ಟೆ ಮತ್ತು ಅಸ್ಥಿ ಕುಹರ (ಪೆಲ್ವಿಸ್‌). ನ್ಯುರೊಬ್ಲಾಸ್ಟೊಮಾಗೆ ತುತ್ತಾದ ಬಹುತೇಕ ಮಕ್ಕಳಲ್ಲಿ ಇದು ಅಸ್ಥಿಮಜ್ಜೆ, ದುಗ್ಧರಸ ಗ್ರಂಥಿಗಳು, ಯಕೃತ್‌ ಮತ್ತು ಚರ್ಮದಂತಹ ಇತರ ಅಂಗಗಳಿಗೆ ಅದು ಹರಡಿರುತ್ತದೆ. ನ್ಯುರೊಬ್ಲಾಸ್ಟೊಮಾ ಪ್ರಕರಣಗಳಲ್ಲಿ ಮೂರನೇ ಎರಡರಷ್ಟು ಹೊಟ್ಟೆಯಲ್ಲಿ ಉಗಮವಾಗಿರುತ್ತವೆ.

ಪ್ರಾಥಮಿಕ ಗಡ್ಡೆ ಕಾಣಿಸಿಕೊಂಡ ಸ್ಥಳ, ಮೆಟಾಸ್ಟಾಟಿಕ್‌ ಕಾಯಿಲೆ ಮತ್ತು ಗಡ್ಡೆಯಿಂದಾಗಿ ಚಯಾಪಚಯ ಕ್ರಿಯೆಯಲ್ಲಿ ಆಗುವ ವ್ಯತ್ಯಯಗಳಿಂದಾಗಿ ಈ ಕ್ಯಾನ್ಸರ್‌ ಬಾಲ್ಯಕಾಲದ ಅನೇಕ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಲಕ್ಷಣಗಳನ್ನು ಅನುಕರಿಸುತ್ತದೆ. ಪದೇಪದೆ ಹೊಟ್ಟೆನೋವು, ಬೆಳವಣಿಗೆ ಹೊಂದುವಲ್ಲಿ ವಿಫ‌ಲವಾಗುವುದು, ಹೊಟ್ಟೆ ಉಬ್ಬಿಕೊಳ್ಳುವುದು, ಒಪೊÕಕ್ಲೊನಸ್‌ ಮತ್ತು ಮಯೊಕ್ಲೊನಸ್‌ನಂತಹ ನರಶಾಸ್ತ್ರೀಯ ತೊಂದರೆಗಳು, ಎಲುಬುಗಳಲ್ಲಿ ನೋವು, ರಕ್ತಹೀನತೆ, ಕಣ್ಣುಗಳು ಊದಿಕೊಳ್ಳುವುದು ಅಥವಾ ಅವುಗಳ ಗಾತ್ರ ಹಿಗ್ಗುವುದು, ಚರ್ಮದಲ್ಲಿ ದದ್ದುಗಳು ಉಂಟಾಗುವುದು, ರಕ್ತದೊತ್ತಡ ಹೆಚ್ಚಳ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಈ ಕ್ಯಾನ್ಸರ್‌ನ ಒಟ್ಟಾರೆ ನಿರ್ವಹಣೆಯು ಮಗುವಿನ ವಯಸ್ಸು, ಅದು ದೇಹದ ಇತರ ಭಾಗಗಳಿಗೆ ಹರಡಿದೆಯೇ, ನ್ಯುರೊಬ್ಲಾಸ್ಟೊಮಾ ಜೀವಕೋಶಗಳು ಎನ್‌-ಎಂವೈಸಿ ಎಂಬ ನಿರ್ದಿಷ್ಟ ವಂಶವಾಹಿಯ ವರ್ಧನೆಯನ್ನು ಪ್ರದರ್ಶಿಸುತ್ತಿವೆಯೇ ಎಂಬುದನ್ನು ಅವಲಂಬಿಸಿವೆ. ಕಡಿಮೆ ಅಪಾಯದ ನ್ಯುರೊಬ್ಲಾಸ್ಟೊಮಾ (ಸಣ್ಣ ಮಕ್ಕಳಲ್ಲಿ ಕಾಣಿಸಿಕೊಳ್ಳುವಂಥದ್ದು) ಹೊಂದಿರುವ ಮಕ್ಕಳು ಚಿಕಿತ್ಸೆಗೆ ಹೆಚ್ಚು ಚೆನ್ನಾಗಿ ಪ್ರತಿಸ್ಪಂದಿಸುತ್ತಾರೆ ಮತ್ತು ಒಟ್ಟಾರೆಯಾಗಿ ಬದುಕುಳಿಯುವ ಪ್ರಮಾಣ ಶೇ. 95ಕ್ಕಿಂತ ಹೆಚ್ಚಿರುತ್ತದೆ. ಆದರೆ ಹೆಚ್ಚು ಅಪಾಯದ ನ್ಯುರೊಬ್ಲಾಸ್ಟೊಮಾಕ್ಕೆ ತುತ್ತಾಗಿರುವ ಮಕ್ಕಳು ಉತ್ತಮ ಫ‌ಲಿತಾಂಶ ಕಾಣುವುದಿಲ್ಲ. ಈ ಮಕ್ಕಳಿಗೆ ತೀವ್ರ ಕಿಮೊಥೆರಪಿ, ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ ಮತ್ತು ಡಿಫ‌ರೆನ್ಶಿಯೇಶನ್‌ ಥೆರಪಿ ಒದಗಿಸಲಾಗುತ್ತದೆ. ನ್ಯುರೊಬ್ಲಾಸ್ಟೊಮಾಕ್ಕೆ ಇಮ್ಯುನೊಥೆರಪಿ ಒಂದು ಉತ್ತಮ ಚಿಕಿತ್ಸಾ ವಿಧಾನವಾಗಿದ್ದರೂ ಭಾರತದಲ್ಲಿ ಇದು ಮುಕ್ತವಾಗಿ ಲಭ್ಯವಾಗುತ್ತಿಲ್ಲ; ಆದರೆ ಯುರೋಪ್‌ ಮತ್ತು ಅಮೆರಿಕದಲ್ಲಿ ಕಳೆದ 8-10 ವರ್ಷಗಳಿಂದೀಚೆಗೆ ಇದು ಲಭ್ಯವಿದೆ. ಈ ಕ್ಯಾನ್ಸರ್‌ ಏಕೆ ಉಂಟಾಗುತ್ತದೆ ಮತ್ತು ಅದಕ್ಕೆ ಚಿಕಿತ್ಸೆಯ ಬಗ್ಗೆ ತೀವ್ರ ತರಹದ ಸಂಶೋಧನೆಗಳು ನಡೆಯುತ್ತಿದ್ದರೂ ಕಳೆದ ಒಂದು ದಶಕದಲ್ಲಿ ಹೆಚ್ಚು ಪ್ರಗತಿ ಸಾಧನೆ ಆಗಿಲ್ಲ.

ಮಂಗಳೂರಿನಲ್ಲಿ ಪ್ರತೀ ವರ್ಷ 10-12 ನ್ಯುರೊಬ್ಲಾಸ್ಟೊಮಾ ಪ್ರಕರಣಗಳನ್ನು ನಾವು ಕಾಣುತ್ತಿದ್ದೇವೆ. ಈ ಕ್ಯಾನ್ಸರ್‌ಗೆ ತುತ್ತಾಗುವ ಮಕ್ಕಳಲ್ಲಿ ಹೆಚ್ಚಿನವರು 5 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು (ಶೇ. 90). ಇವರಲ್ಲಿ ಶೇ. 80ಕ್ಕಿಂತ ಹೆಚ್ಚು ಮಂದಿ ಮಕ್ಕಳು ಮುಂದುವರಿದ ಹಂತಗಳಲ್ಲಿ ಆಸ್ಪತ್ರೆಗೆ ಬಂದಿರುತ್ತಾರೆ. ಅಂದರೆ ಕ್ಯಾನ್ಸರ್‌ ಅವರ ದೇಹದ ಇತರ ಭಾಗಗಳಿಗೆ ಹರಡಿರುತ್ತದೆ. ಹೆಚ್ಚು ಅಪಾಯದ ನ್ಯುರೊಬ್ಲಾಸ್ಟೊಮಾಕ್ಕೆ ತುತ್ತಾಗಿರುವ ಈ ಮಕ್ಕಳು ಆರಂಭದಲ್ಲಿ ಚಿಕಿತ್ಸೆಗೆ ಚೆನ್ನಾಗಿ ಪ್ರತಿಕ್ರಿಯಿಸುತ್ತಾರೆ; ಆದರೆ ಮೂರನೇ ಎರಡರಷ್ಟಕ್ಕೂ ಹೆಚ್ಚು ಮಕ್ಕಳಲ್ಲಿ ಚಿಕಿತ್ಸೆ ಪೂರ್ಣವಾದ 2 ವರ್ಷಗಳ ಒಳಗೆ ಕ್ಯಾನ್ಸರ್‌ ಮರುಕಳಿಸುತ್ತದೆ. ಅಲಭ್ಯತೆಯಿಂದಾಗಿ ನಮ್ಮ ರೋಗಿಗಳಲ್ಲಿ ಯಾರಿಗೂ ಇಮ್ಯುನೊಥೆರಪಿಯನ್ನು ನೀಡಲು ಸಾಧ್ಯವಾಗಿಲ್ಲ.

ಹೆಚ್ಚು ಅಪಾಯದ ನ್ಯುರೊಬ್ಲಾಸ್ಟೊಮಾಕ್ಕೆ ತುತ್ತಾಗಿರುವ ಮಕ್ಕಳಿಗೆ ಹೆಚ್ಚು ಉತ್ತಮ ಚಿಕಿತ್ಸೆಯನ್ನು ಒದಗಿಸಿ ಉತ್ತಮ ಗುಣ ಕಾಣುವ ನಿಟ್ಟಿನಲ್ಲಿ ನಾವು ಬೇರೆಯದೇ ಚಿಕಿತ್ಸಾ ಕಾರ್ಯತಂತ್ರವನ್ನು ಹೊಂದಬೇಕಾಗಿದೆ ಮತ್ತು ಇದನ್ನು ಕಂಡುಕೊಳ್ಳಲು ಹೆಚ್ಚು ಚಿಕಿತ್ಸಾ ಪ್ರಯೋಗಗಳು ನಡೆಯಬೇಕಾಗಿವೆ.

ಡಾ| ಹರ್ಷಪ್ರಸಾದ ಎಲ್‌.,

ಕನ್ಸಲ್ಟಂಟ್‌ ಪೀಡಿಯಾಟ್ರಿಕ್‌ ಹೆಮಟಾಲಜಿಸ್ಟ್‌ ಮತ್ತು ಓಂಕಾಲಜಿಸ್ಟ್‌,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ಸರ್ಕಲ್‌, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓಂಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

 

ಟಾಪ್ ನ್ಯೂಸ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-health

Mother: ತಾಯಂದಿರ ಮಾನಸಿಕ ಆರೋಗ್ಯ

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

4–Lupus-Nephritis

Lupus Nephritis: ಲೂಪಸ್‌ ನೆಫ್ರೈಟಿಸ್‌: ರೋಗಿಗಳಿಗೆ ಒಂದು ಮಾರ್ಗದರ್ಶಿ

3

Mental health: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.