ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ
Team Udayavani, Mar 26, 2023, 6:14 PM IST
ಕೊರಟಗೆರೆ : ರಾಜ್ಯ ಸರ್ಕಾರದಿಂದ ಸದಾಶಿವ ಆಯೋಗದ ವರದಿಯ ಒಳಮೀಸಲಾತಿ ಹೆಚ್ಚಳ ವಿಚಾರವನ್ನು ನಾನು ಸ್ವಾಗತಿಸಿದರೂ ಕೂಡ ಇದು ಚುನಾವಣಾ ಗಿಮಿಕ್ ಆಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು.
ಅವರು ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಒಳ ಮೀಸಲಾತಿ ಬೇಡಿಕೆ ನಮ್ಮ ಆಗಿನ ಸಮ್ಮಿಶ್ರ ಸರ್ಕಾರದ ಆರಂಭದಲ್ಲೂ ಇತ್ತು, ಒಳಮೀಸಲಾತಿ ಸದಾಶಿವ ಆಯೋಗದ ವರದಿ ಸರ್ಕಾರದಲ್ಲಿ ಇದ್ದದ್ದು ನಿಜ ಆದರೆ ನಾಲ್ಕು ವರ್ಷಗಳು ತೆಗೆದುಕೊಳ್ಳದ ತೀರ್ಮಾನ ರಾಜ್ಯ ಸರ್ಕಾರ ಕೊನೆ ಕ್ಯಾಬಿನೆಟ್‌ನಲ್ಲಿ ತೆಗೆದುಕೊಳ್ಳೋದು ಇದು ಏನು ಎಂಬ ಪ್ರಶ್ನೆ ಉದ್ಬವವಾಗುತ್ತದೆ, ಅಂದರೇ ಇದು ಮಾಡಿದಂಗೂ ಇರಬೇಕು ಹಾಗೂ ಆಗದಂಗೂ ಇರಬೇಕು ಇದು ಚುನಾವಣಾ ಗಿಮಿಕ್ ಎಂದು ತಿಳಿಸಿದ ಅವರು ಇದನ್ನು ಕಾನೂನಾತ್ಮಕವಾಗಿ ನೋಡೊದಾದ್ರೇ ಒಳಮೀಸಲಾತಿಯನ್ನು ಯಾವ ರೀತಿ ಸಮರ್ಥನೆ ಮಾಡಿಕೊಳ್ತಾರೆ ಗೊತ್ತಿಲ್ಲಾ ಇದು ಮುಂದೆ ಬರೋ ದಿನಗಳಲ್ಲಿ ತಿರ್ಮಾನ ಆಗುತ್ತೇ ಎಂದು ತಿಳಿಸಿದರು.
ಕಾಂಗ್ರೆಸ್ ಆಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಊಹಾಪೋಹಕ್ಕೆ ತೆರೆ ;-
ನನಗೂ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮೊದಲ ಪಟ್ಟಿಯಲ್ಲೇ ಘೋಷಣೆ ಮಾಡಿದ್ದು ಬಹಳ ಜನರಿಗೆ ಡಾ.ಜಿ.ಪರಮೇಶ್ವರ ಕೊರಟಗೆರೆ ವಿಧಾನ ಸಭಾ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗ್ತಾರೆ ಎಂಬ ಊಹಾ ಪೋಹಗಳಿಗೆ ತೆರೆ ಬಿದ್ದಿದೆ. ನಾನು ಮೊದಲಿನಿಂದಲೂ ಕೊರಟಗೆರೆ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡು ಬಂದಿದ್ದೆ ಆದರೂ ಬಹಳ ಜನಕ್ಕೆ ಅನುಮಾನ ಇತ್ತು, ಬೆಂಗಳೂರಿಗೆ ಬನ್ನಿ ಅಂತಾ ಪ್ರಕಟಣೆ ಮಾಡ್ತಿದ್ರು ಇವತ್ತು ಅದಕ್ಕೆ ತೆರೆಬಿದ್ದಿದೆ ಎಂದರು. ಮೊದಲ ಪಟ್ಟಿಯಲ್ಲಿ ೧೨೪ ಕ್ಷೇತ್ರಗಳ ಸೀಟ್‌ಗಳನ್ನು ಅನೌನ್ಸ್ ಆಗಿದೆ ಇನ್ನು ೧೦೦ ಕ್ಷೇತ್ರಗಳು ಉಳಿದಿವೆ, ಅದನ್ನು ಕೊಡಲೆ ಅದಷ್ಟು ಶೀಘ್ರದಲ್ಲಿ ಅನೌನ್ಸ್ ಮಾಡ್ತಾರೆ ಎಂದು ಅಂದುಕೊಂಡಿದ್ದೀನಿ, ಕಾಂಗ್ರೆಸ್ ಪಕ್ಷದ ಸರ್ಕಾರ ಮಾಡೋದಕ್ಕೆ ಅನುಕೂಲಕರ ವಾತಾವರಣ ಸೃಷ್ಠಿಯಾಗುತ್ತೆ ಅನ್ನೊದು ಈ ಪಟ್ಟಿ ನೋಡಿದ್ಮೇಲೆ ಅನಿಸಿದೆ, ಕೆಲವರಿಗೆ ಟಿಕೆಟ್ ದೊರೆಯದೆ ನಿರಾಶೆ ಆಗಿರಬೇಕು, ಬಹಳ ಜನ ಅರ್ಹರಿದ್ದಂತಹವರಿಗೆ ಟಿಕೆಟ್ ಸಿಕ್ಕಿಲ್ಲಾ, ಅವರೂ ೨ ಲಕ್ಷ ಕೊಟ್ಟು ಪಕ್ಷಕ್ಕೆ ಅರ್ಜಿ ಹಾಕಿದ್ರು ಅವರಲ್ಲಿ ನಾನು ಮನವಿ ಮಾಡಿಕೊಳ್ತೇನೆ ನಿರಾಸೆ ಆಗಬೇಡಿ, ಮುಂದೆ ಭವಿಷ್ಯದಲ್ಲಿ ನಿಮಗೂ ಕೂಡ ಉತ್ತಮ ಅವಕಾಶಗಳು ಸಿಗುತ್ತೆ, ಸರ್ಕಾರ ಬಂದಾಗ ಅನೇಕ ಜವಾಬ್ದಾರಿಗಳು ಸಿಗೋ ಅವಕಾಶ ನಿಮಗಿದೆ, ನಾವು ನೀವೆಲ್ಲಾ ಸೇರಿಕೊಂಡು ಪಕ್ಷವನ್ನ ಕಟ್ಟೋಣ ಎಂದು ತಿಳಿಸಿದರು.
ಇದನ್ನೂ ಓದಿ: ಎಲ್ಲೇ ಸ್ಪರ್ಧೆ ಮಾಡಿದರೂ ಸಿದ್ದರಾಮಯ್ಯ ಗೆಲ್ಲುತ್ತಾರೆ : ಶಾಸಕ ಜೆ.ಎನ್.ಗಣೇಶ್
ರಾಹುಲ್ ಗಾಂಧಿ ಅನರ್ಹತೆ ಪ್ರಜಾತಂತ್ರ ವಿರೋಧಿ;-
ಕಾಂಗ್ರೆಸ್ ಪಕ್ಷದ ಪ್ರಮುಖ ಯುವ ನಾಯಕ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಿದ ಕ್ರಮವನ್ನು ತೀವ್ರವಾಗಿ ಖಂಡಿಸಿದ ಡಾ.ಜಿ.ಪರಮೇಶ್ವರ ಇದು ಪ್ರಜಾತಂತ್ರ ವಿರೋಧಿ ಕ್ರಮವಾಗಿದೆ, ಗುಜರಾತ್ ರಾಜ್ಯದ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರನ್ನು ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರೆಂದು ಪರಿಗಣಿಸಿ ಎರಡು ವರ್ಷಗಳ ಶಿಕ್ಷೆ ವಿಧಿಸಿದ ಬೆನ್ನ ಹಿಂದೆಯೇ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ತರಾತುರಿಯ ಕ್ರಮವಾಗಿದೆ, ಇದರ ಹಿಂದೆ ಬಿಜೆಪಿ ನಾಯಕರ ಷಡ್ಯಂತ್ರ ಅಡಗಿದೆ ಎಂದರು. ಅವರು ನನಗೆ ನ್ಯಾಯಾಲಯ ಮತ್ತು ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ, ಗೌರವಗಳಿವೆ, ನ್ಯಾಯಾಲಯ ತೀರ್ಪು ನೀಡಿದ ತಕ್ಷಣವೇ ಅವರ ಲೋಕಸಭಾ ಸದಸ್ಯತ್ವ ರದ್ದುಪಡಿಸಿರುವುದು ಸರಿಯೇ, ನ್ಯಾಯಾಲಯವೇ ತಿಂಗಳ ಕಾಲ ಸಮಯ ನೀಡಿರುವಾಗ ಲೋಕಸಭೆಯ ಕಾರ್ಯದರ್ಶಿ ಉತ್ಪಲ್‌ಕುಮಾರ್ ಅವರು ಆತುರಾತುರವಾಗಿ ರಾಹುಲ್‌ಗಾಂಧಿ ಅವರನ್ನು ಅನರ್ಹಗೊಳಿಸಿ ಅದೇಶ ಹೊರಡಿಸಿರುವುದು ಸಮಂಜಸವೇ ಎಂಬುದನ್ನು ಬಿಜೆಪಿಯ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.