ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್ ಸ್ಪೋರ್ಟ್ಸ್ ನ “ಟ್ರೋಫಿ ಟೂರ್’
Team Udayavani, Mar 26, 2023, 9:20 PM IST
ಬೆಂಗಳೂರು: ದೇಶಾದ್ಯಂತ ಕ್ರೀಡಾಸಕ್ತರು ಕಾತರದಿಂದ ಕಾಯುತ್ತಿರುವ ಐಪಿಎಲ್ ಕ್ರಿಕೆಟ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಿನಲ್ಲಿ “ಸ್ಟಾರ್ ಸ್ಪೋರ್ಟ್ಸ್’ ವಾಹಿನಿಯ ವತಿಯಿಂದ “ಟ್ರೋಫಿ ಟೂರ್’ ಕಾರ್ಯಕ್ರಮದ ಮೂಲಕ ಐಪಿಎಲ್ ಟೂರ್ನಿಯ ಟ್ರೋಫಿಯು ಬೆಂಗಳೂರಿನ ವಿವಿಧೆಡೆ ಭಾನುವಾರ ಪ್ರದರ್ಶನಗೊಂಡಿತು.
ಕ್ರೀಡಾ ಅಭಿಮಾನಿಗಳ ಹಬ್ಬವೆಂದೇ ಬಿಂಬಿತವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯ ಅಧಿಕೃತ ಟೆಲಿವಿಷನ್ ಪ್ರಸಾರದ ಹಕ್ಕನ್ನು ಜನಪ್ರೀಯ “ಸ್ಟಾರ್ ಸ್ಪೋರ್ಟ್ಸ್’ ವಾಹಿನಿಯು ಪಡೆದಿದಿದೆ. ಇಂಗ್ಲಿಷ್, ಹಿಂದಿ, ಕನ್ನಡ, ತೆಲುಗು, ಮರಾಠಿ, ಮಲಯಾಳಂ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲೂ ಐಪಿಎಲ್ 16ನೇ ಆವೃತ್ತಿಯನ್ನು ಸ್ಟಾರ್‌ಸ್ಟೋಟ್ಸ್ ಪ್ರಸ್ತುತಪಡಿಸುತ್ತಿದೆ.
ಐಪಿಎಲ್ ಟೂರ್ನಿಗೆ ಬೃಹತ್ ಪ್ರಮಾಣದ ಅಭಿಮಾನಿಗಳನ್ನು ಸೆಳೆಯಲು ಸಿದ್ದತೆ ನಡೆಸಿರುವ ಸ್ಟಾರ್ ಸ್ಪೋರ್ಟ್ಸ್, ಟಾಟಾ ಕಂಪನಿಯು “ಟ್ರೋಫಿ ಟೂರ್’ ಪ್ರಾರಂಭಿಸಿದೆ. ಈ “ಟ್ರೋಫಿ ಟೂರ್’ ಮೊದಲು ಮುಂಬೈನಲ್ಲಿ ಪ್ರದರ್ಶನ ಕಂಡು ಬಂದ ಬಳಿಕ ವಿಶಾಖಪಟ್ಟಣ, ಚೆನ್ನೈನಲ್ಲಿ ಯಶಸ್ವಿಯಾಗಿ ಪ್ರದರ್ಶನಕ್ಕಿಡಲಾಗಿತ್ತು. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಭಾನುವಾರ ಹಮ್ಮಿಕೊಂಡಿದ್ದ “ಟ್ರೋಫಿ ಟೂರ್’ ಪ್ರದರ್ಶನ ಯಶಸ್ವಿಯಾಗಿದೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಗರದ ಆಯ್ದ ಭಾಗಗಳಲ್ಲಿ ಐಪಿಎಲ್ ಟ್ರೋಫಿಯನ್ನು ಪ್ರದರ್ಶನಕ್ಕೆ ಇರಿಸಲಾಯಿತು. ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಟ್ರೋಫಿ ಕಂಡು ಪುಳಕಿತರಾಗಿ ಸೆಲ್ಫಿ ತೆಗೆದುಕೊಂಡಿಡುವುದು ವಿಶೇಷವಾಗಿತ್ತು.
ಮ್ಯಾರಾಥನ್‌ಗೆ ವಿರಾಟ್ ಕೊಹ್ಲಿ ಚಾಲನೆ:
ಬೆಂಗಳೂರಿನಲ್ಲಿ ಟ್ರೋಫಿ ಟೂರ್ ಪ್ರದರ್ಶನ ಆರಂಭಕ್ಕೂ ಮೊದಲು ಬೆಳಗ್ಗೆ ವೀರಭದ್ರನಗರದ ನೈಸ್ ರಸ್ತೆಯ ಟೋಲ್ ಬಳಿ 18ಕೆ ಮ್ಯಾರಥಾನ್‌ಗೆ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಚಾಲನೆ ನೀಡಿದರು.
ವಿರಾಟ್ ಕೊಹ್ಲಿ ಜೊತೆಗೆ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ನಾ ಮುಂದು, ತಾ ಮುಂದು ಎಂಬಂತೆ ಹರಸಾಹಸ ಪಟ್ಟರು. 18, 10 ಮತ್ತು 5 ಕಿ.ಮೀ.ಓಟದ ಮ್ಯಾರಥಾನ್‌ನಲ್ಲಿ ಸಾವಿರಾರು ಮಂದಿ ಭಾಗವಹಿಸಿದರು. ಮ್ಯಾರಥಾನ್‌ಗೆ ಚಾಲನೆ ಕೊಟ್ಟ ಬೆನ್ನಲ್ಲೇ ಕನ್ನಡದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನಮಸ್ಕಾರ, “ಎಂಜಾಯ್ ಮಾಡಿ ಓಡು ಗುರು ಎಂದರು. ಕನ್ನಡಲ್ಲಿ ಕೊಹ್ಲಿ ಮಾತು ಕೇಳಿದ ಕ್ರೀಡಾಸಕ್ತರ ಜೋಶ್‌ನಲ್ಲಿ ಕೂಗಿ ಹಿಗ್ಗಿದರು. ಬಳಿಕ ಅಲ್ಲೇ ಟ್ರೋಫಿ ಪ್ರದರ್ಶನಕ್ಕಿಡಲಾಯಿತು. ನೆರೆದಿದ್ದ ಸಹಸ್ರಾರು ಜನ ಟ್ರೋಫಿಯ ಜೊತೆಗೆ ಸೆಲ್ಫಿ ತೆಗೆದುಕೊಂದು ಖುಷಿಪಟ್ಟರು.
ಹಲವೆಡೆ ಟ್ರೋಫಿ ಪ್ರದರ್ಶನ:
ಜಯನಗರದ 4ನೇ ಬ್ಲಾಕ್‌ನ ಮೈಯಾಸ್ ಹೊಟೇಲ್ ಮುಂಭಾಗದ ರಸ್ತೆಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಹಮ್ಮಿಕೊಂಡಿದ್ದ ಟ್ರೋಫಿಟೂರ್ ಪ್ರದರ್ಶನ ವೀಕ್ಷಿಸಲು ಕಿಕ್ಕಿರಿದ ಪ್ರಮಾಣದಲ್ಲಿ ಅಭಿಮಾನಿಗಳು ಆಗಮಿಸಿ ಸಂಭ್ರಮಿಸಿದರು. ಕ್ರೀಡಾಸಕ್ತರು ಹ್ಯಾಷ್‌ಟ್ಯಾಗ್ “ಐಪಿಎಲ್ ಆನ್ ಸ್ಟಾರ್’ ಬ್ಯಾನರ್‌ನಲ್ಲಿ ಟ್ರೋಫಿ ಜೊತೆಗೆ ತೆಗೆದುಕೊಂಡ ಚಿತ್ರ ಹಂಚಿಕೊಳ್ಳುತ್ತಿದ್ದರು. ಇದಾದ ಬಳಿಕ ಕೋರಮಂಗಲದ ಫೋರಂ ನೆಕ್ಸಸ್ ಮಾಲ್ ಮುಂದೆ ಟ್ರೋಫಿ ಪ್ರದರ್ಶನಕ್ಕಿಡಲಾಯಿತು. ಪ್ರತಿ ಪ್ರದರ್ಶನ ಸ್ಥಳಗಳಲ್ಲೂ ಆರ್‌ಸಿಬಿ, ಈ ಸಲ ಕಪ್ ನಮ್ದೇ ಎಂಬ ಸದ್ದು ಜೋರಾಗಿತ್ತು. ಫೋರಂ ನೆಕ್ಸಸ್ ಮಾಲ್ ಬಳಿ ಸಂಜೆವರೆಗೂ ಪ್ರದರ್ಶನಕ್ಕಿಟ್ಟಿದ್ದ ಟ್ರೂಫಿ ಕಂಡು ಸಾವಿರಾರು ಮಂದಿ ಹರ್ಷಗೊಂಡರು. ರಾತ್ರಿ 9 ರಿಂದ 11 ಗಂಟೆಯವರೆಗೆ ನಗರದ ವಿಶೇಷ ಸ್ಥಳಗಳಲ್ಲಿ ಟ್ರೋಫಿ ಪ್ರದರ್ಶನಕ್ಕೆ ಕಂಡು ಬಂತು.
ಸ್ಟಾರ್‌ಸ್ಫೋಟ್ಸ್ ಕಾರ್ಯಕ್ಕೆ ಮೆಚ್ಚುಗೆ:
ಐಪಿಎಲ್ ಟೂರ್ನಿಗೆ ಹೆಚ್ಚು ಉತ್ಸಾಹ ತುಂಬುವ ಉದ್ದೇಶದಿಂದ “ಸ್ಟಾರ್‌ಸ್ಫೋಟ್ಸ್’ ಟಾಟಾ ಐಪಿಎಲ್ ಟ್ರೋಫಿ ಟೂರ್ ಪ್ರದರ್ಶಿಸುವ ಸಾರಥ್ಯ ಕೈಗೊಂಡಿದೆ. ಸ್ಟಾರ್ ಸ್ಪೋರ್ಟ್ಸ್ ನ “ಟ್ರೋಫಿ ಟೂರ್’ಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. “ಸ್ಟಾರ್ ಸ್ಫೋಟ್ಸ್’ನ ಟ್ರೋಫಿ ಟೂರ್ ಕ್ರೀಡಾಭಿಮಾನಿಗಳ ಪಾಲಿಗೆ ಹಬ್ಬವಾಗಿ ಪರಿಣಮಿಸಿದ್ದು, ಹರ್ಷೋದ್ಘಾರ ಮುಗಿಲು ಮುಟ್ಟಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.