ರಿಟೇಲ್ ಮಾರುಕಟ್ಟೆ: ದರ ಸಮರಕ್ಕೆ ರಿಲಯನ್ಸ್ ಸಿದ್ಧತೆ
Team Udayavani, Mar 27, 2023, 6:45 AM IST
ನವದೆಹಲಿ: ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ದಾಪುಗಾಲು ಇಡುತ್ತಿದೆ. ಸಾಫ್ಟ್ ಡ್ರಿಂಕ್ಸ್ನಿಂದ ಹಿಡಿದು ಸೋಪ್ಗಳವರೆಗೆ ನೂತನ ಪ್ರಾಡಕ್ಟ್ ಗಳನ್ನು ರಿಲಿಯನ್ಸ್ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಮತ್ತೊಂದು ಸುತ್ತಿನ ದರ ಸಮರಕ್ಕೆ ಕಂಪನಿ ಅಣಿಯಾಗಿದೆ.
ಈ ಹಿಂದೆ ಟೆಲಿಕಾಮ್ ಕ್ರೇತ್ರಕ್ಕೆ ಲಗ್ಗೆ ಇಟ್ಟ ರಿಲಿಯನ್ಸ್, ಜಿಯೋ ಹೆಸರಿನಲ್ಲಿ ಉಚಿತ ಸಿಮ್ ಮತ್ತು ಇಂಟರ್ನೆಟ್ ಸೌಲಭ್ಯಗಳನ್ನು ನೀಡುವ ಮೂಲಕ ದೊಡ್ಡ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಸೆಳೆಯಿತು. ಅಲ್ಲದೇ ಇದೀಗ ರಿಲಿಯನ್ಸ್ ಜಿಯೋ ಅತ್ಯಾಧಿಕ ಗ್ರಾಹಕರನ್ನು ಹೊಂದಿರುವ ನಂ.1 ಟೆಲಿಕಾಮ್ ಕಂಪನಿಯಾಗಿದೆ.
ಅದೇ ರೀತಿ ರಿಲಯನ್ಸ್ ಕಂಪನಿಯು ಕಾಂಪ ಹೆಸರಿನಲ್ಲಿ ವಿವಿಧ ತಂಪು ಪಾನೀಯಾಗಳನ್ನು ಪರಿಚಯಿಸಿದೆ. ಇದು ಕೊಕೊ ಕೋಲಾ ಮತ್ತು ಪೆಪ್ಸಿ ಕಂಪನಿಗಳ ತಂಪು ಪಾನೀಯಾಗಳಿಗಿಂತ ಕಡಿಮೆ ಬೆಲೆ ಇದ್ದು, ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಪೈಪೋಟಿ ನೀಡಲಿದೆ.
ಅದೇ ರೀತಿ ರಿಲಯನ್ಸ್ ಕನ್ಸೂಮರ್ ಪ್ರಾಡಕ್ಟ್ ಲಿ.(ಆರ್ಸಿಪಿಎಲ್) 100 ಗ್ರಾಂಗೆ ಕೇವಲ 25 ರೂ. ಗಳಿಗೆ ಸೌಂದರ್ಯವರ್ಧಕ ಸೋಪುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದೇ ರೀತಿ ವಾಷಿಂಗ್ ಮೆಷಿನ್ ಮತ್ತು ಕೈಯಲ್ಲಿ ತೊಳೆಯುವ ಡಿಟರ್ಜಂಟ್ ಪೌಡರ್ ಅನ್ನು ಪರಿಚಯಿಸಿದೆ. ಬೇರೆ ಖ್ಯಾತ ಕಂಪನಿಗಳಿಂತ ಬೆಲೆ ಕಡಿಮೆಯಿದೆ. ಈ ಮೂಲಕ ದೇಶದ ರಿಟೇಲ್ ಮಾರುಕಟ್ಟೆಯಲ್ಲಿ ದರ ಸಮರಕ್ಕೆ ರಿಲಯನ್ಸ್ ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.