ಗುಣವಂತ ಪದವೀಧರರೇ ಸಮಾಜದ ಸಂಪತ್ತು: ಸೋದೆ ಶ್ರೀ
Team Udayavani, Mar 27, 2023, 6:25 AM IST
ಶಿರ್ವ: ವಿದ್ಯೆ ಮಾತ್ರ ವಿದ್ಯಾರ್ಥಿಗಳ ಆವಶ್ಯಕತೆಯಲ್ಲ. ಅದರೊಂದಿಗೆ ಕೆಲವು ಗುಣಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ವ್ಯಕ್ತಿಗಳಾಗಿ ಸಮಾಜಕ್ಕೆ ಆಸ್ತಿಯಾಗಲು ಸಾಧ್ಯ. ಗುಣವಂತ ಪದವೀಧರರು ದೇಶದ ಸಂಪತ್ತಾಗಿ ಸಮಾಜವನ್ನು ಮುನ್ನಡೆಸಬೇಕು ಎಂದು ಸಂಸ್ಥೆಯ ಅಧ್ಯಕ್ಷ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಅವರು ಮಾ. 26ರಂದು ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ 9ನೇ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿ ನಿಟ್ಟೆ ವಿ.ವಿ.ಯ ಸಹ ಉಪಕುಲಪತಿ ಡಾ| ಎಂ.ಎಸ್. ಮೂಡಿತ್ತಾಯ ಉಪನ್ಯಾಸ ನೀಡಿ, ಜೀವನವು ಶಾಲೆಗಿಂತ ಹೆಚ್ಚಿನ ಪಾಠ ಕಲಿಸುತ್ತದೆ. ಪದವೀಧರರು ಹೆತ್ತವರ ತ್ಯಾಗಕ್ಕೆ ವಂದನೆ ಸಲ್ಲಿಸುವುದರೊಂದಿಗೆ ಕಲಿತ ವಿದ್ಯಾಸಂಸ್ಥೆ ಮತ್ತು ಗುರುಗಳನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಮಂಗಳೂರಿನ ಇನ್ಫೋಟೆಕ್ ಸೊಲ್ಯೂಶನ್‌ನ (ಯುನಿಕೋರ್ಟ್ ಇಂಡಿಯಾ) ಸಹ ಸಂಸ್ಥಾಪಕ ಪ್ರಶಾಂತ್ ಶೆಣೈ ಮಾತನಾಡಿ, ಪದವೀಧರರು ತಮ್ಮ ವೃತ್ತಿ ಜೀವನದಲ್ಲಿ ಬರಬಹುದಾದ ಸವಾಲುಗಳನ್ನು ಎದುರಿಸಲು ಸದೃಢರಾಗಿ, ಸ್ಪರ್ಧಾ ತ್ಮಕ ಜಗತ್ತಿನಲ್ಲಿ ನಿರಂತರವಾಗಿ ಕಲಿಯಬೇಕು ಎಂದರು.
ಸಿವಿಲ್ ಎಂಜಿನಿಯರಿಂಗ್‌ನಲ್ಲಿ 9ನೇ ರ್‍ಯಾಂಕ್ ಪಡೆದ ಜಾನ್ವಿ ವಿ. ನಿಲೇಕಣಿ ಅವರನ್ನು ಗೌರವಿಸಲಾ ಯಿತು. ಗಣಕಯಂತ್ರ ವಿಭಾಗದ ಭಾರ್ಗವ ರಾಮ್ ಉಡುಪ, ಸಿವಿಲ್ ವಿಭಾಗದ ಜಾನ್ವಿ ವಿ. ನಿಲೇಕಣಿ, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಭೂಮಿಕಾ ಜೆ.ಎಸ್. ಹಾಗೂ ಯಂತ್ರಶಿಲ್ಪ ವಿಭಾ ಗದ ರಜತ್ ಅವರಿಗೆ ಮಂಗಳೂರಿನ ಮೆ| ಎಸ್.ಎಲ್. ಶೇಟ್ ಜುವೆಲರ್ನ ಪ್ರಶಾಂತ್ ಶೇಟ್ ಮತ್ತು ಹೇಮಂತ್ ಶೇಟ್ ಪ್ರಾಯೋಜಿತ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಸಂಸ್ಥೆಯ ಡೀನ್ ಡಾ| ಸುದರ್ಶನ್ ರಾವ್ ಚಿನ್ನದ ಪದಕ ವಿಜೇತರ ಪಟ್ಟಿ ವಾಚಿಸಿದರು.
ಸಂಸ್ಥೆಯ ಕಾರ್ಯದರ್ಶಿ ರತ್ನ ಕುಮಾರ್ ಮಾತನಾಡಿದರು. ಉಪ ಪ್ರಾಂಶು ಪಾಲ ಡಾ| ಗಣೇಶ್ ಐತಾಳ್ ಪ್ರಮಾಣ ವಚನ ಬೋಧಿಸಿದರು. ಕಾಲೇಜಿನ ವಿವಿಧ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿದ್ದರು.
ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಲೊಲಿಟಾ ಪ್ರಿಯಾ ಕ್ಯಾಸ್ತಲಿನೊ ಮತ್ತು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಸುಬ್ಬುಲಕ್ಷ್ಮೀ ಎನ್. ಕಾರಂತ ಅತಿಥಿಗಳನ್ನು ಪರಿಚಯಿಸಿದರು.
ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಕಾರ್ತಿಕ್ ವಿ. ಮತ್ತು ಅಕ್ಷತಾ ರಾವ್ ನಿರೂಪಿಸಿ, ಡಾ| ರವೀಂದ್ರ ಎಚ್.ಜೆ. ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.