ಅವಳಿ ತಾಲೂಕಿಗೆ ಒಂದೇ ಅಗ್ನಿಶಾಮಕ ಠಾಣೆ! ಅನಾಹುತ ಕೈ ಮೀರಿದರೆ ಸಿಬಂದಿ ಮೇಲೆ ಅಕ್ರೋಶ

Team Udayavani, Mar 27, 2023, 5:47 PM IST

ಅವಳಿ ತಾಲೂಕಿಗೆ ಒಂದೇ ಅಗ್ನಿಶಾಮಕ ಠಾಣೆ! ಅನಾಹುತ ಕೈ ಮೀರಿದರೆ ಸಿಬಂದಿ ಮೇಲೆ ಅಕ್ರೋಶ

ಕಾರ್ಕಳ: ಕಾರ್ಕಳ ತಾ|ನಲ್ಲಿ ವರ್ಷಗಳು ಕಳೆದಂತೆ ಬೆಂಕಿ ಅವಘಡ ಪ್ರಕರಣ ಏರಿಕೆಯಾಗುತ್ತಿದೆ. ಜತೆಗೆ ಅಗ್ನಿಶಾಮಕ ಇಲಾಖೆಗೆ ಬರುವ ಕರೆಗಳ ಸಂಖ್ಯೆಯೂ ಹೆಚ್ಚಿವೆ. ಅವಳಿ ತಾ|ಗೆ ಒಂದು ಅಗ್ನಿಶಾಮಕದಳ ಠಾಣೆ ಇರುವುದು ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೆಬ್ರಿಗೆ ಪ್ರತ್ಯೇಕ ಅಗ್ನಿಶಾಮಕ ದಳ ಠಾಣೆ ಬೇಕೆನ್ನುವ ಬೇಡಿಕೆಗೆ ಆಡಳಿತ ವ್ಯವಸ್ಥೆ ಸ್ಪಂದಿಸಿಲ್ಲ.

ಸುಡುಬಿಸಿಲಿಗೆ ತಾ|ನಾದ್ಯಂತ ಆಕಸ್ಮಿಕ ಬೆಂಕಿಗೆ ನೂರಾರು ಎಕರೆ ಕೃಷಿ ಭೂಮಿ ಸಹಿತ ಖಾಸಗಿ- ಸರಕಾರಿ ಗುಡ್ಡ ಪ್ರದೇಶಗಳು ಬೆಂಕಿಗೆ ಆಹುತಿಯಾಗಿವೆ. ಆಸ್ತಿಪಾಸ್ತಿ ನಷ್ಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜನವರಿಯಿಂದ ಮಾರ್ಚ್‌ವರೆಗೆ ತಾ|ನಲ್ಲಿ ಸಂಭವಿಸಿದ ಬೆಂಕಿ ಅವಘಡಗಳ ಅಂಕಿ-ಅಂಶದಲ್ಲಿ ಗಣನೀಯ ಏರಿಕೆಯಾಗಿದೆ.

ಅಗ್ನಿದುರಂತಗಳಿಗೆ ಸಾಮಾನ್ಯ ಕಾರಣ ಮಾನವರೇ. ವಾಹನಗಳಲ್ಲಿ ಸಂಚರಿಸುವವರು ಧೂಮಪಾನ ಮಾಡಿ ರಸ್ತೆ ಪಕ್ಕದ ಕಾಡುಗಳಲ್ಲಿ ಎಸೆಯುವುದರಿಂದ ಹುಲ್ಲು, ಒಣಗಿದ ಎಲೆಗಳಿಗೆ ಬೆಂಕಿ ತಗಲಿ ಗಾಳಿಗೆ ಅದು ಹಬ್ಬುತ್ತದೆ. ಹೈಟೆನ್ಶನ್‌ ವಿದ್ಯುತ್‌ ತಂತಿಗಳಿರುವಲ್ಲಿ ಮರದ ಕೊಂಬೆಗಳು ತಾಗಿಯೂ ಕೆಲವೆಡೆ ಅಗ್ನಿ ಸೃಷ್ಟಿಯಾಗುತ್ತಿದೆ. ಅರಣ್ಯ ವ್ಯಾಪ್ತಿಯ ನಿವಾಸಿಗಳು ತಮ್ಮ ಅನುಕೂಲಕ್ಕಾಗಿ, ಜಾಗದ ವೈಷ್ಯಮ್ಯಕ್ಕಾಗಿ ಬೆಂಕಿ ಹಚ್ಚುತ್ತಿರುವುದು ಕಂಡು ಬರುತ್ತಿದೆ.

ಸಣ್ಣ ಪ್ರಮಾಣದ ಬೆಂಕಿ ಕಂಡಾಗ ಅದನ್ನು ನಿರ್ಲಕ್ಷಿಸದೆ ಅದನ್ನು ಆರಿಸಲು ಸಾರ್ವಜನಿಕರು ಮುಂದಾದಲ್ಲಿ ಹೆಚ್ಚಿನ ನಷ್ಟ ತಡೆಗಟ್ಟಬಹುದಾಗಿದೆ. ಸಾರ್ವಜನಿಕರ ಸಲಹೆ, ಸಹಭಾಗಿತ್ವ ನಾವು ನಿರ್ವಹಿಸುವ ಕರ್ತವ್ಯದಲ್ಲಿ ಬೇಕು ಎನ್ನುತ್ತಾರೆ ಅಗ್ನಶಾಮಕ ದಳದ ಸಿಬಂದಿ. ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಸಿಬಂದಿ ಕೊರತೆ ಅಷ್ಟೇನು ಇಲ್ಲದಿದ್ದರೂ ಬಲು ದೂರ ತೆರಳಿ ಕಾರ್ಯಾಚರಣೆ ಕಷ್ಟವಾಗುತ್ತಿದೆ. ಕಾರ್ಕಳ, ಹೆಬ್ರಿ ತಾ|ನ ಯಾವುದೇ ಭಾಗದಲ್ಲಿ ಬೆಂಕಿ ಅವಘಡಗಳು ಸಂಭವಿಸಿದರೂ ಕಾರ್ಕಳದಿಂದ ಧಾವಿಸಿ ಬರಬೇಕು.

ಗುಡ್ಡಕಾಡು ಪ್ರದೇಶಗಳ ರಸ್ತೆಗಳಲ್ಲಿ ಅಗ್ನಿಶಾಮಕದಳ ವಾಹನ ತೆರಳಲು ಕಷ್ಟವಾಗುತ್ತಿದೆ. ಹೆಬ್ರಿಯಂತಹ ಸ್ಥಳಗಳಿಗೆ 30 ಕಿ.ಮೀ ದೂರ ಸಂಚರಿಸಿ ಸ್ಥಳ ಹುಡುಕಾಡಿ ಕಾರ್ಯಾಚರಣೆ ನಡೆಸುವ ವೇಳೆ ಅಪಾರ ನಷ್ಟ ಸಂಭವಿಸಿ ಆಗಿರುತ್ತದೆ. ಅಗ್ನಿಶಾಮಕ 16 ಹುದ್ದೆಗಳ ಪೈಕಿ 12 ಹುದ್ದೆಯಿದ್ದು, 4 ಹುದ್ದೆ ಖಾಲಿಯಿದೆ. ಚಾಲಕ ಫೈರ್‌ವೆುನ್‌ 4 ಹುದ್ದೆಗಳ ಪೈಕಿ 3 ಇದ್ದು 1 ಹುದ್ದೆ ಖಾಲಿಯಿದೆ. ಠಾಣಾ ಮೇಲ್ವಿಚಾರಕ, ಸಹಾಯಕ ಮೇಲ್ವಿಚಾರಕ, ವಾಹನ ಮೆಕ್ಯಾನಿಕ್‌ ಹುದ್ದೆಗಳೆಲ್ಲವೂ ಭರ್ತಿಯಿವೆ ನಿಮಯ ಮಾಡಿದವರಿಗೆ ತಲೆನೋವಿಲ್ಲ

ಪ್ರವಾಹ, ಬರ, ಭೂಕಂಪ, ಬಿರುಗಾಳಿ, ಕಾಳ್ಗಿಚ್ಚು, ಚಂಡಮಾರುತ, ಭೂಕುಸಿತ, ಜ್ವಾಲಾಮುಖೀ ಮುಂತಾದ ಪ್ರಕೃತಿ ವಿಕೋಪಗಳು ಹಾಗೂ ಮಾನವ ಸೃಷ್ಟಿಸುವ ವಿಪತ್ತುಗಳ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬಂದಿ ತತ್‌ಕ್ಷಣ ಸ್ಪಂದಿಸಬೇಕು. ರಾಜ್ಯ ಅಗ್ನಿ ಶಾಮಕ ಸಲಹಾ ಸಮಿತಿ (ಎಸ್‌ಎಫ್ಎಸಿ) ನಿಯಮಾನುಸಾರ ಪ್ರತೀ 10 ಚ.ಕಿ.ಮೀ. ಪ್ರದೇಶಕ್ಕೆ ಒಂದು ಅಗ್ನಿಶಾಮಕ ಠಾಣೆ ಇರಬೇಕು. ಅತೀ ಹೆಚ್ಚು ಅಪಾಯಕಾರಿ ಪ್ರದೇಶಗಳಲ್ಲಿ ಗರಿಷ್ಠ 3 ನಿಮಿಷಗಳಲ್ಲಿ ಪ್ರತಿಕ್ರಿಯಿಸಲು ಪ್ರಯತ್ನಿಸಬೇಕು. ಇನ್ನಿತರ ಪ್ರದೇಶ ಗಳನ್ನು ತಲುಪಲು 5 ನಿಮಿಷ ಮೀರಬಾರದು. ಆದರೆ, ನಿಯಮ ಮಾಡಿದವರು ಅನುಷ್ಠಾನ ಕುರಿತು ತಲೆ ಕೆಡಿಸಿಕೊಳ್ಳದಿರುವುದು ಅಗ್ನಿಶಾಮಕ ದಳದ ಸಿಬಂದಿಗೆ ತಲೆ ನೋವಾಗಿದೆ.

ಅನಾಹುತ ಕೈ ಮೀರಿದರೆ ಸಿಬಂದಿ ಮೇಲೆ ಅಕ್ರೋಶ
ಅನಾಹುತ ಕೈ ಮೀರಿದರೆ ಅಸಹಾಯಕ ಸಿಬಂದಿಯೇ ಜನರ ಆಕ್ರೊçಶಕ್ಕೆ ಗುರಿಯಾಗುತ್ತಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಆಡಳಿತ ಸಂಸ್ಥೆಗಳು ಠಾಣೆಯ ತುರ್ತು ಅಗತ್ಯಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಹೆಬ್ರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಹೊಸ ಅಗ್ನಿ ಶಾಮಕ ಠಾಣೆಯನ್ನು ಮಂಜೂರುಗೊಳಿಸುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ವೇಳೆ ಹೇಳಿದ್ದರು. ಬಳಿಕ ಅವರು ಸಿಎಂ ಆಗಿದ್ದಾರೆ. ಪೊಲೀಸ್‌ ಠಾಣೆ
ಪಕ್ಕ ಅಗ್ನಿಶಾಮಕ ಠಾಣೆಗೆ 2 ಎಕರೆ ಜಾಗ ಗುರುತಿಸಲಾಗಿದೆ.

2026ಕ್ಕೆ ಹೆಬ್ರಿಗೆ ಠಾಣೆ
ಪಂಚವಾರ್ಷಿಕ ಮಾದರಿಯಲ್ಲಿ 2020ರಿಂದ ಅಗ್ನಿಶಾಮಕ ಠಾಣೆಗಳ ನಿರ್ಮಾಣಗೊಳಿಸಲಾಗುತ್ತಿದೆ. 2021-22ರಲ್ಲಿ ಬೈಂದೂರು ಠಾಣೆಪೂರ್ಣಗೊಳ್ಳುತ್ತ ಬರುತ್ತಿದ್ದು, 2023ರಿಂದ 2026ರ ಅವಧಿಯೊಳಗೆ ಬ್ರಹ್ಮಾವರ ಮತ್ತು ಹೆಬ್ರಿ ಎರಡೂ ಕೇಂದ್ರಗಳು ಪೂರ್ಣಗೊಂಡು ಕಾರ್ಯಾರಂಭಿಸಲಿವೆ.

-ವಸಂತ ಕುಮಾರ್‌, ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ, ಉಡುಪಿ

*ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.