ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗ ಕೈ ಬಿಡುವ ಭರವಸೆ ನೀಡಿದ ಗಾಲಿ ರೆಡ್ಡಿ
Team Udayavani, Mar 27, 2023, 6:43 PM IST
ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಆನೆಗೊಂದಿ ಭಾಗದ 15 ಗ್ರಾಮಗಳು ಬರುತ್ತಿದ್ದು ಪದೇ ಪದೇ ವ್ಯಾಪಾರ ವಹಿವಾಟು ಸೇರಿ ಸ್ಥಳೀಯ ಜನರು ಬದುಕು ನಡೆಸಲು ಆಗುತ್ತಿಲ್ಲ. ತಾವು ಗೆದ್ದ ತಕ್ಷಣ ಹಂಪಿ ಪ್ರಾಧಿಕಾರದಿಂದ ಆನೆಗೊಂದಿ ಗ್ರಾಮಗಳನ್ನು ಕೈ ಬಿಡುವ, ಪಕ್ಷದ ಜತೆಗೆ ಕೈ ಜೋಡಿಸುವ ಭರವಸೆಯನ್ನು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ನೀಡಿದ್ದಾರೆ.
ಅವರು ಆನೆಗೊಂದಿ ಹಳೆಯ ಮಂಡಲ ಗ್ರಾಮಗಳಲ್ಲಿ ಕೆಆರ್‌ಪಿ ಪಾರ್ಟಿ ಪರವಾಗಿ ಪ್ರಚಾರ ಕಾರ್ಯ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಆನೆಗೊಂದಿ ಭೋವಿ ಸಮಾಜದ ಕುಲಕಸುಬು ಕಲ್ಲು ಹೊಡೆಯುವ ಕಾರ್ಮಿಕರಿಗೆ ಸರ್ಕಾರದಿಂದ ಅಧಿಕೃತ ಪರವಾನಗಿ ನೀಡಿಸುವುದಾಗಿ ಭರವಸೆ ಹಾಗೂ ಗ್ರಾಮದಲ್ಲಿ 20 ಹೆಚ್ಚು ವೃದ್ದ ಮಹಿಳೆಯರಿಗೆ ದೃಷ್ಟಿದೋಷ ದ ತೊಂದರೆವುಳ್ಳವರಿಗೆ ಸ್ವಂತ ಖರ್ಚಿನಲ್ಲಿ ಕಣ್ಣಿನ ಆಪರೇಶನ್ ಮಾಡಿಸಲಾಗುತ್ತದೆ. ರಂಗಾಪುರ್(ಜಂಗ್ಲಿ) ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಿಂದ ಶಾಲೆಗೆ ತೆರಳುವ ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆಯನ್ನು 4-5 ದಿನಗಳಲ್ಲಿ ವಾಹನ ವ್ಯವಸ್ಥೆ ಮಾಡಿಸಲಾಗುತ್ತದೆ. ರಂಗಾಪುರ್ ಗ್ರಾಮದಿಂದ ಎಡದಂಡೆ ನಾಲೆಯ ಮೇಲೆ ಸಣಾಪುರ್ ಗ್ರಾಮಕ್ಕೆ ತೆರಳುವ ಮಧ್ಯ ಬರುವ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸೋದ್ಯಮ ಇಲಾಖೆಗಳ ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ತಿರುಮಲಾಪೂರದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ವಿರುಪಾಪುರ ಗಡ್ಡಿಯಲ್ಲಿ 73 ಕುಟುಂಬಗಳ ಮನೆಗಳನ್ನು ತೆರವು ಮಾಡಿ ಹತ್ತು ವರ್ಷಗಳೇ ಕಳೆದರೂ ಪುನರ್ ವಸತಿ ಕಲ್ಪಿಸದೇ ಇರುವುದು ಖಂಡನೀಯವಾಗಿದ್ದು ನನಗೆ ಕೇವಲ 50 ದಿನ ಕಾಲಾವಕಾಶ ನೀಡಿ, 150 ಮನೆಗಳನ್ನು ನಿಮಗೆ ಸರ್ಕಾರದಿಂದಾಗಲಿ ಅಥವಾ ವೈಯಕ್ತಿಕವಾಗಲಿ ಅಧಿಕೃತವಾಗಿ ನಿವೇಶನ ಕಲ್ಲಿಸಿಕೊಡುವೇ, ಎಂದು ಭರವಸೆ ನೀಡಿದರು.
ಆನೆಗುಂದಿ ಭಾಗದ ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಗಾಪೂರ, ಮಲ್ಲಾಪುರ, ರಾಂಪುರ, ಲಕ್ಷ್ಮಿಪುರ, ಚಿಕ್ಕರಾಂಪುರ-1, ಚಿಕ್ಕರಾಂಪುರ-2, ರಂಗಾಪುರ(ಜಂಗ್ಲಿ), ರಂಗಾಪುರ ಕ್ಯಾಂಪ್, ತಿರುಮಲಾಪುರ, ಸಣಾಪುರ, ಕರಿಯಮ್ಮನಗಡ್ಡಿ, ವಿರುಪಾಪುರ ಗಡ್ಡಿ, ಹನುಮನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಆಹ್ವಾಲು ಕೇಳಿದರು.
ಈ ಸಂದರ್ಭದಲ್ಲಿ ಕೆಆರ್‌ಪಿ ಪಾರ್ಟಿಯ ಮುಖಂಡರು ಕಾರ್ಯಕರ್ತರಿದ್ದರು.
ಇದನ್ನೂ ಓದಿ: ಕೊರಟಗೆರೆ ಕುರುಬರ ನಡೆ ಡಾ.ಜಿ.ಪರಮೇಶ್ವರ್ ಕಡೆ; ಜಾಗೃತಿ ಸಮಾವೇಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.