ಶಿವಾಜಿ ಸುರತ್ಕಲ್ 2 ಟ್ರೇಲರ್ ಮಾ.31ಕ್ಕೆ ರಿಲೀಸ್
Team Udayavani, Mar 29, 2023, 2:12 PM IST
ರಮೇಶ್ ಅರವಿಂದ್ ನಟನೆಯ “ಶಿವಾಜಿ ಸುರತ್ಕಲ್-2′ ಚಿತ್ರ ಚಿತ್ರೀಕರಣ ಪೂರೈಸಿದ್ದು, ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ ಎಂಬ ವಿಚಾರ ನಿಮಗೆ ಗೊತ್ತೇ ಇದೆ.
ಈಗ ಮೊದಲ ಹಂತವಾಗಿ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಲು ಮುಂದಾಗಿದ್ದು, ಮಾರ್ಚ್ 31ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದು, ಸಂಕಲನ ಮಾಡಿ, ನಿರ್ದೇಶನ ಮಾಡಿರುವ ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ಮೂಲಕ ಅನೂಪ್ ಗೌಡ ಮತು ರೇಖಾ ಕೆ ಎನ್ ನಿರ್ಮಾಣ ಮಾಡಿದ್ದಾರೆ.
ಚಿತ್ರದ ಕೊನೆಯ ಒಂದು ಹಾಡಿನ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಚಿತ್ರತಂಡ ಮುಗಿಸಿದೆ. ಈ ಹಾಡಿನಲ್ಲಿ ಸಂಗೀತಾ ಶೃಂಗೇರಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ, ಆರಾಧ್ಯ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ.
ಭಿನ್ನ ಶೈಲಿಯ ಸಿನಿಮಾ “ಶಿವಾಜಿ ಸುರತ್ಕಲ್-2′ ಒಂದು ಪತ್ತೆದಾರಿ ಸಿನಿಮಾ. ಹಾಗಂತ ಕೇವಲ ಅಷ್ಟಕ್ಕೇ ಸೀಮಿತವಾಗಿಲ್ಲ. ಸ್ಕ್ರಿಪ್ಟ್ ನಲ್ಲಿ ಸಾಕಷ್ಟು ಹೊಸ ಅಂಶಗಳನ್ನು ಸೇರಿಸಿದ್ದಾರಂತೆ. ಈ ಬಗ್ಗೆ ಮಾತನಾಡುವ ನಿರ್ದೇಶಕರು, “ಶಿವಾಜಿ ಸುರತ್ಕಲ್ 2 ರೆಗ್ಯುಲರ್ ಸ್ಕ್ರಿಪ್ಟ್ ಅಲ್ಲ. ಇಲ್ಲಿ ಮನುಷ್ಯನ ಮನಸ್ಸಿನೊಳಗೆ ಏನಾಗುತ್ತದೆ, ಆತನ ಆಲೋಚನೆಗಳು … ಹೀಗೆ ಹಲವು ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ನಾವು ಮೊದಲ ಭಾಗ ಬಿಡುಗಡೆಯಾದಾಗ ಥಿಯೇಟರ್ ಮಾಡಿದ್ದೆವು. ಆಗ ಅನೇಕರು, ಚಿತ್ರದ ಕೊನೆಯಲ್ಲಿ ರಮೇಶ್ ಹಾಗೂ ರಾಧಿಕಾ ಅವರ ಫೋಟೋ ತೋರಿಸಿದ್ದು ಯಾಕೆ ಹಾಗೂ ಸುರತ್ಕಲ್‌ಗೂ ಚಿತ್ರಕ್ಕೂ ಸಂಬಂಧವೇನು ಎಂದು ಕೇಳಿದ್ದರು. ಅವೆಲ್ಲದಕ್ಕೂ ಉತ್ತರ ಈ ಚಿತ್ರದಲ್ಲಿದೆ. ಇಲ್ಲಿ ಪತ್ತೆದಾರಿಯಾಗಿ ಕಥೆ ಮುಂದೆ ಸಾಗುವುದಿಲ್ಲ. ಶಿವಾಜಿಯ ಎಮೋಶನಲ್ ಜರ್ನಿ ಕೂಡಾ ಇಲ್ಲಿ ಸಾಗಿಬರಲಿದೆ’ ಎನ್ನುತ್ತಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.