ಫೇಸ್ಕ್ರೀಂ ಸರ್ಚ್ ಮಾಡಿ ಲಕ್ಷ ಕಳೆದುಕೊಂಡ ಮಹಿಳೆ
Team Udayavani, Mar 30, 2023, 5:42 AM IST
ಉಡುಪಿ: ಮುಖಕ್ಕೆ ಹಚ್ಚುವ ಕ್ರೀಂ ಬಗ್ಗೆ ಆನ್ಲೈನ್ನಲ್ಲಿ ಸರ್ಚ್ ಮಾಡಿ ಲಕ್ಷಾಂತರ ರೂ. ಹಣ ಕಳೆದುಕೊಂಡ ಘಟನೆ ವರದಿಯಾಗಿದೆ. ಜ್ಯೋತಿ ಉಡುಪಿ (32) ಹಣ ಕಳೆದುಕೊಂಡವರು. ಇವರು ಮುಖಕ್ಕೆ ಹಚ್ಚುವ ಕ್ರೀಂ ಅನ್ನು ಆನ್ಲೈನ್ನಲ್ಲಿ ಹುಡುಕುತ್ತಿದ್ದ ಸಂದರ್ಭ ಆನ್ಲೈನ್ನಲ್ಲಿ ಸಿಕ್ಕ ನಂಬರ್ಗೆ ಕರೆ ಮಾಡಿದ್ದಾರೆ.
ಆಗ ರಿಜಿಸ್ಟಾರ್ ಮಾಡುವಂತೆ ಸೂಚಿಸಿದ್ದು, ಮಾ. 22ರಂದು ಅಪರಿಚಿತ ವ್ಯಕ್ತಿಯೋರ್ವ ಮತ್ತೆ ಕರೆ ಮಾಡಿ ಈ ಹಿಂದೆ ಮಾಡಿರುವ ಮಾಹಿತಿ ತಪ್ಪಾಗಿದೆ. ಬೇರೊಂದು ಲಿಂಕ್ ಕಳುಹಿಸಿ ಅದರಲ್ಲಿ ವಿವರ ನೀಡುವಂತೆ ಕೋರಿದ್ದ. ನಂಬಿದ ಮಹಿಳೆಯು ವಿವರಗಳನ್ನು ಅಪ್ಡೇಟ್ ಮಾಡಿದ್ದರು. ಮಾ. 24ರಂದು 99,999 ರೂ., ಮಾ. 25ರಂದು 90,000 ರೂ., 8,000 ರೂ. ಸಹಿತ ಒಟ್ಟು 1,97,999 ರೂ. ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.