ರಾಹುಲ್‌ ಪರ ಕಾನೂನು ಸಮರಕ್ಕೆ ಸಿದ್ಧತೆ: ಅನರ್ಹತೆಗೆ ತಕ್ಕ ಉತ್ತರದ ಪಣ

ಸೂರತ್‌ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಶೀಘ್ರವೇ ಅರ್ಜಿ

Team Udayavani, Mar 30, 2023, 7:20 AM IST

ರಾಹುಲ್‌ ಪರ ಕಾನೂನು ಸಮರಕ್ಕೆ ಸಿದ್ಧತೆ: ಅನರ್ಹತೆಗೆ ತಕ್ಕ ಉತ್ತರದ ಪಣ

ಹೊಸದಿಲ್ಲಿ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್‌ಗಾಂಧಿ ವಿರುದ್ಧ ಸೂರತ್‌ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಮೋದಿ ಉಪನಾಮದ ಕುರಿತು ರಾಹುಲ್‌ ಮಾನ ಹಾನಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿದ್ದ ಪ್ರಕ ರಣದಲ್ಲಿ ಸೂರತ್‌ ಸೆಷನ್ಸ್‌ ನ್ಯಾಯಾಲಯವು ರಾಹುಲ್‌ರನ್ನು ದೋಷಿ ಎಂದು ಘೋಷಿಸಿತ್ತು. ಅಲ್ಲದೇ 2 ವರ್ಷಗಳ ಜೈಲು ಶಿಕ್ಷೆಯ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ತೀರ್ಪನ್ನು ಮರು ಪರಿ ಶೀಲಿ ಸುವಂತೆ ಕೋರಿ ಮೇಲ್ಮನವಿ ಅರ್ಜಿ ಸಲ್ಲಿಸಲು ಪಕ್ಷದ ಕಾನೂನು ಸಲಹೆಗಾರರು ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೇನು ಒಂದು ಅಥವಾ 2 ದಿನಗಳಲ್ಲಿ ಸೆಷನ್ಸ್‌ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆಗಳಿವೆ.

ಸೂರತ್‌ ನ್ಯಾಯಾಲಯದ ತೀರ್ಪನ್ನು ಆಧರಿಸಿ, ಪ್ರಜಾಪ್ರತಿನಿಧಿ ಕಾಯ್ದೆ 1951ರ ಅನ್ವಯ ರಾಹುಲ್‌ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದು, ಈಗಾಗಲೇ ಇದನ್ನು ಖಂಡಿಸಿ ಕಾಂಗ್ರೆ ಸ್‌ ರಾಷ್ಟ್ರಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿದೆ.

ಈ ಕುರಿತು ಕಾಂಗ್ರೆಸ್‌ ಲೋಕಸಭೆ ವಿಪ್‌ ಮಾಣಿಕಂ ಠಾಕೂರ್‌ ಮಾತನಾಡಿ, ಸಂಸತ್ತಿಗೆ ರಾಹುಲ್‌ ಅವರು ಹಾಜರಾಗದಂತೆ ಸರಕಾರ ಹಲವು ಪಿತೂರಿ ಗಳನ್ನು ರೂಪಿಸಿತು. ಉದ್ದೇಶ ಪೂರ್ವಕವಾಗಿಯೇ ಅವರನ್ನು ಅನರ್ಹ ಗೊಳಿಸಲಾಯಿತು. ಆದರೆ ಕಾಂಗ್ರೆಸ್‌ ಇದ್ಯಾವುದಕ್ಕೂ ಹಿಂಜರಿಯುವುದಿಲ್ಲ. ರಾಜಕಿಧೀಯವಾಗಿ ಮಾತ್ರವಲ್ಲದೇ, ಕಾನೂ ನಾತ್ಮಕ ವಾಗಿಯೂ ಹೋರಾಟ ನಡೆಸಿ ಜನರ ಮುಂದೆ ಈ ಷಡ್ಯಂತ್ರ ತೆರೆದಿಡುತ್ತೇವೆ ಎಂದಿದ್ದಾರೆ.

ಈ ಮನೆ ರಾಹುಲ್‌ಗೆ ಸೇರಿದ್ದು!: ರಾಹುಲ್‌ ಅನರ್ಹಗೊಂಡ ಹಿನ್ನೆಲೆಯಲ್ಲಿ ಅವರ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಕೇಳಲಾಗಿದ್ದು, ಅದಕ್ಕೆ ರಾಹುಲ್‌ ಕೂಡ ಸಮ್ಮತಿಸಿದ್ದಾರೆ. ಈ ಬೆನ್ನಲ್ಲೇ, ಉತ್ತರಪ್ರದೇಶದ ಕಾಂಗ್ರೆಸ್‌ ನಾಯಕ ಅಜಯ್‌ ರಾಯ್‌ ಅವರು ತಮ್ಮ ನಿವಾಸವನ್ನೇ ರಾಹುಲ್‌ಗೆ ಬಿಟ್ಟುಕೊಡುವುದಾಗಿ ಹೇಳಿದ್ದಾರೆ.

ಲಾಹುರಬೀರ್‌ ಬಡಾವಣೆಯಲ್ಲಿರುವ ತಮ್ಮ ನಿವಾಸದ ಗೇಟಿನ ಮೇಲೆ “ಇದು ಶ್ರೀ ರಾಹುಲ್‌ ಗಾಂಧಿ ಅವರ ಮನೆ’ ಎನ್ನುವ ಬೋರ್ಡ್‌ ಹಾಕುವ ಮೂಲಕ, ಸಾಂಕೇತಿಕ ವಾಗಿ ರಾಹುಲ್‌ಗೆ ನಿವಾಸ ವನ್ನು ಒಪ್ಪಿಸಿರುವುದಾಗಿ ಹೇಳಿದ್ದಾರೆ. ಅಲ್ಲದೇ ಸರಕಾರ ವಂಚನೆಯಿಂದ ನಮ್ಮ ನಾಯಕನ ಮನೆ ಕಸಿಯುತ್ತಿದೆ. ಆದರೆ ದೇಶ ದಲ್ಲಿರುವ ಪ್ರತೀ ಕಾರ್ಯಕರ್ತರ ನಿವಾಸವೂ ರಾಹುಲ್‌ ಅವರ ಸ್ವಂತ ನಿವಾಸವೆಂದು ರಾಯ್‌ ಹೇಳಿದ್ದಾರೆ.

ಕಲಾಪ ಮುಂದೂಡಿಕೆ
ಅದಾನಿ ಗ್ರೂಪ್‌ ವಿರುದ್ಧದ ಹಿಂಡನ್‌ಬರ್ಗ್‌ ವರದಿ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಆಗ್ರಹಿಸಿ ಬುಧವಾರವೂ ರಾಜ್ಯಸಭೆಯಲ್ಲಿ ವಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯಸಭೆಯಲ್ಲಾದ ಗದ್ದಲದಿಂದ ಕಲಾಪಕ್ಕೆ ಅಡ್ಡಿಯುಂಟಾದ ಹಿನ್ನೆಲೆ ಸೋಮವಾರದವರೆಗೆ ಮುಂದೂಡಲಾಗಿದೆ.

ವಯನಾಡ್‌ ಚುನಾವಣೆಗೆ ಗಡಿಬಿಡಿ ಇಲ್ಲ
ಸಂಸದ ಸ್ಥಾನದಿಂದ ರಾಹುಲ್‌ ಅನರ್ಹ ಗೊಂಡಿರುವ ಕಾರಣದಿಂದ ವಯನಾಡ್‌ ಸಂಸತ್‌ ಕ್ಷೇತ್ರಕ್ಕೆ ಮರುಚುನಾವಣೆ ಮಾಡುತ್ತಾರಾ ಹೇಗೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದರೆ ಈ ವಿಚಾರದಲ್ಲಿ ಚುನಾವಣ ಆಯೋಗವು ಕಾದು ನೋಡುವ ನೀತಿ ಅನುಸರಿಸಿದೆ. ಬುಧವಾರ ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಮಾತ್ರ ಪ್ರಕಟಿಸಿದ ಇಸಿ ವಯನಾಡ್‌ಗೆ ಮರು  ಚುನಾವಣೆ ಘೋಷಿಸಿಲ್ಲ. “ಫೆಬ್ರವರಿವರೆಗೆ ಖಾಲಿ ಇದ್ದಂಥ ಕ್ಷೇತ್ರಗಳಿಗೆ ಚುನಾವಣೆ ಘೋಷಿಸಿದ್ದೇವೆ. ರಾಹುಲ್‌ ಗಾಂಧಿ ಅವರಿಗೆ ಸೂರತ್‌ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶವಿರುವ ಕಾರಣ, ಈ ವಿಚಾರದಲ್ಲಿ ತತ್‌ಕ್ಷಣದ ನಿರ್ಣಯ ತೆಗೆದುಕೊಂಡಿಲ್ಲ’ ಎಂದು ಮುಖ್ಯ ಚುನಾವಣೆ ಆಯುಕ್ತ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ.

ತಿದ್ದುಪಡಿ ಮಸೂದೆ ಪಾಸ್‌
ಭಾರತೀಯ ಸ್ಪರ್ಧಾತ್ಮಕ ಆಯೋಗದ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಬುಧವಾರ ಯಾವುದೇ ಚರ್ಚೆಯಿಲ್ಲದೇ ಅಂಗೀಕಾರ ಸಿಕ್ಕಿದೆ! ಅದಾನಿ ವಿಚಾರದಲ್ಲಿ ವಿಪಕ್ಷಗಳು ಗಲಾಟೆ ಮುಂದುವರಿಸಿದ್ದರಿಂದ ವಿತ್ತಸಚಿವೆ ಮಂಡಿಸಿದ ಈ ಮಹತ್ವದ ಮಸೂದೆ ಚರ್ಚೆಗೊಳಗಾಗಲೇ ಇಲ್ಲ. ಸ್ಪರ್ಧಾ ಆಯೋಗವು ಇನ್ನು ಮುಂದೆ ಯಾವುದೇ ವ್ಯಾಪಾರ ಸಂಸ್ಥೆಗಳಿಗೆ ಅವುಗಳ ಭಾರತೀಯ ವಹಿವಾಟು ಮಾತ್ರವಲ್ಲದೇ, ಜಾಗತಿಕ ವಹಿವಾಟನ್ನು ಪರಿಗಣಿಸಿ ದಂಡ ವಿಧಿಸಲು ಅನುಮತಿ ಲಭಿಸಿದೆ. ಅದಕ್ಕೆ ಈ ತಿದ್ದುಪಡಿಯೇ ಕಾರಣ. ಇಷ್ಟರ ಮಧ್ಯೆ ಲೋಕಸಭೆ ಕಲಾಪವೂ ಮುಂದೂಡಿಕೆಯಾಗಿದೆ. ಸದ್ಯಕ್ಕೆ ಈ ಬಿಕ್ಕಟ್ಟು ಬಗೆಹರಿಯುವ ಯಾವುದೇ ಸಾಧ್ಯತೆಯಿಲ್ಲ.

ಮೊಹಮ್ಮದ್‌ ಫೈಜಲ್‌ ಸಂಸದ ಸ್ಥಾನ ವಾಪಸ್‌
ರಾಹುಲ್‌ಗಾಂಧಿ ಸಂಸತ್‌ ಸ್ಥಾನ ಕಳೆದು ಕೊಂಡಿರುವ ನಡುವೆಯೇ, ಇಂಥದ್ದೇ ಮತ್ತೂಂದು ಅನರ್ಹತೆ ಪ್ರಕರಣದಲ್ಲಿ ನ್ಯಾಷನಲ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ)ದ ಲಕ್ಷದ್ವೀಪ ಸಂಸದ ಮೊಹಮ್ಮದ್‌ ಫೈಜಲ್‌ ಮತ್ತೆ ಲೋಕಸಭೆ ಸದಸ್ಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2009ರಲ್ಲಿ ನಡೆದ ಮಾಜಿ ಕೇಂದ್ರ ಸಚಿವ ಪಿಎಂ ಸಯೀದ್‌ ಅವರ ಕೊಲೆ ಪ್ರಕ ರಣದಲ್ಲಿ ಫೈಜಲ್‌ ವಿರುದ್ಧ 2016ರಲ್ಲಿ ಕೇಸು ದಾಖಲಿಸಲಾಗಿತ್ತು. 2019ರಲ್ಲಿ ಲಕ್ಷದ್ವೀಪ ಸೆಷನ್ಸ್‌ ನ್ಯಾಯಾಲಯ ಅವರನ್ನು ದೋಷಿ ಎಂದು ಪರಿಗಣಿಸಿ, 10 ವರ್ಷಗಳ ಜೈಲು ಶಿಕ್ಷೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಜ.18ರಂದು ಲಕ್ಷದ್ವೀಪಕ್ಕೆ ಮರುಚುನಾವಣೆ ಘೋಷಿಸಿ, ಜ.27ಕ್ಕೆ ಮತದಾನ ನಿಗದಿಪಡಿಸಿತ್ತು. ಆದರೆ ಚುನಾವಣೆಗೆ 2 ದಿನಕ್ಕೂ ಮುಂಚೆ ಕೇರಳ ಹೈಕೋರ್ಟ್‌ ಫೈಜಲ್‌ ವಿರುದ್ಧದ ತೀರ್ಪು ಅಮಾನತುಗೊಳಿಸಿ, ಮರು ಚುನಾವಣೆ ತಡೆಹಿಡಿಯಲು ಆದೇಶಿಸಿತ್ತು. ಈಗ ಫೈಜಲ್‌ ಮತ್ತೆ ಲೋಕಸಭೆ ಸದಸ್ಯತ್ವ ಪಡೆದುಕೊಂಡಿ ದ್ದಾರೆ. ಆದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆ ಮುಂದುವರಿಯಲಿದೆ.

ಟಾಪ್ ನ್ಯೂಸ್

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.