ರಾಮನವಮಿ ಆಚರಣೆ ಮಾಡುವುದು ಹೇಗೆ? ರಾಮನವಮಿಯ ಮಹತ್ವ ಏನು…

ಶ್ರೀರಾಮನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಪ್ರಸಾದವೆಂದು ಶುಂಠಿ ಚೂರ್ಣವನ್ನು ಕೊಡುತ್ತಾರೆ

Team Udayavani, Mar 30, 2023, 11:40 AM IST

ರಾಮನವಮಿ ಆಚರಣೆ ಮಾಡುವುದು ಹೇಗೆ? ರಾಮನವಮಿಯ ಮಹತ್ವ ಏನು…

ಇಂದು ರಾಮ ನವಮಿ. ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ರಾಮನವಮಿಯ ಇತಿಹಾಸ, ಆಚರಿಸುವುದು ಹೇಗೆ ಎಂಬ ಬಗ್ಗೆ ಒಂದು ಪುಟ್ಟ ಮಾಹಿತಿ.

ತಿಥಿ :ಚೈತ್ರ ಶುಕ್ಲ ನವಮಿ
ಶ್ರೀವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ. ಈ ದಿನ ಪುಷ್ಯ ನಕ್ಷತ್ರದಲ್ಲಿ, ಮಧ್ಯಾಹ್ನದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಐದು ಗ್ರಹಗಳಿದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನ್ಮವಾಯಿತು.

ರಾಮನವಮಿ ತಿಥಿ ಮತ್ತು ಶುಭ ಮುಹೂರ್ತ:

ನವಮಿ ಆರಂಭ ಕಾಲ 2023ರ ಮಾರ್ಚ್ 29ರ ರಾತ್ರಿ 9.09

ನವಮಿ ತಿಥಿ ಮುಕ್ತಾಯ ಕಾಲ 2023ರ ಮಾರ್ಚ್ 30ರ ರಾತ್ರಿ 11.32

ಉತ್ಸವವನ್ನು ಆಚರಿಸುವ ಪದ್ಧತಿ: ಅನೇಕ ರಾಮ ಮಂದಿರಗಳಲ್ಲಿ ಚೈತ್ರ ಶುಕ್ಲ ಪ್ರತಿ ಪದೆಯಿಂದ ಒಂಭತ್ತು ದಿನಗಳ ಕಾಲ ಈ ಉತ್ಸವವು ನಡೆಯುತ್ತದೆ. ರಾಮಾಯಣದ ಪಾರಾಯಣ, ಹರಿಕಥೆ ಮತ್ತು ರಾಮನ ಮೂರ್ತಿಗೆ ವಿವಿಧ ಶೃಂಗಾರ ಮುಂತಾದವುಗಳೊಂದಿಗೆ ಈ ಉತ್ಸವವನ್ನು ಆಚರಿಸುತ್ತಾರೆ. ನವಮಿಯಂದು ಮಧ್ಯಾಹ್ನ ರಾಮಜನ್ಮದ ಕೀರ್ತನೆ (ಹರಿಕಥೆ) ಯಾಗುತ್ತದೆ. ಮಧ್ಯಾಹ್ನ ಕುಂಚಿಗೆ (ಮಗುವಿನ ತಲೆಗೆ ಕಟ್ಟುವ ಒಂದು ವಸ್ತ್ರ. ಈ ವಸ್ತ್ರವು ಬೆನ್ನಿನವರೆಗೆ ಇರುತ್ತದೆ.) ಹಾಕಿದ ತೆಂಗಿನಕಾಯಿಯನ್ನು ತೊಟ್ಟಿಲಿನಲ್ಲಿಟ್ಟು ತೂಗುತ್ತಾರೆ. ಭಕ್ತರು ಅದರ ಮೇಲೆ, ಗುಲಾಲು ಮತ್ತು ಹೂವುಗಳನ್ನು ಅರ್ಪಿಸುತ್ತಾರೆ.’ (ಕೆಲವು ಕಡೆಗಳಲ್ಲಿ ತೆಂಗಿನ ಕಾಯಿಯ ಬದಲು ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಿನಲ್ಲಿ ಇಡುತ್ತಾರೆ. ) ಈ ಸಂದರ್ಭದಲ್ಲಿ ಶ್ರೀರಾಮನ ಜನ್ಮದ ಗೀತೆಯನ್ನು ಹೇಳಲಾಗುತ್ತದೆ. ಅದರ ಅನಂತರ ಶ್ರೀರಾಮನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಪ್ರಸಾದವೆಂದು ಶುಂಠಿ ಚೂರ್ಣವನ್ನು ಕೊಡುತ್ತಾರೆ. ಕೆಲವು ಕಡೆಗಳಲ್ಲಿ ಶುಂಠಿ ಚೂರ್ಣದೊಂದಿಗೆ ಮಹಾ ಪ್ರಸಾದವನ್ನೂ ನೀಡುತ್ತಾರೆ.

ರಾಮನವಮಿಯ ಮಹತ್ವ: ತ್ರೇತಾಯುಗದಲ್ಲಿ ರಾಮನ ಜನ್ಮವಾದಾಗ ಕಾರ್ಯ ನಿರತವಾಗಿದ್ದ ಶ್ರೀವಿಷ್ಣುವಿನ ಸಂಕಲ್ಪ, ತ್ರೇತಾಯುಗದಲ್ಲಿನ ಅಯೋಧ್ಯಾವಾಸಿಗಳ ಭಕ್ತಿ ಭಾವ ಮತ್ತು ಪೃಥ್ವಿಯಲ್ಲಿನ ಸಾತ್ವಿಕ ವಾತಾವರಣದಿಂದಾಗಿ ಪ್ರಭು ಶ್ರೀ ರಾಮನ ಜನ್ಮದಿಂದ ಶೇ. 100ರಷ್ಟು ಪರಿಣಾಮವಾಗಿತ್ತು. ಅನಂತರ ಪ್ರತಿವರ್ಷ ಬರುವಂತಹ ಚೈತ್ರ ಶುಕ್ಲ ನವಮಿಗೆ ಬ್ರಹ್ಮಾಂಡದಲ್ಲಿನ ವಾತಾವರಣದಲ್ಲಿ ರಾಮತತ್ವವು ಪ್ರಕ್ಷೇಪಿಸಿ ವಾತಾವರಣವನ್ನು ಸಾತ್ವಿಕ ಮತ್ತು ಚೈತನ್ಯಮಯ ವನ್ನಾಗಿಸಲು ವಿಷ್ಣುಲೋಕದಿಂದ ಶ್ರೀರಾಮ ತಣ್ತೀಯುಕ್ತ ವಿಷ್ಣು ತಣ್ತೀವು ಭೂಲೋಕದ ದಿಕ್ಕಿನತ್ತ ಪ್ರಕ್ಷೇಪಿತವಾಗುತ್ತದೆ ಮತ್ತು ಆ ದಿನ ಶ್ರೀರಾಮನ ಅಂಶಾತ್ಮಕ ಜನ್ಮವಾಗುತ್ತದೆ.

ಇದರ ಪರಿಣಾಮ ಇಡೀ ವರ್ಷವಿದ್ದು ಬ್ರಹ್ಮಾಂಡದಲ್ಲಿ ರಾಮ ತತ್ವಯುಕ್ತ ಸಾತ್ವಿಕತೆ ಮತ್ತು ಚೈತನ್ಯದ ಪ್ರಕ್ಷೇಪಣೆಯಾಗುತ್ತದೆ. ರಾಮ ತತ್ವಯುಕ್ತ ಸಾತ್ವಿಕತೆ ಮತ್ತು ಚೈತನ್ಯವನ್ನು ಬ್ರಹ್ಮಾಂಡದಲ್ಲಿನ ಪ್ರತಿಯೊಂದು ಸಜೀವ ಮತ್ತು ನಿರ್ಜೀವ ವಸ್ತುಗಳು ಗ್ರಹಿಸಿಕೊಳ್ಳುತ್ತವೆ ಮತ್ತು ಅದರಿಂದ ಅವುಗಳಿಗೆ ತಮ್ಮ ಕಾರ್ಯವನ್ನು ಒಳ್ಳೆಯ ರೀತಿಯಿಂದ ಮಾಡಲು ಸಾಧ್ಯವಾಗುತ್ತದೆ.

– ವಿನೋದ ಕಾಮತ

ಟಾಪ್ ನ್ಯೂಸ್

1-prayag

Mahakumbh; ಪ್ರಯಾಗ್‌ರಾಜ್‌ ಸಂಗಮ್‌ ನಿಲ್ದಾಣ ಫೆ.28ರ ವರೆಗೆ ಬಂದ್‌

1-us

ಹಾವು, ಮೊಸಳೆಗಳಿದ್ದ ಹಾದಿಯಲ್ಲಿ ದಿನಕ್ಕೆ 12 ಗಂಟೆ “ಅಕ್ರಮ’ ಪಯಣ

IND VS PAK

Champions Trophy; ಕರಾಚಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾರತದ ತ್ರಿವರ್ಣ ಧ್ವಜವಿಲ್ಲ?

1-adani

Adani ಕಂಪೆನಿಯಿಂದ ಚಿಕ್ಕ ರಾಕೆಟ್‌ ಉತ್ಪಾದನೆ?

Hardik Pandya

IPL ಮೊದಲ ಪಂದ್ಯದಲ್ಲೇ ನಿಷೇಧಕ್ಕೊಳಗಾಗುವ ಹಾರ್ದಿಕ್‌ ಪಾಂಡ್ಯ!

cbsc

Question paper leak ವದಂತಿ ನಂಬದಂತೆ ಸಿಬಿಎಸ್‌ಇ ಮನವಿ

Beer

Madhya Pradesh; ಎ.1ರಿಂದ ಕಡಿಮೆ ಅಲ್ಕೋಹಾಲ್‌ ಇರುವ ಬಾರ್‌ ಶುರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wFH

Work from Home; ಇದು ಆಂಧ್ರ ಆಫ‌ರ್‌!

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-prayag

Mahakumbh; ಪ್ರಯಾಗ್‌ರಾಜ್‌ ಸಂಗಮ್‌ ನಿಲ್ದಾಣ ಫೆ.28ರ ವರೆಗೆ ಬಂದ್‌

1-us

ಹಾವು, ಮೊಸಳೆಗಳಿದ್ದ ಹಾದಿಯಲ್ಲಿ ದಿನಕ್ಕೆ 12 ಗಂಟೆ “ಅಕ್ರಮ’ ಪಯಣ

IND VS PAK

Champions Trophy; ಕರಾಚಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾರತದ ತ್ರಿವರ್ಣ ಧ್ವಜವಿಲ್ಲ?

1-adani

Adani ಕಂಪೆನಿಯಿಂದ ಚಿಕ್ಕ ರಾಕೆಟ್‌ ಉತ್ಪಾದನೆ?

Hardik Pandya

IPL ಮೊದಲ ಪಂದ್ಯದಲ್ಲೇ ನಿಷೇಧಕ್ಕೊಳಗಾಗುವ ಹಾರ್ದಿಕ್‌ ಪಾಂಡ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.