ಪಂಜಾಬ್-ಕೆಕೆಆರ್ ಪಂದ್ಯಕ್ಕೆ ಮಳೆ ಭೀತಿ : ಇತ್ತಂಡಗಳಿಗೂ ಗಾಯಾಳುಗಳದ್ದೇ ಚಿಂತೆ
Team Udayavani, Apr 1, 2023, 7:21 AM IST
ಮೊಹಾಲಿ: ಗಾಯದ ಹೊಡೆತಕ್ಕೆ ಸಿಲುಕಿರುವ ಹಾಗೂ ಪ್ರಮುಖ ವಿದೇಶಿ ಆಟ ಗಾರರ ಅನುಪಸ್ಥಿತಿಯಿಂದ ಚಿಂತೆಗೀಡಾಗಿರುವ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್‌ರೈಡರ್ ತಂಡಗಳು ಶನಿವಾರ 16ನೇ ಐಪಿಎಲ್ ಅಭಿಯಾನ ಆರಂಭಿಸಲಿವೆ. ಪಂಜಾಬ್‌ನ “ಹೋಮ್ ಗ್ರೌಂಡ್” ಆಗಿರುವ ಮೊಹಾಲಿ ಈ ಪಂದ್ಯದ ತಾಣ. ಆದರೆ ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ.
ಕಳೆದ ಕೆಲವು ವರ್ಷಗಳಿಂದ ಇತ್ತಂಡಗಳೂ ತಂಡದ ಆಯ್ಕೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಅಸ್ಥಿರ ಪ್ರದರ್ಶನ ನೀಡುತ್ತ ಬಂದಿವೆ. ಎಲ್ಲಿಯೂ ನೆಚ್ಚಿನ ತಂಡಗಳೆಂದು ಗುರುತಿಸಲ್ಪಡಲೇ ಇಲ್ಲ. 2022ರ ಋತುವಿನಲ್ಲಿ ಪಂಜಾಬ್ 6ಕ್ಕೆ ಹಾಗೂ 2 ಬಾರಿಯ ಚಾಂಪಿಯನ್ ಕೆಕೆಆರ್ 7ನೇ ಸ್ಥಾನಕ್ಕೆ ಕುಸಿದಿತ್ತು.
ನೂತನ ನಾಯಕರು
ಎರಡೂ ತಂಡಗಳು ನೂತನ ನಾಯಕರನ್ನು ಹೊಂದಿರುವುದು ವಿಶೇಷ. ಪಂಜಾಬ್ ತಂಡವನ್ನು ಶಿಖರ್ ಧವನ್ ಹಾಗೂ ಕೆಕೆಆರ್ ತಂಡವನ್ನು ನಿತೀಶ್ ರಾಣಾ ಮುನ್ನಡೆಸಲಿದ್ದಾರೆ. ಕಳೆದ ಸೀಸನ್‌ನಲ್ಲಿ ಕ್ರಮವಾಗಿ ಮಾಯಾಂಕ್ ಅಗರ್ವಾಲ್ ಹಾಗೂ ಶ್ರೇಯಸ್ ಅಯ್ಯರ್ ಈ ತಂಡಗಳ ಕಪ್ತಾನರಾಗಿದ್ದರು. ಟ್ರೆವರ್ ಬೇಲಿಸ್ ಮತ್ತು ಚಂದ್ರಕಾಂತ್ ಪಂಡಿತ್ ಈ ಬಾರಿಯ ಕೋಚ್ ಆಗಿದ್ದಾರೆ.
ಕಾಗದದಲ್ಲಿ ಕೆಕೆಆರ್‌ಗಿಂತ ಪಂಜಾಬ್ ತಂಡ ತುಸು ಬಲಿಷ್ಠವಾಗಿ ಗೋಚರಿಸುತ್ತಿದೆ. ಆದರೆ ಇಂಗ್ಲೆಂಡ್‌ನ ಪ್ರಮುಖ ಆಟಗಾರ ಜಾನಿ ಬೇರ್‌ಸ್ಟೊ ಈ ಋತುವಿನಿಂದಲೇ ಬೇರ್ಪಟ್ಟಿದ್ದು ಪಂಜಾಬ್ ಪಾಲಿಗೊಂದು ಹಿನ್ನಡೆ. ಇವರ ಸ್ಥಾನವನ್ನು ಆಸ್ಟ್ರೇಲಿಯದ ಮ್ಯಾಥ್ಯೂ ಶಾರ್ಟ್ ತುಂಬಲಿದ್ದಾರೆ. ಇವರು ಧವನ್ ಜತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ಇಸಿಬಿಯಿಂದ ಇನ್ನೂ ಕ್ಲಿಯರೆನ್ಸ್ ಪಡೆಯದ ಲಿಯಮ್ ಲಿವಿಂಗ್‌ಸ್ಟೋನ್, ರಾಷ್ಟ್ರೀಯ ತಂಡದೊಂದಿಗೆ ಸರಣಿ ಆಡುತ್ತಿರುವ ಕಾಗಿಸೊ ರಬಾಡ ಕೂಡ ಮೊದಲ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಆದರೆ ಸವ್ಯಸಾಚಿಗಳಾದ ಸ್ಯಾಮ್ ಕರನ್ ಮತ್ತು ಸಿಕಂದರ್ ರಝ ಅವರ ಸೇರ್ಪಡೆಯಿಂದ ಲಾಭವಾಗುವ ಸಾಧ್ಯತೆ ಇದೆ. ಕರನ್ ಅವರೊಂದಿಗೆ ಅರ್ಷದೀಪ್ ಸಿಂಗ್, ರಿಷಿ ಧವನ್, ರಾಹುಲ್ ಚಹರ್ ಬೌಲಿಂಗ್ ವಿಭಾಗವನ್ನು ನೋಡಿಕೊಳ್ಳಬೇಕಿದೆ.
ಆರ್‌ಸಿಬಿಯಂತೆ ಪಂಜಾಬ್ ಕೂಡ ಇನ್ನೂ ಕಪ್ ಎತ್ತಿಲ್ಲ. 2014ರಲ್ಲಿ ಫೈನಲ್ ತಲುಪಿದ್ದೇ ಅತ್ಯುತ್ತಮ ಸಾಧನೆ.
ರಾಣಾ ಅಚ್ಚರಿಯ ನಾಯಕ
ಕೆಕೆಆರ್ ನಿತೀಶ್ ರಾಣಾ ಸಾರಥ್ಯದಲ್ಲಿ ಎಂಥ ಪ್ರದರ್ಶನ ನೀಡೀತು ಎಂಬ ಕುತೂಹಲವಿದೆ. ರಾಣಾ ಅವರನ್ನು ನಾಯಕತ್ವಕ್ಕೆ ಆರಿಸಿದ್ದೇ ಒಂದು ಅಚ್ಚರಿ ಹಾಗೂ ಅನಿರೀಕ್ಷಿತ ಬೆಳವಣಿಗೆ.
ಹಾರ್ಡ್ ಹಿಟ್ಟರ್ ಹಾಗೂ ಉತ್ತಮ ದರ್ಜೆಯ ಆಲ್‌ರೌಂಡರ್‌ಗಳನ್ನು ಕೆಕೆಆರ್ ಹೊಂದಿದೆ. ರಸೆಲ್, ಸುನೀಲ್ ನಾರಾಯಣ್, ವೀಸ್, ವೆಂಕಟೇಶ್ ಅಯ್ಯರ್, ಶಕಿಬ್ ಇವರಲ್ಲಿ ಪ್ರಮುಖರು. ಆದರೆ ಬಾಂಗ್ಲಾ ಕ್ರಿಕೆಟಿಗರಾದ ಶಕಿಬ್ ಅಲ್ ಹಸನ್ ಮತ್ತು ಲಿಟನ್ ದಾಸ್ ಆರಂಭಿಕ ಪಂದ್ಯಕ್ಕೆ ಲಭ್ಯರಿಲ್ಲ.
ತಂಡದ ಅಗ್ರ ಕ್ರಮಾಂಕಕ್ಕೆ ವೀಸ್, ರಿಂಕು ಸಿಂಗ್, ರೆಹಮಾನುಲ್ಲ ಗುರ್ಬಜ್; ಬೌಲಿಂಗ್ ವಿಭಾಗಕ್ಕೆ ಸೌಥಿ, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ ಆಧಾರವಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.