ಪಾಕ್ ಆಟಗಾರರಿಗೆ ಅವಕಾಶ ಕೊಡದೆ ಬಿಸಿಸಿಐ ದುರಹಂಕಾರ ತೋರಿಸುತ್ತಿದೆ: ಇಮ್ರಾನ್ ಖಾನ್
Team Udayavani, Apr 1, 2023, 10:36 AM IST
ಇಸ್ಲಮಾಬಾದ್: ವರ್ಣರಂಜಿತ ಟಿ20 ಕ್ರಿಕೆಟ್ ಕೂಟ ಐಪಿಎಲ್ ನ ನೂತನ ಸೀಸನ್ ಶುಕ್ರವಾರ ಆರಂಭವಾಗಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದೆ. ಭಾರತದಲ್ಲಿ ಐಪಿಎಲ್ ಕೂಟ ಆರಂಭವಾಗುತ್ತಿದ್ದಂತೆ ಅತ್ತ ಪಾಕಿಸ್ಥಾನದ ಮಾಜಿ ನಾಯಕ ಇಮ್ರಾನ್ ಖಾನ್ ಗೆ ಹೊಟ್ಟೆ ಉರಿಯುವಂತೆ ಮಾಡಿದೆ.
ಭಾರತವು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಅವಕಾಶ ನೀಡದಿರುವ ಬಗ್ಗೆ ಪಾಕ್ ಆಟಗಾರರು ಚಿಂತಿಸಬೇಕಾಗಿಲ್ಲ ಎಂದು ಪಾಕಿಸ್ತಾನದ ವಿಶ್ವಕಪ್ ವಿಜೇತ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕ್ ಆಟಗಾರರು 2008ರ ಉದ್ಘಾಟನಾ ಕೂಟದಲ್ಲಿ ಭಾಗವಹಿಸಿದ್ದರು. ಆದರೆ ಮುಂಬೈ ದಾಳಿಯ ಬಳಿಕ ಪಾಕ್ ಆಟಗಾರರನ್ನು ಹೊರಗಿಡಲಾಯಿತು.
ಇದನ್ನೂ ಓದಿ:“ಬಿಗ್ ಬಾಸ್ ಒಂದು ಸ್ಕ್ರಿಪ್ಟ್ ಕಾರ್ಯಕ್ರಮ..” ಮಾಜಿ ಸ್ಪರ್ಧಿಯ ವ್ಲಾಗ್ ವೈರಲ್
ಭಾರತೀಯ ಕ್ರಿಕೆಟ್ ಮಂಡಳಿಯು ಪಾಕಿಸ್ತಾನದ ಕ್ರಿಕೆಟ್ ಆಟಗಾರರ ಮೇಲೆ (ಐಪಿಎಲ್ ನಲ್ಲಿ ಕಾಣಿಸಿಕೊಳ್ಳಲು ಅವಕಾಶ ನೀಡದಿರುವ ಮೂಲಕ) ದ್ವೇಷ ಸಾಧಿಸುವುದು ನನಗೆ ವಿಚಿತ್ರವೆನಿಸುತ್ತದೆ. ಇದು ದುರಹಂಕಾರದ ನಡೆ ಎಂದಿದ್ದಾರೆ.
“ಭಾರತವು ಈಗ ಕ್ರಿಕೆಟ್ ಜಗತ್ತಿನಲ್ಲಿ ಸೂಪರ್ ಪವರ್ ಆಗಿ ಬಹಳಷ್ಟು ದುರಹಂಕಾರದಿಂದ ವರ್ತಿಸುತ್ತಿದೆ. ಏಕೆಂದರೆ ಇತರ ಯಾವುದೇ ದೇಶಗಳಿಗಿಂತ ಹೆಚ್ಚಿನ ಹಣವನ್ನು ಉತ್ಪಾದಿಸುವ ಸಾಮರ್ಥ್ಯ ಅವರಿಗಿದೆ, ಅವರು ಯಾರನ್ನು ಆಡಬೇಕು ಮತ್ತು ಯಾರನ್ನು ಆಡಬಾರದು ಎಂಬ ಸೂಪರ್ ಪವರ್ ನ ದುರಹಂಕಾರವನ್ನು ಅವರು ಈಗ ಪ್ರದರ್ಶಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಇಮ್ರಾನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.