ಪ್ರಸನಗೌಡ ನಿರ್ಗಮನದಿಂದ ಕಾಂಗ್ರೆಸ್‌ಗೆ ನಷವಿಲ್ಲ
Team Udayavani, Apr 1, 2023, 11:33 AM IST
ಚನ್ನಪಟ್ಟಣ: ಕಾಂಗ್ರೆಸ್ ಪಕ್ಷಕ್ಕೆ ತಾಲೂಕಿನಲ್ಲಿ ತನ್ನದೇ ಆದ ನೆಲೆ ಇದ್ದು, ಕಾರ್ಯಕರ್ತರೇ ಇದರ ಜೀವಾಳವಾಗಿದ್ದಾರೆ. ಯಾರೋ ಒಬ್ಬರು ಪಕ್ಷ ತೊರೆದರೆ, ಏನೂ ತೊಂದರೆಯಾಗದು ಎಂದು ಚನ್ನಪಟ್ಟಣ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ಪ್ರಮೋದ್ ಅವರು ಪ್ರಸನ್ನ ಪಿ.ಗೌಡ ವಿರುದ್ಧ ತಿರುಗೇಟು ನೀಡಿದರು.
ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್. ಸಂಸದ ಸುರೇಶ್ ಅವರ ವಿರುದ್ಧ ಅಶುದ್ಧವಾದ ಹೇಳಿಕೆ ನೀಡುತ್ತಿದ್ದಾರೆ. ಪಕ್ಷದ ಸಂಘಟನೆಗೆ ಪ್ರಸನ್ನ ಅವರ ಬೆಂಬಲವಿರಲಿಲ್ಲ. ಆದರೆ, ಅವರಿಗೆ ಪಕ್ಷ ಅನಿವಾರ್ಯವಾಗಿ ಬೇಕಾಗಿತ್ತು. ಸಂಘಟನೆಯ ಚರ್ಚೆಗಳ ವಿಚಾರದಲ್ಲಿ ಸ್ಪಂದಿಸದೆ ಮುನಿಸಿನಿಂದ ತಿಂಗಳು ಗಟ್ಟಲೆ ದೂರವಾಗುತ್ತಿದ್ದರು. ಹಾಗಾಗಿ, ನಿಭಾಯಿಸಲು ಆಗದ ಕಾರಣ ನೆಪಗಳನ್ನು ಹೇಳಿ ಪಕ್ಷವನ್ನು ತೊರೆದಿದ್ದಾರೆ ಎಂದು ಟೀಕಿಸಿದರು.
ಪಕ್ಷದ ತತ್ವ ಸಿದ್ಧಾಂತ. ತಾಳ್ಮೆ ಸಹನೆ ಹಾಗೂ ರಾಜಕಾರಣದ ಇಚ್ಛಾ ಶಕ್ತಿಯ ಕೊರತೆಯಿಂದ ಪ್ರಸನ್ನ ಪಕ್ಷವನ್ನು ಬಿಟ್ಟು ಜೆಡಿಎಸ್ ಪಕ್ಷಕ್ಕೆ ಸೇರಿದ್ದಾರೆ. ಇದಕ್ಕೆ ನಿಷ್ಠಾವಂತ ಕಾರ್ಯಕರ್ತರಿಗೆ ಬೇಸರವಾಗಿಲ್ಲ. ಕಾಂಗ್ರೆಸ್ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಡಿಕೆಸು ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿತ್ತು. ಇದಕ್ಕೆ ಪ್ರಸನ್ನ ಅವರ ಕೊಡುಗೆ ಏನು ಇಲ್ಲ ಎಂದರು.
ತಾಲೂಕಿನಲ್ಲಿ ಕಾಂಗ್ರೆಸ್ ಸದೃಢ: ಅವರು ಪಕ್ಷವನ್ನು ಬಿಟ್ಟು ಹೋದ ಮೇಲೆ ಇಲ್ಲಸಲ್ಲದ ಅರೋಪಗಳನ್ನು ಮಾಡುತ್ತಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ ಅವರು, ಚುನಾವಣಾ ಸ್ಪರ್ಧೆಗಾಗಿ ಪಕ್ಷದ 7 ಮಂದಿ ಅರ್ಜಿ ಸಲ್ಲಿಸಿದರು. ಕೊನೆಯ ಹಂತದಲ್ಲಿ ಪ್ರಸನ್ನ ಹಾಕಿದ್ದು. ವೈಯಕ್ತಿಕವಾಗಿ ಪ್ರತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಹಾಕಿದ ಮೇಲೆ ಪಕ್ಷದ ಮುಖಂಡರಾಗಲಿ, ಕಾರ್ಯಕರ್ತರಾಗಲಿ ಇಂತಹವರಿಗೆ ಬಿ ಫಾರಂ ನೀಡಿ ಎಂದು ಛಾಡಿ ಹೇಳಿಲ್ಲ. ಪ್ರಸನ್ನ ಅವರಿಗೆ ಎರಡನೇ ಪಟ್ಟಿಯಲ್ಲಿ ಹೆಸರಿತ್ತು. ಆದರೆ, ಅವರಲ್ಲಿ ಸಹನೆ. ತಾಳ್ಮೆಯಿಲ್ಲದೆ ಪಕ್ಷವನ್ನು ತ್ಯಜಿಸಿ ವಿರೋಧಿ ಪಕ್ಷಕ್ಕೆ ತೆರಳಿದ್ದಾರೆ. ಅವರು ಹೋದ ಮೇಲೆ ಪಕ್ಷಕ್ಕೆ ತೊಂದರೆಯಿಲ್ಲ. ಮೊದಲಿನಿಂದಲೂ ಇಲ್ಲಿವರೆಗೂ ಪಕ್ಷ ಸದೃಢವಾಗಿರುತ್ತದೆ ಎಂದು ತಿಳಿಸಿದರು.
ತತ್ವ ಸಿದ್ಧಾಂತದ ಮೇಲೆ ಪಕ್ಷ ಸಂಘಟನೆ: ಪಕ್ಷಕ್ಕಾಗಲಿ, ಕಾರ್ಯಕರ್ತರಿಗಾಗಲಿ, ಮುಖಂಡರಿಗಾಗಲಿ ಅವರ ಕೊಡುಗೆ ಏನು ಇಲ್ಲ. ಅವರು ಹೇಳಿರುವ ಹೇಳಿಕೆಯಂತೆ ಸಮಯಕ್ಕೆ ಸರಿಯಾಗಿ ಯಾರೂ ಸ್ಪಂದಿಸಿಲ್ಲ. ನನಗೆ ಸಹಕಾರ ನೀಡುತ್ತಿ ರಲಿಲ್ಲ. ಏಕಾ ಪಕ್ಷೀಯವಾಗಿ ನಡೆಯುತ್ತಿದ್ದರು ಎಂದು ಹೇಳುತ್ತಿರುವುದು ದೂರವಾದ ಸಂಗತಿ. ಅವರ ನಾಯಕತ್ವದಿಂದ ಪಕ್ಷ ಸಂಘಟನೆಯಾಗಿಲ್ಲ. ನಿಷ್ಠಾವಂತ ಕಾರ್ಯಕರ್ತರು ತತ್ವ ಸಿದ್ಧಾಂತದ ಮೇಲೆ ಸಂಘಟಿಸುತ್ತಿದ್ದಾರೆ ಎಂದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಕುಮಾರ್, ತಾಲೂಕು ಕಾಂಗ್ರೆಸ್ ಎಸ್‌ಸಿÕ, ಎಸ್ಟಿ ಘಟಕದ ಅಧ್ಯಕ್ಷ ವೈ.ಟಿ.ಹಳ್ಳಿ ಶಿವು, ನಗರ ಎಸ್ಸಿ ಘಟಕದ ಅಧ್ಯಕ್ಷ ವಸಂತಕುಮಾರ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ವಾಸಿಲ್ ಆಲಿ ಖಾನ್, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಮ್ಮ, ಮುಖಂಡ ಡಾ.ಡಿ.ಆರ್.ಭಗತ್ ರಾಮ್, ಚಂದ್ರಸಾಗರ್, ಶಿವಕುಮಾರ್ ಹಾಗೂ ನಗರಸಭಾ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.