ರಾಹುಲ್ ವಿರುದ್ಧ ಹೊಸ ಮಾನಹಾನಿ ಕೇಸ್
"ಆರೆಸ್ಸೆಸ್ ಕೌರವರು' ಹೇಳಿಕೆ ಬಿಸಿ
Team Udayavani, Apr 2, 2023, 7:20 AM IST
ನವದೆಹಲಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಂಕಷ್ಟದ ಮೇಲೆ ಸಂಕಷ್ಟ ಬಂದೊದಗುತ್ತಿದೆ. ಮಾನಹಾನಿ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ, ಸಂಸತ್ ಸದಸ್ಯತ್ವವನ್ನೂ ಕಳೆದುಕೊಂಡ ರಾಹುಲ್ ವಿರುದ್ಧ ಈಗ ಮತ್ತೊಂದು ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಜನವರಿಯಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿ ರಾಹುಲ್ ವಿರುದ್ಧ ಆರೆಸ್ಸೆಸ್ ಕಾರ್ಯಕರ್ತ ಕಮಲ್ ಭದೂರಿಯಾ ಎಂಬವರು ಸಲ್ಲಿಸಿದ ದೂರಿನ ಮೇರೆಗೆ ಉತ್ತರಾಖಂಡದ ಹರಿದ್ವಾರದ ಕೋರ್ಟ್ನಲ್ಲಿ ಕೇಸು ದಾಖಲಾಗಿದೆ.
ಜೋಡೋ ಯಾತ್ರೆ ವೇಳೆ ಹರ್ಯಾಣದ ಅಂಬಾಲದಲ್ಲಿ ಮಾತನಾಡಿದ್ದ ರಾಹುಲ್, “ಖಾಕಿ ಬಣ್ಣ ಚಡ್ಡಿ ಧರಿಸುವವರು, ಕೈಯ್ಯಲ್ಲಿ ಲಾಠಿ ಹಿಡಿಯುವವರು, ಶಾಖಾಗಳನ್ನು ನಡೆಸುವವರು 21ನೇ ಶತಮಾನದ ಕೌರವರು. ದೇಶದ 2-3 ಕೋಟ್ಯಧಿಪತಿಗಳು ಕೂಡ ಈ ಕೌರವರೊಂದಿಗೆ ಕೈಜೋಡಿಸಿದ್ದಾರೆ’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದ್ದು, ಏ.12ರಂದು ವಿಚಾರಣೆ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.