ಎಚ್ಚರ! ಇನ್ನೆರಡು ತಿಂಗಳು ಪರಿತಾಪ! ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚು ಖಚಿತ
ಮಳೆಯಿಂದ ಪರಿಸ್ಥಿತಿ ನಿಯಂತ್ರ ನಿರೀಕ್ಷೆ: ಐಎಂಡಿ
Team Udayavani, Apr 1, 2023, 7:15 AM IST
ನವದೆಹಲಿ/ಬೆಂಗಳೂರು: ಪ್ರಸಕ್ತ ಸಾಲಿನ ಬೇಸಗೆ ಪ್ರಖರವಾಗಿ ಇರಲಿದೆ ಎನ್ನುವುದು ತಾಪಮಾನ ಏರಿಕೆಯಿಂದ ದೃಢವಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಕೂಡ ಶನಿವಾರ ಈ ಅಂಶವನ್ನು ಪುಷ್ಟೀಕರಿಸಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮುಂದಿನ 2 ತಿಂಗಳು ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿಯೇ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ಮುನ್ನೆಚ್ಚರಿಕೆ ನೀಡಿದೆ.
ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ದೇಶದ ಕೇಂದ್ರ, ಪೂರ್ವ, ವಾಯವ್ಯ ಭಾಗದಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚೇ ಆಗಿರುತ್ತದೆ. ಇದರ ಜತೆಗೆ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಛತ್ತೀಸ್‌ಗಡ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹರ್ಯಾಣಗಳ ಕೆಲವು ಭಾಗಗಳಲ್ಲಿ ತಾಪಮಾನ ಸಾಮನ್ಯಕ್ಕಿಂತ ಹೆಚ್ಚೇ ಆಗಿರಲಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.
ನಿರ್ಧಾರ ಹೇಗೆ?
ಬಯಲು ಪ್ರದೇಶದಲ್ಲಿ ತಾಪಮಾನ ಕನಿಷ್ಠ 40 ಡಿಗ್ರಿ ಸೆಲಿÏಯಸ್, ಕರಾವಳಿಯಲ್ಲಿ 37 ಡಿಗ್ರಿ ಸೆಲಿÏಯಸ್, ಗುಡ್ಡಗಾಡು ಪ್ರದೇಶದಲ್ಲಿ 30 ಡಿಗ್ರಿ ಸೆಲಿÏಯಸ್ ಏರಿಕೆಯಾದರೆ ಅದನ್ನು ಬಿಸಿ ಗಾಳಿಯ ಪರಿಸ್ಥಿತಿ ಎಂದು ತೀರ್ಮಾನಿಸಲಾಗುತ್ತದೆ. 1901ರ ಬಳಿಕ ಫೆಬ್ರವರಿಯಲ್ಲಿ ಎರಡನೇ ಅತ್ಯಧಿಕ ತಾಪಮಾನ ತಿಂಗಳು ಎಂದು ದಾಖಲೂ ಆಗಿತ್ತು. ಕಳೆದ ವರ್ಷದ ಮಾರ್ಚ್‌ನಲ್ಲಿ ಕೂಡ 121 ವರ್ಷಗಳ ಮೂರನೇ ಅತ್ಯಂತ ಗರಿಷ್ಠ ಒಣ ಹವೆ ಎಂಬ ಅಂಶ ಕೂಡ ದಾಖಲಾಗಿತ್ತು.
ಮಳೆಯೂ ಬೀಳಲಿದೆ:
ತಾಪಮಾನ ಏರಿಕೆಯ ಜತೆಗೆ ಈ ತಿಂಗಳಲ್ಲಿ ದೇಶದ ಅಲ್ಲಲ್ಲಿ ಮಳೆಯೂ ಬೀಳಲಿದೆ. ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವರ್ಷ ಧಾರೆಯ ಸಿಂಚನ ತಂಪನ್ನೆರೆಯುವ ನಿರೀಕ್ಷೆ ಇದೆ. 1971ರಿಂದ 2020ರ ನಡುವಿನ ಅವಧಿಯಲ್ಲಿ ಏಪ್ರಿಲ್‌ನಲ್ಲಿ ಸರಾಸರಿ ಮಳೆಯಾಗಿತ್ತು. ಹೀಗಾಗಿ, ಈ ತಿಂಗಳಲ್ಲಿ ಮಳೆ ಬೀಳುವ ಸಾಧ್ಯತೆಯನ್ನು ಐಎಂಡಿ ನೀಡಿದೆ.
ಬೆಳೆಗಳಿಗೆ ಹಾನಿ:
ಮುಂಗಾರು ಪೂರ್ವ ಮಳೆಯಿಂದಾಗಿ ಉತ್ತರ ಪ್ರದೇಶದ ಕೆಲವು ಭಾಗಗಳು, ಹರ್ಯಾಣ, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿನ ತರಕಾರಿ ಮತ್ತು ಹಣ್ಣುಗಳ ನಾಶವಾಗಿದೆ.
ಬೆಂಗಳೂರಲ್ಲಿ 35; ಕಲಬುರಗಿಯಲ್ಲಿ 38
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ತಾಪಮಾನ 35 ಡಿಗ್ರಿ ಸೆಲಿÏಯಸ್ ದಾಖಲಾಗಿದೆ. ಕಲಬುರಗಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಯಚೂರು 37, ಗದಗ 36.2, ವಿಜಯಪುರ, ಮೈಸೂರು, ಶಿವಮೊಗ್ಗ ತಲಾ 36, ಮಂಡ್ಯ 35.6, ಮಂಗಳೂರು 34.5 ಡಿಗ್ರಿ ಸೆಲಿÏಯಸ್ ಉಷ್ಣಾಂಶ ದಾಖಲಾಗಿದೆ.
ಇದೇ ವೇಳೆ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಏ.3ರ ವರೆಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ಕೊಟ್ಟಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಏ.3ರ ವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಗಳಿವೆ.
ಶನಿವಾರ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರೆದಿದೆ. ಕೋಲಾರದ ರಾಯಲ್ಪಾಡುವಿನಲ್ಲಿ 7 ಸೆಂ.ಮೀ, ದೇವನಹಳ್ಳಿಯಲ್ಲಿ 3 ಸೆಂ.ಮೀ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.