ಜಾತಕ ಕುಂಡಲಿಗಳು ಪ್ರೀತಿ,ಪ್ರೇಮ ವಿಚಾರದ ಬಗ್ಗೆ ಏನು ಹೇಳುತ್ತವೆ ?


Team Udayavani, Apr 30, 2016, 8:09 AM IST

4.jpg

ಜೀವನದಲ್ಲಿ ತಂದೆತಾಯಿ ಪ್ರೀತಿ ಬೇರೆ, ಅಣ್ಣತಮ್ಮಂದಿರ ಪ್ರೀತಿ ಬೇರೆ. ಗೆಳೆತನದ ಪ್ರೀತಿ ವಿಶ್ವಾಸ ಬೇರೆ. ಸತಿಪತಿ ವಿಚಾರದಲ್ಲಿನ ಪ್ರೀತಿಯ ಬಗೆಯೇ ಬೇರೆ. ಇಲ್ಲಿಂದಾಚೆಗೆ ಸಲ್ಲುವ ಪ್ರೀತಿಗಳೂ ಬೇರೆ ಬೇರೆ. ಮದುವೆಗಿಂತ ಮುಂಚಿನ ಸಂಬಂಧ, ಮದುವೆಯ ನಂತರದ ಸಂಬಂಧ, ಜೀವನದಲ್ಲಿ ದಾರಿ ತಪ್ಪಿ ನಡೆವ ಲೈಂಗಿಕ ವಿಚಾರ ಇತ್ಯಾದಿ ಎಲ್ಲವೂ ಬಗೆಬಗೆಯ ವಿಧಾನಗಳಿಂದಾಗಿ ವಿಚಿತ್ರವಾದ ಸಂಗತಿಗಳನ್ನು ಹೊರಚೆಲ್ಲುತ್ತವೆ. ಕೆಲವರಿಗೆ ಸಲಿಂಗ ಪ್ರೇಮವೇ ಅನನ್ಯ. ಉಭಯ ರೀತಿಯ ಪ್ರೇಮವ್ಯವಹಾರಗಳಲ್ಲಿ ತೊಡಗಿಕೊಂಡವರೂ ಇದ್ದಾರೆ. ಇದಕ್ಕೆಲ್ಲಾ ಕುಂಡಲಿ ಹೀಗೆ ಹೇಳುತ್ತದೆ.

ಮದುವೆಗಳು ಭದ್ರವಾಗುವುದು ಅಪರೂಪ
ಮದುವೆ ಎನ್ನುವುದು ಮಾನವನ ಜೀವನದಲ್ಲಿ ಉದಯವಾದ ವಿಧವಿಧವಾದ ನಾಗರೀಕತೆಗಳು ಬೆಳೆದಾದ ಮೇಲೆ ಹುಟ್ಟಿಕೊಂಡ ಒಂದು ಸಂಸ್ಕಾರ. ಒಂದು ಗಂಡು ಜೀವನದ ಸಂದರ್ಭದಲ್ಲಿ ಮಧುರವಾದೊಂದು ಜೀವನವನ್ನು ಪ್ರಾರಂಭಿಸಲು ಮಂಗಳಕಾರ್ಯದ ಚೌಕಟ್ಟಿನಲ್ಲಿ ಹೆಣ್ಣುಗಂಡುಗಳನ್ನು ಅಧಿಕೃತವಾಗಿ ಒಗ್ಗೂಡಿಸುವ ವಿಧಾನವಾಗಿದೆ. ಇಲ್ಲಿ ಪ್ರತಿ ಹೆಣ್ಣಿನ ಗಂಡಿನ ನಕ್ಷತ್ರ ರಾಶಿಗಳ ಹೊಂದಾಣೀಕೆ ಹಾಗೂ ಹೆಣ್ಣು ಗಂಡಿನ ಜಾತಕ ಕುಂಡಲಿಗಳ ಕಳತ್ರ ಸ್ಥಾನಗಳ ಬಲಾಬಲಗಳ ಮೇಲಿಂದ ಮದುವೆ ಎಂಬ ಬಾಳಿನ 

ಮಧುರಪಲ್ಲವಿಯನ್ನು ಪ್ರಾರಂಭಿಸಬೇಕಾಗುತ್ತದೆ. ಶುಕ್ರ ಹಾಗೂ ಕುಜರು ತಂತಮ್ಮ ಶಕ್ತಿ ಹಾಗೂ ವಿನಾಶಕ ಶಕ್ತಿಯನ್ನು ಒಬ್ಬನ ಅಥವಾ ಒಬ್ಬಳ ಆತಂಕದಲ್ಲಿ ಸಕಾರಾತ್ಮಕವಾಗಿ ಮಿಡಿಸುವಂತಾದರೆ ಮದುವೆಯ ಬಂಧಕ್ಕೆ ಅನನ್ಯತೆಯ ಸಿದ್ಧಿ ದೊರಕುತ್ತದೆ. ಅದರ ಕಳತ್ರಸ್ಥಾನ ಶಕ್ತಿ ಒದಗುವುದು ಕುಜ ಅಥವಾ ಶುಕ್ರರು ದೋಷಕರಾಗದೇ ಇರುವುದು. ನಕ್ಷತ್ರ ಹಾಗೂ ರಾಶಿಗಳು ಹೆಣ್ಣು ಗಂಡಿನ ಸಂಬಂಧವಾಗಿ ಯುಕ್ತವಾಗಿ ಕೂಡಿ ಬರುವುದು ಸುಲಭದ ಮಾತಲ್ಲ. ಕಷ್ಟದ ವಿಚಾರ ಇದು.

ಹೊಂದಾಣಿಕೆ, ಆಯ್ಕೆಗಳು ಸ್ವರ್ಗ ಭಾಗ್ಯದ ಸಿದ್ಧಿಯೆ ?
ಸಾಮಾನ್ಯವಾಗಿ ಹೆಣ್ಣು ಗಂಡಿನ ನಿಶ್ಚಿತಾರ್ಥ ಸ್ವರ್ಗದಲ್ಲಿ ನಿಶ್ಚಯಿಸಲ್ಪಟ್ಟಿರುತ್ತದೆ ಎಂದು ರೂಢಿಯಲ್ಲಿ ಕೇಳಿ ಬರುವ ಒಂದು ಮಾತಿದೆ. ನಮ್ಮ ಜೀವನದ ಸಂದರ್ಭದಲ್ಲಿ ಈ ಮಾತು ಹೌದು ಎಂಬುದನ್ನು ಯಾರೇ ಆಗಲಿ ಒಪ್ಪಿಕೊಳ್ಳಬೇಕು. ಸಿನಿಮಾ ಜೀವನ ಆದರ್ಶವಾಗಬಾರದು. ಆದರೂ ಉದಾಹರಣೆಗೆ ಸಿನಿಮಾ ರಂಗದ ವಿಚಾರವನ್ನು ನಾವು ವಿಶ್ಲೇಷಿಸಲೇ ಬೇಕು. ಯಾರು ಯಾರನ್ನೋ ಮದುವೆಯಾಗ ಬೇಕೆಂಬ ವಿಚಾರ ನಾವು ಕೇಳುತ್ತಿರುತ್ತೇವೆ. ಆದರೆ ನಂಬಿದ ವಿಚಾರವೇ ಬೇರೆ. ಒಬ್ಬರು ಇನ್ನೊಬ್ಬರಾರನ್ನೋ ಇನ್ನೊಬ್ಬರು ಮತ್ತೂಬ್ಬರ್ಯಾರನ್ನೋ ವರಿಸುತ್ತಾರೆ. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ತಿಳಿದದ್ದು ಬೇರೆ ಕತೆ ಇರುತ್ತದೆ. ನಿಜವಾದ ಕತೆ ಹೊಸತಿರುವಿಗೆ ಶೀಘ್ರವಾಗಿ ಬದಲಾಗಿ ತಿಳಿದಿರದ ಎರಡು ಜೀವಗಳು ಸತಿಪತಿಗಳಾಗುತ್ತಾರೆ.

ಐಶ್ವರ್ಯ ರೈ, ಅಭಿಷೇಕ್‌ಬಚ್ಚನ್‌ ಮದುವೆ

ನಿಜ, ಸ್ವರ್ಗದಲ್ಲಿ ಸತಿಪತಿಗ ಳಾಗಿರಬೇಕೆಂಬ ನಿರ್ಧಾರವಾದದ್ದು ಐಶ್ವರ್ಯ ಹಾಗೂ ಅಭಿಷೇಕ್‌ ಹೆಸರುಗಳಾಗಿದ್ದವು. ಇವರ ವಿಚಾರವನ್ನು ವಿವರವಾಗಿ ವಿಶ್ಲೇಷಿಸಲಾರೆ. ವೈಯುಕ್ತಿಕ ವಿಚಾರಗಳು ಇಲ್ಲಿ ಅಪ್ರಸ್ತುತ. ಅವೇನೇ ಇರಲಿ ಐಶ್ವರ್ಯ ರೈ ಬಚ್ಚನ್‌ ಕುಟುಂಬದ ಸೊಸೆಯಾದಳು. ಕರ್ನಾಟಕದ ಐಶ್ವರ್ಯ ಯಾರು? ಮೂಲ ಅಲಹಾಬಾದ್‌ ಕಡೆಯ ಅಭಿಷೇಕ್‌ ಯಾರು? ಎತ್ತಣಿಂದೆತ್ತ ಸಂಬಂಧ? ಎಂಬ ಅಲ್ಲಮನ ಮಾತು ಇಲ್ಲಿ ನೆನಪಾಗದಿರದು.  ಯಾರು ಸೋನಿಯಾ, ಯಾರು ರಾಜೀವ್‌ ಗಾಂಧಿ? ಆದರೆ ಸತಿಪತಿಗಳಾದರು. ಸ್ವತಃ ಸೋದರಮಾವನ ಸೋದರತ್ತೆಯ ಮಕ್ಕಳು ಸತಿಪತಿಗಳಾಗುತ್ತಾರೆ. ಇದುಕೂಡಾ ಚೋದ್ಯವೇ. ಅಂತೂ ಸಲ್ಮಾನ್‌ಖಾನ್‌ ಇನ್ನೂ ಒಬ್ಬ ಅಧಿಕೃತ ಬೇಡಿಕೆಯಲ್ಲಿರುವ ನಟ. ಸುರದ್ರೂಪಿ ವಯಸ್ಸು ಇನ್ನೂ 46 ಅಷ್ಟೇ. ಹೆಚ್ಚೇಕೆ ನಮ್ಮ ರಾಹುಲ್‌ಗಾಂಧಿ ಕೂಡಾ. ಇವರಿಗೆ ಈಗ 41. 54 ವಯಸ್ಸಾದಾಗ ಖ್ಯಾಥಿ ಪಡೆದ ಅಂತಾರಾಷ್ಟ್ರೀಯ ಮಟ್ಟದ ಬರಹಗಾರ ಸಲ್ಮಾನ್‌ರಶಿª ತನಗಿಂತ 22 ವರ್ಷ ಕಿರಿಯಳಾದ ಪದ್ಮಾಲಕ್ಷ್ಮೀ ಯನ್ನು ಮದುವೆಯಾದರು. ವಯೋವೃದ್ಧ ಎನ್‌ ಟಿ ರಾಮರಾವ್‌ ಲಕ್ಷ್ಮೀ ಪಾರ್ವ ತಿಯೆಂಬ ಹೆಣ್ಣುಮಗಳನ್ನು ಆರಾಧಿಸಿದರು. ಇನ್ನಿಷ್ಟು ಹೆಸರುಗಳು ರಾಜ್ಯದ ಅನ್ಯರಾಜ್ಯದ ಹೆಚ್ಚಿನ ಪ್ರಮಾ ಣದಲ್ಲಿವೆ.  ಹಾಲಿ ಚಾಲ್ತಿಯಲ್ಲಿರುವ ರಾಜಕಾರಣಿಗಳು ಕಟ್ಟಿಕೊಂಡವರನ್ನು ಬಿಟ್ಟು ಇನ್ನೆಲ್ಲಿಗೋ ದಾರಿಮಾಡಿಕೊಂಡ ಪ್ರಮುಖ ವ್ಯಕ್ತಿಗಳು ಇತ್ಯಾದಿ ಇತ್ಯಾದಿ ಯಾದಿ ಮುಗಿಯುವುದೇ ಇಲ್ಲ. ಮೀನಾಕುಮಾರಿ, ನರ್ಗೀಸ್‌ ರೇಖಾ, ದೀಪಿಕಾ ಪಡುಕೋಣೆ, ಕರೀನಾ ಅಜರುದ್ದೀನ್‌, ಫ್ರಾನ್ಸಿನ ಅಧ್ಯಕ್ಷ ಸರ್ಕೋಜಿ. ಸೈಫ್ ಅಲಿ ಖಾನ್‌ ಇಟಲಿಯ ಹಾಲಿ ಅಧ್ಯಕ್ಷ, ಮಾಜಿ ಕ್ರಿಕೆಟ್‌ ಕಫ್ತಾನ್‌ ಸೌರವ್‌ ಗಂಗೂಲಿ ಇವರೆಲ್ಲ ನೀಗಿಕೊಂಡ ಬಾಳಸಂಗಾತಿಗಳ ವಿಷಯದಲ್ಲಿನ ತಳಮಳ ಗಮನಾರ್ಹ. 

ಭಾರತದಲ್ಲಿ ಬದಲಾಗಿರುವ ಕಾಲಧರ್ಮ

ಸಾವಿರ ಸುಳ್ಳು ಹೇಳಿ ಒಂದು ಲಗ್ನಮಾಡು ಎಂಬ ನಾಣ್ನುಡಿ ನಮ್ಮ ಸಮಾಜದಲ್ಲಿತ್ತು. ಇದಕ್ಕೆ ಕಾರಣ ವಾಸ್ತವವಾಗಿ ಜಾತಕ ಕುಂಡಲಿಯನ್ನು ಹೊಂದಾಣಿಕೆ ಮಾಡಿ ನೂರಕ್ಕೆ ನೂರು ಹೆಣ್ಣುಗಂಡುಗಳು ಸತಿಪತಿಗಳಾಗುವಂತೆ ಜಾತಕ ಜೋಡಿಸುವುದೆಂದರೆ ನೂರರಲ್ಲಿ ಕೇವಲ 40 ರಿಂದ 45 ಶೇ. ಮಂದಿಗೆ ಮಾತ್ರ ಮದುವೆ ಯೋಗ.  ಸಂಸಾರವನ್ನು ಶಾಂತಯುತವಾಗಿ ನಡೆಸಿಕೊಂಡು ಹೋಗುವ ಯೋಗ ಇರುತ್ತಿತ್ತು. ಉಳಿದಂತೆ ನೂರಕ್ಕೆ ಶೇ 55 ರಿಂದ 60 ಮಂದಿಗೆ ಹಿರಿಯರು, ದಲ್ಲಾಳಿಗಳು ಇನ್ಯಾರೋ ಸಂಬಂಧಿಸಿದವರು ಸಾವಿರ ಸುಳ್ಳೂ ಹೇಳಿ ಒಂದು ಮದುವೆ ಮಾಡುತ್ತಿದ್ದರು. ನಂತರ ಅವರ ಹಣೆಬರಹ. ನಾವಂತೂ ಮದುವೆ ಮಾಡಿದ್ದೇವೆ ಎಂದು ಹಿರಿಯರು ಕೈತೊಳೆದುಕೊಳ್ಳುವ ಸ್ಥಿತಿ ತುಂಬಾ ಇತ್ತು. ಇಂದು ಕಾಲ ಬದಲಾಗಿದೆ. ಹೆಣ್ಣುಗಂಡುಗಳು ಸತಿಪತಿಯರಾದ ಮೇಲೆ ಬಹಳಷ್ಟು ದಾಂಪತ್ಯಗಳು ವಿಚ್ಛೇದನಕ್ಕಾಗಿ ಬಯಸುವವರ ಸಂಖ್ಯೆ ಜಾಸ್ತಿ ಇದೆ. ಸಾಮ, ಆನ್ಯವಾಗಿ ಜಾತಕ ಕುಂಡಲಿಯಲ್ಲಿ ಬಾಳ ಸಂಗಾತಿಯ ಮನೆಯ ಅಧಿಪತಿ ಅಂದರೆ ಜಾತಕದಲ್ಲಿನ ಏಳನೇ ಮನೆಯ ಅಧಿಪತಿ ಪ್ರತಿಯೊಬ್ಬನ ಜಾತಕದಲ್ಲೂ ಮಾರಕ ಶಕ್ತಿ ಪಡೆದಿರುತ್ತಾನೆ. 

ಈ ಮಾರಕ ಶಕ್ತಿಯ ಕೃತಕ ಸ್ವರೂಪಕ್ಕೆ ಸಂಬಂಧಿಸಿದ ವಿಚಾರ ಹೆಚ್ಚು ಬಲಪಡೆದಾಗ ದಾಂಪತ್ಯ ಕುಸಿಯುವ ಮಟ್ಟಕ್ಕೆ ಹೋಗುತ್ತದೆ. ಹಿಂದಿನ ಸಮಾಜ ಹೆಣ್ಣನ್ನು ಅಬಲೆ ಎಂದು ಕರೆಯಿತು. ಇಂದು ಅಬಲೆ ಎಂಬ ವಿಚಾರ ನಿಧಾನವಾಗಿ ತನ್ನ ಅರ್ಥದ ವ್ಯಾಪ್ತಿಯನ್ನು ಮೀರಿ ಸ್ವತಂತ್ರತೆಗೆ ಸ್ವತಂತ್ರವಾಗಿ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ವಿಚಾರಕ್ಕೆ ಕಾಲಿರಿಸಿದೆ. ಜಾತಕ ಕುಂಡಲಿಯಲ್ಲಿನ ಪ್ರೀತಿ ಪ್ರೇಮದ ಸತಿಪತಿಗಳ ಸಂಬಂಧದ ವಿಚಾರದ ಮಗ್ಗಲುಗಳು ಹೊಸದೊಂದು ಆಯಾಮವನ್ನು ಸೃಷ್ಟಿಸುವುದಕ್ಕೆ ಮುಂದಾಗಿದೆ ಎಂದು ಇದರರ್ಥವಲ್ಲ. ಜಾತಕ ತನ್ನ ಪಾಡಿಗೆ ಯುಕ್ತವಾದ ಹೊಂದಾಣಿಕೆ ಮಾಡಬಲ್ಲುದಾದರೂ ಬದಲಾಗುತ್ತಿರುವ ಸಂಸ್ಕೃತಿಯ ಚೌಕಟ್ಟು ಸಂಸ್ಕಾರದ ಉತ್ತಮ ಕುಟುಂಬದ ವ್ಯವಸ್ಥೆಯ ಬೇರುಗಳನ್ನು ಕಿತ್ತೆಸೆದಿದೆ. ಜಾತಕ ಸೋತಿಲ್ಲ ಮನುಷ್ಯ ಸೋತಿದ್ದಾನೆ. 

ಈಗಲೂ ಜಾತಕ ಕುಂಡಲಿಗಳ ಸಂಯೋಜನೆ ಬೇರೆ ಬೇರೆ ಅಂಶಗಳ ನೆಲೆಯಲ್ಲಿ ಸಂಭವಿಸುವಂತಾದರೆ ಮುರಿದು ಬೀಳುತ್ತಿರುವ ಸಂಸಾರದ, ಕೌಟುಂಬಿಕ ವ್ಯವಸ್ಥೆಯನ್ನು ಸರಿಪಡಿಸಬಹುದು. ಸಾವಿರ ಸುಳ್ಳುಗಳನ್ನು ಹೇಳಿ ಮದುವೆ ಮಾಡಬೇಕಾಗಿಲ್ಲ. ಮನಸ್ಸುಗಳ ಹೊಂದಾಣಿಕೆ ಮಾಡಲು ಜನ್ಮಕುಂಡಲಿಗಳ ಜೋಡಣೆಯೇ ರಾಮಬಾಣ. ಆದರೆ ಅದು ಸರಿಯಾಗಿ ಆಗಬೇಕು. ಪ್ರೀತಿ ಪ್ರೇಮ ಪರಸ್ಪರ ಹೊಂದಾಣಿಕೆ ಈಗಲೂ ಸಾಧ್ಯ.

ಅನಂತಶಾಸ್ತ್ರೀ 

ಟಾಪ್ ನ್ಯೂಸ್

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.