ಸಿತಾರ್ – ಬಾನ್ಸುರಿ ಜುಗಲ್‌ಬಂದಿ “ಬಸಂತ್ ಉತ್ಸವ್’
Team Udayavani, Apr 3, 2023, 5:40 AM IST
ಉಡುಪಿ: ವಿನಯ್ಸ್ ಅಕಾಡೆಮಿ ಉಡುಪಿ-ಮಣಿಪಾಲ್ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದರಾದ ಪಂ| ಪ್ರವೀಣ್ ಗೋಡ್ಖಿಂಡಿ, ಉಸ್ತಾದ್ ರಫೀಕ್ ಖಾನ್ ಅವರಿಂದ ಸಿತಾರ್-ಬಾನ್ಸುರಿ ಜುಗಲ್‌ಬಂದಿ “ಬಸಂತ್ ಉತ್ಸವ್’ ನಡೆಯಿತು. ಸಿತಾರ್-ಬಾನ್ಸುರಿ ವಾದನದಲ್ಲಿ ತಬಲಾಪಟು ಮಾಯಾಂಕ್ ಬೇಡೆಕರ್ ಸಾಥ್ ನೀಡಿದರು. ಶಾಸ್ತ್ರೀಯ ಸಂಗೀತ ವಿವಿಧ ರಾಗಗಳಲ್ಲಿನ ತಾಳಗಳ ಹೊಂದಾಣಿಕೆ ಮಾಡಿಕೊಂಡು ಪ್ರಸ್ತುತಪಡಿಸಿದ ಸಂಗೀತ ಕಛೇರಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿತು.
ಮಾಹೆ ವಿ. ವಿ. ಸಹಕುಲಾಧಿಪತಿ ಡಾ| ಎಚ್. ಎಸ್ ಬಲ್ಲಾಳ್ ಸಂಗೀತ ಕಚೇರಿಯನ್ನು ಉದ್ಘಾಟಿಸಿದರು. ಆಭರಣ ಮೋಟಾರ್ಸ್‌ನ ಸಂಧ್ಯಾ ಕಾಮತ್, ಡಾ| ಟಿ.ಎಂ.ಎ ಪೈ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಶಶಿಕಿರಣ್ ಉಮಾಕಾಂತ್, ವಿನಯ್ಸ ಆಕಾಡೆಮಿ ನಿರ್ದೇಶಕ ವಿನಯ ಭಟ್ ಉಪಸ್ಥಿತರಿದ್ದರು.
ಡಾ| ಸ್ಮಿತಾ ಪ್ರಭು ಸ್ವಾಗತಿಸಿ, ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.