ಒಂದೇ ದಿನದಲ್ಲಿ 75 ಮತಗಟ್ಟೆ ಪರಿಶೀಲನೆ: ಚೆಕ್‌ಪೋಸ್ಟ್‌ಗಳಲ್ಲಿಯೂ ತೀವ್ರ ತಪಾಸಣೆ
Team Udayavani, Apr 3, 2023, 7:52 AM IST
ಬೆಳ್ತಂಗಡಿ : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ಚುನಾವಣಾ ಧಿಕಾರಿ ಯೋಗೇಶ್ ಎಚ್.ಆರ್. ಸಹಿತ ವಿವಿಧ ಅಧಿಕಾರಿಗಳು ರವಿವಾರ ಬೆಳ್ತಂಗಡಿ ತಾಲೂಕಿನ ಮತಗಟ್ಟೆಗಳು ಹಾಗೂ ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ ನಡೆಸಿದರು.
ಗುರುವಾಯನಕೆರೆ ಔಟ್‌ಪೋಸ್ಟ್ ಸಹಿತ ನಾರಾವಿಯಿಂದ ಬೆಳ್ತಂಗಡಿವರೆಗೆ 50ಕ್ಕೂ ಅಧಿಕ ಮತಗಟ್ಟೆ, ಧರ್ಮಸ್ಥಳ, ನಿಡ್ಲೆ ಸುತ್ತಮುತ್ತ 25ಕ್ಕೂ ಅಧಿಕ ಮತಗಟ್ಟೆಯನ್ನು ಚುನಾವಣಾಧಿಕಾರಿಯವರು ವೀಕ್ಷಿಸಿ ದರು. ಮತಗಟ್ಟೆಯಲ್ಲಿ ಅಂಗವಿಕಲರಿಗೆ ಅನುಕೂಲವಾಗುವಂತೆ ಶಾಶ್ವತ ರ್‍ಯಾಂಪ್ ಇಲ್ಲದಲ್ಲಿ ರ್‍ಯಾಂಪ್ ನಿರ್ಮಾಣ, ರೇಲಿಂಗ್ಸ್ ಅಳವಡಿಕೆಗೆ ಅಗತ್ಯ ಕ್ರಮ ವಹಿಸುಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ವಿಎ ಗಳಿಗೆ ಸೂಚಿಸಲಾಯಿತು.
ಅಧಿಕಾರಿಗಳ ತಂಡವು ನಾರಾವಿ ಸಮೀಪ ಹಾಗೂ ಕೊಕ್ಕಡ ಪ್ರದೇಶದ ಪೊಲೀಸ್ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ನಡೆಸಿತು. ರವಿವಾರವಾದ್ದ ರಿಂದ ಯಾತ್ರಾರ್ಥಿಗಳ ವಾಹನ ಅಧಿಕ ವಾಗಿದ್ದರೂ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಯಿತು. ಯಾವುದೇ ರೀತಿಯ ಪ್ರಕರಣಗಳು ಕಂಡುಬಂದಿಲ್ಲ.
ಮಾಲಾಡಿ ಹಾಗೂ ಅಳದಂಗಡಿ ವ್ಯಾಪ್ತಿ ಯಲ್ಲಿ ಸರಕಾರದ ಯೋಜನೆಗಳನ್ನು ಸಾರುವ ರಾಷ್ಟ್ರೀಯ ಪಕ್ಷದ ನಾಯಕರ ಭಾವಚಿತ್ರವಿದ್ದ ಎರಡು ಫ್ಲೆಕ್ಸ್ ತೆರವುಗೊಳಿಸ ಲಾಯಿತು. ಸುಲ್ಕೇರಿ ಮೊಗ್ರು ಪ್ರದೇಶ ದಲ್ಲಿದ್ದ ಕೇಂದ್ರ ಸರಕಾರದ ಯೋಜನೆಗಳ ಕಟೌಟ್ ತೆರವುಗೊಳಿಸಿದರು.
ಕಂದಾಯ ಇಲಾಖೆಯ ಪರಮೇಶ್, ಶ್ರೀಧರ್ ತಂಡದಲ್ಲಿದ್ದರು.
ದೂರು ನೀಡಿ
ಚುನಾವಣೆ ನೀತಿ ಸಂಹಿತೆ ಉಲ್ಲಂ ಘನೆ ಕಂಡು ಬಂದಲ್ಲಿ, ಅನಧಿಕೃತ ಯಾವುದಾದರೂ ಚಟುವಟಿಕೆಗಳು ಗಮನಕ್ಕೆ ಬಂದಲ್ಲಿ ಚುನಾವಣೆ ಶಾಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಒದಗಿಸಬಹುದು ಅಥವಾ ನೇರವಾಗಿ ನನ್ನ ದೂರವಾಣಿ ಸಂಖ್ಯೆ 9448416618 ಕ್ಕೆ ಕರೆ ಮಾಡಬಹುದು ಎಂದು ಯೋಗೇಶ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.