ಸಾಂಸ್ಕೃತಿಕ ಕೇಂದ್ರದ ಅತಿಥಿಗಳಿಗೆ ಹಲ್ವಾದೊಂದಿಗೆ 500 ರ ನಕಲಿ ನೋಟು ಕೊಟ್ಟ ಅಂಬಾನಿ ಕುಟುಂಬ!
Team Udayavani, Apr 3, 2023, 11:50 AM IST
ಮುಂಬಯಿ: ಭಾರತ ಮತ್ತು ವಿದೇಶಗಳ ಕಲಾವಿದರು, ಧಾರ್ಮಿಕ ಮುಖಂಡರು, ಕ್ರೀಡಾಳುಗಳು ಮತ್ತು ಉದ್ಯಮಿಗಳ ಜತೆಗೆ ದೇಶದ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆ ಇತ್ತೀಚೆಗೆ ಆಗಿದೆ.
ಅದ್ಧೂರಿ ಸಮಾರಂಭದಲ್ಲಿ ಹತ್ತಾರು ಸೆಲೆಬ್ರಿಟಿಗಳು ನೃತ್ಯ, ಮನರಂಜನೆಯನ್ನು ನೀಡಿದ್ದಾರೆ. ಬಂದಿರುವ ಅತಿಥಿಗಳಿಗೆ ಭಾರತೀಯ ಆಹಾರವನ್ನು ನೀಡಿದ್ದಾರೆ. ರೊಟ್ಟಿ, ದಾಲ್, ಪಾಲಾಕ್ ಪನೀರ್, ಕರಿ, ಹಲ್ವಾ, ಸಿಹಿತಿಂಡಿ, ಪಾಪಡ್ ಮತ್ತು ಲಡ್ಡೂ ಮುಂತಾದ ಭಾರತೀಯ ಭಕ್ಷ್ಯಗಳನ್ನು ನೀಡಿದ್ದಾರೆ.
ಈ ಭಕ್ಷ್ಯಗಳಲ್ಲಿ ಸಿಹಿ ತಿಂಡಿಯೊಂದರ ಜೊತೆ 500 ರೂ ನೋಟುಗಳನ್ನು ಇಟ್ಟಿರುವ ಫೋಟೋವೊಂದು ವೈರಲ್ ಆಗಿದೆ. ಉತ್ತರ ಭಾರತದ ಜನಪ್ರಿಯ ಸಿಹಿ ಖಾದ್ಯಗಳಲ್ಲಿ ಒಂದಾಗಿರುವ ʼದೌಲತ್ ಕಿ ಚಾತ್ʼ ನೊಂದಿಗೆ 500 ರೂ. ನೋಟುಗಳನ್ನು ಅತಿಥಿಗಳಿಗೆ ನೀಡಿದ್ದಾರೆ.
ಇದನ್ನೂ ಓದಿ:ಬೆಳೇಶ್ವರ ಮಹಾದೇವ್ ದೇವಸ್ಥಾನವನ್ನು ಕೆಡವಿದ ಇಂದೋರ್ ನಗರ ಪಾಲಿಕೆ
ಹಲ್ವಾ ರೀತಿಯಲ್ಲಿರುವ ʼದೌಲತ್ ಕಿ ಚಾತ್ʼ ಸಿಹಿಯನ್ನು ನೋಟುಗಳ ಜೊತೆಯೇ ನೀಡುವುದು ಕ್ರಮ. ಈ ನೋಟುಗಳು ನಿಜವಾದ ನೋಟುಗಳಲ್ಲ. ನಕಲಿ ನೋಟುಗಳು. ʼದೌಲತ್ ಕಿ ಚಾತ್ʼ ಸಿಹಿ ಪಕ್ಕದಲ್ಲಿ ನೋಟುಗಳನ್ನು ಇಡುತ್ತಾರೆ. ಈ ತಿಂಡಿ ಉತ್ತರ ಭಾರತದಲ್ಲಿ ಜನಪ್ರಿಯ ಖಾದ್ಯವಾಗಿದೆ.
ನೀತಾ ಅಂಬಾನಿ ಅವರ ಸಾಂಸ್ಕೃತಿಕ ಕೇಂದ್ರಕ್ಕೆ ಬಂದ ಅತಿಥಿಗಳಿಗೂ ಈ ತಿಂಡಿಯನ್ನು ನೀಡಲಾಗಿದೆ. ಅದರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೂಪರ್ ಸ್ಟಾರ್ ರಜನಿಕಾಂತ್, ಅಮೀರ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕ್ ಚೋಪ್ರಾ, ವರುಣ್ ಧವನ್, ಸೋನಮ್ ಕಪೂರ್, ಅನುಪಮ್ ಖೇರ್, ಜಾವೇದ್ ಅಖ್ತರ್, ಶಬಾನಾ ಅಜ್ಮಿ, ಸುನೀಲ್ ಶೆಟ್ಟಿ, ಶಾಹಿದ್ ಕಪೂರ್, ವಿದ್ಯಾ ಬಾಲನ್, ಆಲಿಯಾ ಭಟ್, ದಿಯಾ ಮಿರ್ಜಾ, ಶ್ರದ್ಧಾ ಕಪೂರ್, ರಾಜು ಹಿರಾನಿ, ತುಷಾರ್ ಕಪೂರ್ ಸೇರಿದಂತೆ ಎಮ್ಮಾ ಚೇಂಬರ್ಲೇನ್, ಗಿಗಿ ಅವರಂತಹ ಅಂತಾರಾಷ್ಟ್ರೀಯ ಖ್ಯಾತಿಯ ಮಾಡೆಲ್‌ಗಳು ಭಾಗವಹಿಸಿ ಸಾಂಸ್ಕ್ರೃತಿಕ ಸಂಜೆಯ ರಂಗನ್ನು ಹೆಚ್ಚಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.