IAS ಹುದ್ದೆ ಬಿಟ್ಟು ಪ್ರತಿಷ್ಠಿತ ಕಂಪನಿಗಳ CEO ಆಗಿ ಕಾರ್ಯನಿರ್ವಹಣೆ…ಯಾರೀವರು ರೋಹಿತ್…
ರಸಗೊಬ್ಬರ ಇಲಾಖೆಯಲ್ಲಿ ರೋಹಿತ್ ಅವರು ಕರ್ತವ್ಯ ನಿರ್ವಹಿಸಿದ್ದರು.
Team Udayavani, Apr 3, 2023, 1:19 PM IST
ಐಎಎಸ್, ಐಪಿಎಸ್ ಅಧಿಕಾರಿಯಾಗಬೇಕೆಂಬುದು ಹಲವರ ಕನಸಾಗಿರುತ್ತದೆ. ಅಷ್ಟೇ ಅಲ್ಲ ಐಎಎಸ್ ಅಧಿಕಾರಿ ಹುದ್ದೆ ಸಿಗುವುದು ಕೂಡಾ ತುಂಬಾ ಸಲೀಸಲ್ಲ. ಕಠಿನ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಬಹುದು. ಆದರೆ ಐಎಎಸ್ ಅಧಿಕಾರಿಯೊಬ್ಬರು ಸುಮಾರು 14 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಆ ಹುದ್ದೆಯನ್ನು ತ್ಯಜಿಸಿ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವ ರೋಹಿತ್ ಅವರ ಯಶೋಗಾಥೆ ಇದಾಗಿದೆ.
ಸುಮಾರು 14 ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ರೋಹಿತ್ ಮೋದಿ ಅವರು ಐಎಎಸ್ ಹುದ್ದೆ ತ್ಯಜಿಸಿ ನಂತರ ಪ್ರತಿಷ್ಠಿತ ಕಂಪನಿಗಳ ಸಿಇಒ ಆಗಿ ಯಶಸ್ಸು ಕಂಡವರಲ್ಲಿ ಒಬ್ಬರಾಗಿದ್ದಾರೆ. ಐಎಎಸ್ ಅಧಿಕಾರಿಯಾಗಿ ನಂತರ ಪ್ರತಿಷ್ಠಿತ ಕಂಪನಿಗಳಾದ ಎಲ್ ಆ್ಯಂಡ್ ಟಿ ಐಡಿಪಿಲ್, ಸುಜ್ಲಾನ್ ಎನರ್ಜಿ, ಗ್ಯಾಮನ್ ಇಂಡಿಯಾ ಮತ್ತು ಎಸ್ಸೆಲ್ ಇನ್ಫ್ರಾ ಪ್ರಾಜೆಕ್ಟ್ ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ:‘ಉಂಡೆನಾಮ’ ಚಿತ್ರ ಮೊದಲ ಹಾಡು ಬಂತು; ಏ.14ಕ್ಕೆ ಕೋಮಲ್ ಚಿತ್ರ ರಿಲೀಸ್
ರೋಹಿತ್ ಮೋದಿ ಅವರು ರಾಜಸ್ಥಾನ್ ಜೈಪುರದ ಸೈಂಟ್ ಕ್ಸೇವಿಯರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ನಂತರ ದೆಹಲಿಯ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ಯೂನಿರ್ವಸಿಟಿಯಲ್ಲಿ ಎಕಾನಾಮಿಕ್ಸ್ ಪದವಿ ಪಡೆದಿದ್ದರು.1985ರಲ್ಲಿ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ (ಐಎಎಸ್) ಅಧಿಕಾರಿಯಾಗಿ ಕೇಂದ್ರ ಸರ್ಕಾರದಡಿ ವಿವಿಧ ಹುದ್ದೆಯನ್ನು ಅಲಂಕರಿಸಿದ್ದರು. ರೋಹಿತ್ ಅವರು ಐಎಎಸ್ ಅಧಿಕಾರಿಯಾಗಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಸುದೀರ್ಘ 14 ವರ್ಷಗಳ ಅವಧಿಯಲ್ಲಿ ವಿಶ್ವ ಬ್ಯಾಂಕ್ ಮತ್ತು ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ನ ಪ್ರಾಜೆಕ್ಟ್ ಗಳಲ್ಲಿ ಕಾರ್ಯನಿರ್ವಹಿಸಿದ್ದರು. ಇನ್ನುಳಿದಂತೆ ನಗರಾಭಿವೃದ್ಧಿ, ಜವಳಿ, ಇಂಡಸ್ಟ್ರಿ ಮತ್ತು ಫೈನಾನ್ಸ್, ಕಲ್ಲಿದ್ದಲು, ಮೂಲಸೌಕರ್ಯ, ರಸಗೊಬ್ಬರ ಇಲಾಖೆಯಲ್ಲಿ ರೋಹಿತ್ ಅವರು ಕರ್ತವ್ಯ ನಿರ್ವಹಿಸಿದ್ದರು.
ರೋಹಿತ್ ಮೋದಿ ಅವರು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಜತೆ ಕಾರ್ಯನಿರ್ವಹಿಸುತ್ತಿರುವಾಗ ಅವರನ್ನು ಐಎಂಎಫ್ ಮತ್ತು ಐಎಫ್ ಸಿ ಗಳಿಗೆ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು.
1999ರಲ್ಲಿ ಪ್ರತಿಷ್ಠಿತ ಐಎಎಸ್ ಅಧಿಕಾರಿ ಹುದ್ದೆಯನ್ನು ತ್ಯಜಿಸಿ ರೋಹಿತ್ ಮೋದಿ ಅವರು ಖಾಸಗಿ ಕಂಪನಿಯತ್ತ ಮುಖ ಮಾಡಿದ್ದರು. ಹೀಗೆ ಸುಮಾರು ಎರಡು ದಶಕಗಳ ತಮ್ಮ ವೃತ್ತಿ ಬದುಕಿನಲ್ಲಿ ರೋಹಿತ್ ಮೋದಿ ಅವರು ಮಹೀಂದ್ರ ಇಂಡಸ್ಟ್ರೀಯಲ್ ಪಾರ್ಕ್, ಸುಜ್ಲಾನ್ ಎನರ್ಜಿ, ಗ್ಯಾಮನ್ ಇಂಡಿಯಾ, ಎಲ್ ಆ್ಯಂಡ್ ಟಿ IDPL, ತಮಿಳುನಾಡು ರಸ್ತೆ ಅಭಿವೃದ್ಧಿ ಕಂಪನಿ(TNRDC) ಮತ್ತು ರಾಜಸ್ಥಾನ್ ರಸ್ತೆ ಅಭಿವೃದ್ಧಿ ಕಂಪನಿಗಳ ಸಿಇಒ ಹುದ್ದೆಗೇರಿದ್ದರು. ಇತ್ತೀಚೆಗಷ್ಟೇ ಪ್ರತಿಷ್ಠಿತ Essel Infra ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.