ಎಂ.ಕೆ ಸ್ಟಾಲಿನ್ ಮಹತ್ವದ ಕಾನ್ಫರೆನ್ಸ್ ; 3 ಮುಖ್ಯಮಂತ್ರಿಗಳು, ಪ್ರಮುಖ ವಿಪಕ್ಷದ ನಾಯಕರು
ಜಗನ್ ಮೋಹನ್ ರೆಡ್ಡಿ, ನವೀನ್ ಪಟ್ನಾಯಕ್ ಅವರಿಗೂ ಮೋದಿ ಸರ್ಕಾರ ವಿರೋಧಿಸಲು ಕರೆ!
Team Udayavani, Apr 4, 2023, 6:50 AM IST
ಚೆನ್ನೈ: ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಪ್ರತಿಪಕ್ಷದ ಉನ್ನತ ನಾಯಕರು ಸೋಮವಾರ ಡಿಎಂಕೆ ಆಯೋಜಿಸಿದ ಸಾಮಾಜಿಕ ನ್ಯಾಯದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಜಾತಿ ಗಣತಿಗೆ ಬಲವಾಗಿ ಒತ್ತಾಯಿಸಿದರು. ಇದು 2024 ರ ಸಾರ್ವತ್ರಿಕ ಚುನಾವಣೆಯವರೆಗೆ ಬಿಜೆಪಿಯನ್ನು ಎದುರಿಸಲು ಒಗ್ಗಟ್ಟನ್ನು ರೂಪಿಸುವ ಉತ್ಸಾಹಭರಿತ ಮಾರ್ಗವಾಗಿ ಕಂಡಿತು.
“ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವನ್ನು ಮುಂದಕ್ಕೆ ತೆಗೆದುಕೊಳ್ಳುವುದು ಮತ್ತು ಸಾಮಾಜಿಕ ನ್ಯಾಯ ಚಳುವಳಿಗಾಗಿ ಜಂಟಿ ರಾಷ್ಟ್ರೀಯ ಕಾರ್ಯಕ್ರಮ” ಎಂಬ ವಿಷಯದ ಮೇಲೆತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಕಲ್ಪನೆಯ ಅಖಿಲ ಭಾರತ ಸಾಮಾಜಿಕ ನ್ಯಾಯ ಒಕ್ಕೂಟದ ಹೈಬ್ರಿಡ್-ಮೋಡ್ ಮೊದಲ ಸಮ್ಮೇಳನಕ್ಕೆ ವಿರೋಧ ಪಕ್ಷಗಳು ಒಗ್ಗೂಡಿದವು.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಸಭೆಯಲ್ಲಿ ಭಾಗಿಯಾಗಿ ಅಭಿಪ್ರಾಯಗಳನ್ನು ಹಂಚಿಕೊಂಡರು.
2019ರ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಒಂದಾಗಿ ವಾಗ್ದಾಳಿ ನಡೆಸುತ್ತಿರುವುದು ಮಹತ್ವವನ್ನು ಪಡೆದುಕೊಂಡಿದೆ.
ಸಭೆಯಲ್ಲಿ ಜಾತಿ ಗಣತಿಗೆ ಒತ್ತಾಯಿಸಿ ವಿರೋಧ ಪಕ್ಷದ ನಾಯಕರಿಂದ ಒಮ್ಮತ ಕಂಡುಬಂದಿತು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜಾತಿ ಗಣತಿಗೆ ಬಲವಾದ ಪ್ರತಿಪಾದನೆ ಮಾಡಿದರು, ಬಿಹಾರದ ‘ಮಹಾಘಟಬಂಧನ್’ ಸರಕಾರವು ಈಗಾಗಲೇ ಜಾತಿ ಆಧಾರಿತ ಸಮೀಕ್ಷೆಯನ್ನು ಪ್ರಾರಂಭಿಸಿದೆ ಎಂದು ಉಲ್ಲೇಖಿಸಿದರು.ಛತ್ತೀಸ್‌ಗಢ ಮತ್ತು ಜಾರ್ಖಂಡ್ ಸರ್ಕಾರಗಳು ಒಬಿಸಿಗಳಿಗೆ ಹೆಚ್ಚಿನ ಮೀಸಲಾತಿ ನೀಡಲು ಬಯಸಿದಾಗ ರಾಜ್ಯಪಾಲರು ಅದನ್ನು ಸ್ಥಗಿತಗೊಳಿಸಿರುವುದು ಕಳವಳಕಾರಿಯಾಗಿದೆ ಎಂದು ಅವರು ಹೇಳಿದರು.
ಸಾಮಾಜಿಕ ನ್ಯಾಯದ ಆಂದೋಲನದಲ್ಲಿ ಕಾಂಗ್ರೆಸ್ ಇತರ ಪಕ್ಷಗಳ ಜೊತೆಗಿದೆ ಎಂದು ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಪ್ರತಿಪಾದಿಸಿದರು.
ಅಂತಹ ವೇದಿಕೆಗಳು ರಾಜಕೀಯ ಎಂದು ಒಪ್ಪಿಕೊಳ್ಳಲು ಪಕ್ಷಗಳು ಹಿಂಜರಿಯಬಾರದು ಎಂದು ಪ್ರತಿಪಾದಿಸಿದ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್, ಇನ್ನೂ ಕೆಲವು ಪಕ್ಷಗಳು ಬಿಜೆಪಿ ವಿರುದ್ಧ ಹೋರಾಡಲು ಬಯಸುವುದಿಲ್ಲ. ಇದು ಬೂದು ಬಣ್ಣದಲ್ಲಿ ಉಳಿಯುವ ಸಮಯವಲ್ಲ, ಬಿಳಿ ಅಥವಾ ಕಪ್ಪು ಆಗುವ ಸಮಯ ಎಂದು ಪ್ರತಿಪಾದಿಸಿದರು.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ಪ್ರಸ್ತುತ ಸರಕಾರವನ್ನು ವಿರೋಧಿಸುವ ಪ್ರಯತ್ನಗಳಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಕೂಡ ಜಾತಿ ಗಣತಿಗೆ ಕರೆ ನೀಡಿದ್ದು, ‘ವರ್ಣ ವ್ಯವಸ್ಥೆ’ ಮುಂದುವರಿಯಬೇಕೆಂದು ತನ್ನ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್ ಬಯಸಿರುವುದರಿಂದ ಬಿಜೆಪಿ ಅದರಿಂದ ಓಡಿಹೋಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿಯು ಅವರಿಗೆ ಅವಕಾಶದ ಕಿಟಕಿಗಳನ್ನು ತೆರೆಯುವ ಮಹತ್ವದ ಹೆಜ್ಜೆಯಾಗಿದೆ, ಅದರೊಂದಿಗೆ ಆರ್ಥಿಕ ಅಭಿವೃದ್ಧಿಯೂ ಆಗಬೇಕು ಎಂದರು.
ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸಾಮಾಜಿಕ ನ್ಯಾಯ ದೊರೆಯದ ಹೊರತು ಆರ್ಥಿಕ ಸಮಾನತೆ ಇರುವುದಿಲ್ಲ. ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಮತ್ತು ಗೌರವಯುತವಾಗಿ ಬದುಕುವ ಹಕ್ಕಿದೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು ನಾವು ಒಗ್ಗೂಡುವುದು ಅಗತ್ಯವಾಗಿದೆ ಎಂದರು.
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮಾತನಾಡಿ, ಭಾರತದ ಭವಿಷ್ಯವನ್ನು ರೂಪಿಸಬೇಕಾದರೆ, ಜನರು ತಮ್ಮ ಜಾತಿ, ವರ್ಗ, ಧರ್ಮ ಮತ್ತು ಪಂಥವನ್ನು ಲೆಕ್ಕಿಸದೆ ಜೊತೆಯಲ್ಲಿ ಕರೆದೊಯ್ಯಬೇಕು ಎಂದರು.
ಡಿಎಂಕೆ, ಕಾಂಗ್ರೆಸ್, ಜೆಎಂಎಂ, ಆರ್‌ಜೆಡಿ, ಟಿಎಂಸಿ, ಎಎಪಿ, ಸಿಪಿಐ, ಸಿಪಿಐ(ಎಂ), ಸಮಾಜವಾದಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಎನ್‌ಸಿಪಿ, ಐಯುಎಂಎಲ್, ಭಾರತ್ ರಾಷ್ಟ್ರ ಸಮಿತಿ, ಎಂಡಿಎಂಕೆ, ರಾಷ್ಟ್ರೀಯ ಸಮಾಜ ಪಕ್ಷ, ವಿಸಿಕೆ, ಮನಿತಾನೇಯ ಮಕ್ಕಳ್ ಕಚ್ಚಿ, ಕೊಂಗುನಾಡು ಮಕ್ಕಳ್ ದೇಸಿಯ ಕಚ್ಚಿ ಮತ್ತು ದ್ರಾವಿಡರ್ ಕಳಗಂ, ಲೋಕತಂತ್ರ ಸುರಕ್ಷಾ ಪಕ್ಷಗಳು ಸಮಾವೇಶದಲ್ಲಿ ಪ್ರತಿನಿಧಿಸಿದ್ದವು.
ಸಮಾವೇಶದಲ್ಲಿ ಭಾಗವಹಿಸದ ಮೂರು ಪ್ರಮುಖ ವಿಪಕ್ಷಗಳೆಂದರೆ ಶಿವಸೇನೆ (ಉದ್ಧವ್ ಠಾಕ್ರೆ ಬಣ), ವೈಎಸ್ಆರ್ ಕಾಂಗ್ರೆಸ್ ಪಕ್ಷ ಮತ್ತು ಬಿಜು ಜನತಾ ದಳ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.