ಮತದಾನ ಜಾಗೃತಿಗೆ ವಿದ್ಯಾರ್ಥಿಗಳಿಂದ ಪತ್ರ ಅಭಿಯಾನ : ಡಾ| ಕುಮಾರ್
Team Udayavani, Apr 4, 2023, 6:50 AM IST
ಮಂಗಳೂರು: ಮತದಾನ ಜಾಗೃತಿಗೆ ಜಿಲ್ಲೆಯ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳ ಮೂಲಕ “ಪತ್ರ ಅಭಿಯಾನ’ ನಡೆಸಲಾಗುವುದು ಎಂದು ದ.ಕ ಜಿಲ್ಲಾ “ಸ್ವೀಪ್’ ಮುಖ್ಯಸ್ಥ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್ ತಿಳಿಸಿದ್ದಾರೆ.
ಸೋಮವಾರ ಜಿ.ಪಂ. ಕಚೇರಿಯಲ್ಲಿ ಸ್ವೀಪ್ ಸಮಿತಿ ವತಿಯಿಂದ ರೂಪಿಸಲಾದ “ಎಲೆಕ್ಷನ್-ಫೋಕಸ್’ ಚುನಾವಣ ಜಾಗೃತಿ ಇ-ಪೇಪರ್ ಅನಾವರಣಗೊಳಿಸಿ ಅವರು ಮಾತನಾಡಿದರು.
ಎಂಜಿನಿಯರಿಂಗ್, ಮೆಡಿಕಲ್ ಸಹಿತ ಎಲ್ಲ ಹಾಸ್ಟೆಲ್ ಗಳ ವಿದ್ಯಾರ್ಥಿಗಳಿಗೂ ಸ್ವೀಪ್ ವತಿಯಂದ ಪೋಸ್ಟ್ ಕಾರ್ಡ್‌ಗಳನ್ನು ಉಚಿತವಾಗಿ ನೀಡಲಾಗುವುದು. ಅವರು ತಮ್ಮ ಬಂಧುಮಿತ್ರರು, ಸಂಬಂಧಿಕರಿಗೆ ಪತ್ರ ಬರೆದು ತಪ್ಪದೆ ಮತದಾನ ಮಾಡುವಂತೆ ಮನವಿ ಮಾಡಲಿದ್ದಾರೆ. ಹಾಸ್ಟೆಲ್‌ಗಳನ್ನು ಹೊರತು ಪಡಿಸಿ ಮನೆಯಿಂದಲೇ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೂ ಇದೇ ರೀತಿ ಪೋಸ್ಟ್‌ಕಾರ್ಡ್ ನೀಡಲಾಗುವುದು. ಅವರು ತಮ್ಮ ಗೆಳೆಯರು, ಸಂಬಂಧಿಕರಿಗೆ ಪತ್ರ ಬರೆಯಲಿದ್ದಾರೆ ಎಂದು ತಿಳಿಸಿದರು.
ಯಕ್ಷಗಾನ ವೇಷಧಾರಿಗಳಿಂದ ಜಾಗೃತಿ
ಯಕ್ಷಗಾನ ವೇಷಧಾರಿಗಳು ವಿಮಾನ ನಿಲ್ದಾಣ, ಬಸ್ – ರೈಲು ನಿಲ್ದಾಣ ಮೊದಲಾದೆಡೆ ಮತ ದಾನ ಜಾಗೃತಿ ನಡೆಸ ಲಿದ್ದಾರೆ. ಕಸ ಸಂಗ್ರಹ ವಾಹನ ಗಳಲ್ಲೂ ಮತದಾನ ಜಾಗೃತಿ ಮಾಡ ಲಾಗುವುದು. ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಒಟ್ಟು 35 ಲ.ರೂ. ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿ ಅನುದಾನ ಅಗತ್ಯವಿದ್ದರೆ ಒದಗಿಸಲಾಗುವುದು ಎಂದು ಡಾ| ಕುಮಾರ್ ತಿಳಿಸಿದರು.
ಮತದಾನ ಹೆಚ್ಚಳಕ್ಕೆ ಕ್ರಮ
2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 74.48 ಹಾಗೂ 2018ರಲ್ಲಿ ಶೇ. 77.67 ಮತದಾನವಾಗಿತ್ತು. ಇದು ರಾಜ್ಯದ ಮತದಾನ ಪ್ರಮಾಣಕ್ಕಿಂತ ಶೇ.6ರಷ್ಟು ಹೆಚ್ಚು. ಆದರೆ ಮಂಗಳೂರು ನಗರವನ್ನೊಳಗೊಂಡ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.10ರಷ್ಟು ಕಡಿಮೆ ಮತ ದಾನ ವಾಗಿತ್ತು. ಅದನ್ನು ಹೆಚ್ಚಿಸಲು “ಅಪಾರ್ಟ್‌ಮೆಂಟ್ ಅಭಿಯಾನ’ ನಡೆಸಲಾಗುವುದು ಎಂದರು.
ದಾಖಲೆ ಇಲ್ಲದ ಹಣವಿದ್ದರೆ ಮಾತ್ರ ಕ್ರಮ
50,000 ರೂ.ಗಳಿಗಿಂತ 10 ಲ.ರೂ.ವರೆಗಿನ ಮೊತ್ತದ ಹಣ ಸಾಗಿಸುವಾಗ ಸೂಕ್ತ ದಾಖಲೆಗಳನ್ನು ಇಟ್ಟು ಕೊಂಡಿದ್ದರೆ ಅಡ್ಡಿಪಡಿಸುವುದಿಲ್ಲ. ಸೂಕ್ತ ದಾಖಲೆ ಇಲ್ಲದಿದ್ದರೆ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಚೆಕ್‌ಪೋಸ್ಟ್‌ಗಳಲ್ಲಿ ಸ್ವಾಧೀನಪಡಿಸಿ ಜಿ.ಪಂ. ಸಿಇಒ ಅಧ್ಯಕ್ಷತೆಯ ಸಮಿತಿಗೆ ವರದಿ ಸಲ್ಲಿಸಲಾಗುತ್ತದೆ. ಅನಂತರ ಸಂಬಂಧಿಸಿದವರಿಗೆ ನೋಟೀಸು ನೀಡಿ ವಿಚಾರಣೆ ನಡೆಸಲಾಗುತ್ತದೆ. ವಿಚಾರಣೆ ವೇಳೆ ಅದು ಅಕ್ರಮ ಸಾಗಾಟವೆಂಬುದು ಕಂಡುಬಂದರೆ ಪ್ರಕರಣ ವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುತ್ತದೆ. 10 ಲ.ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ದಾಖಲೆ ಸಮೇತ ವಾಗಿ ಸಾಗಿಸಿದರೂ ಆದಾಯ ತೆರಿಗೆ ಇಲಾ ಖೆಗೆ ವರದಿ ನೀಡಲಾಗುತ್ತದೆ. ಒಂದು ವೇಳೆ ಹಣದ ಜತೆಗೆ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದ ಸಾಮಗ್ರಿ ಗಳು ಪತ್ತೆಯಾದರೆ ನೇರವಾಗಿ ಎಫ್ಐಆರ್ ದಾಖಲಿಸ ಲಾಗುವುದು. ಹಣ ಸ್ವಾಧೀನಪಡಿಸಿ ಕೊಳ್ಳುವ ಮೊದಲು ಪೂರ್ಣವಾಗಿ ವೀಡಿಯೋ ಚಿತ್ರೀಕರಣ ನಡೆಸ ಲಾಗು ವುದು. ಸಾರ್ವಜನಿಕರಿಗೆ ತೊಂದರೆ ಯಾಗದ ರೀತಿಯಲ್ಲಿ ವಾಹನ ತಪಾಸಣೆ ನಡೆಸಲಾಗುತ್ತಿದೆ ಎಂದು ಡಾ| ಕುಮಾರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.