![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 4, 2023, 9:48 PM IST
ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನೂರಾರು ಕಾರ್ಯಕರ್ತರು ಶಾಸಕ ಎಸ್. ಎ.ರವೀಂದ್ರನಾಥ್ ಅವರಿಗೆ ಒತ್ತಾಯಿಸಿದರು.
ಹಾಲಿ ಶಾಸಕ ಎಸ್.ಎ. ರವೀಂದ್ರನಾಥ್ ಅನಾರೋಗ್ಯದ ಕಾರಣದಿಂದಾಗಿ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಶಿರಮಗೊಂಡನಹಳ್ಳಿ ನಿವಾಸದ ಮುಂದೆ ಜಮಾಯಿಸಿದಂತಹ ಕಾರ್ಯಕರ್ತರು ಈ ಬಾರಿ ನೀವೇ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಹಾಗೂ ಈ ಬಾರಿ ಟಿಕೆಟ್ ನಿಮಗೆ ನೀಡಬೇಕು ಎಂದು ಒತ್ತಾಯಿಸಿದರು.
ಮಹಿಳಾ ಮೋರ್ಚಾದ ಸರ್ವ ಮಂಗಳಮ್ಮ, ಕುಮಾರಿ, ಚಂದ್ರಕಲಾ, ದಾಕ್ಷಯಣಮ್ಮ, ಜ್ಯೋತಿ, ಮಂಜುಳಾ, ಸೌಭಾಗ್ಯ ಲಕ್ಷ್ಮಿ ಪಾಲಿಕೆಯ ಸದಸ್ಯರಾದ ವೀರೇಶ್ ಪೈಲ್ವಾನ್ ,ಮಂಜು ನಾಯಕ್ ಬಿಜೆಪಿ ಎಸ್ಸಿ ಮೋರ್ಚಾದ ಮುಖಂಡರಾದ ಗಂಗಾಧರ, ಜಿಲ್ಲಾ ಉಪಾಧ್ಯಕ್ಷ ಶಿವರಾಜ್ ಪಾಟೀಲ್ ಅನೇ ಕಾರ್ಯಕರ್ತರು ಶಾಸಕ ರವೀಂದ್ರನಾಥ್ ಅವರೊಂದಿಗೆ ಚರ್ಚಿಸಿದರು. ಸ್ಪರ್ಧೆ ಮಾಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ: ಬಿಜೆಪಿ ಹೇಳಿದ್ದನ್ನೇ ನೀವು ಯಾಕೆ ಹೇಳುತ್ತಿದ್ದೀರಿ: ಪತ್ರಕರ್ತರ ವಿರುದ್ಧ ರಾಹುಲ್ ವಾಗ್ದಾಳಿ
You seem to have an Ad Blocker on.
To continue reading, please turn it off or whitelist Udayavani.