ರಂಜಾನ್: ಸಮೋಸ, ಖರ್ಜೂರಕ್ಕೆ ಬೇಡಿಕೆ ಹೆಚ್ಚಳ
Team Udayavani, Apr 5, 2023, 2:43 PM IST
ದೇವನಹಳ್ಳಿ: ಮುಸಲ್ಮಾನರ ಪವಿತ್ರವಾದ ಹಬ್ಬವಾದ ರಂಜಾನ್ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಉಪವಾಸದಲ್ಲಿ ಇರುವರು. ಸಂಜೆ ಉಪವಾಸ ಬಿಡಲು ಸಮೋಸ ಮತ್ತು ಖರ್ಜೂರ ಮತ್ತು ಬೋಂಡಾ, ಬಜ್ಜಿ ತಿನ್ನುವುದರಿಂದ ಸಮೋಸಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ.
ಪಟ್ಟಣದ ಮಸೀದಿ ರಸ್ತೆಯಲ್ಲಿ ಕರ್ಜುರ ಸೇರಿದಂತೆ ನಾನಾ ಬಗೆಯ ಹಣ್ಣುಗಳು, ಖಾದ್ಯಗಳು, ಖದರ್ ದಾರಿ ಹೋಕರ ಗಮನ ಸೆಳೆಯುತ್ತಿದ್ದರೆ. ಸಂಜೆಯ ಉಪವಾಸ ಮುರಿಯುವ ವೇಳೆಗೆ ಸಮೋಸ ಸೇರಿ ತಿನುಸುಗಳ ವಾಸನೆ ಪ್ರತಿಯೊಬ್ಬರ ಬಾಯಿಯಲ್ಲಿ ನೀರುಣಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಹೆಚ್ಚಾಗಿದ್ದರೂ ಸಹ ಸಮೋಸ ವ್ಯಾಪಾರಿಗಳು ಸಮೋಸ ಮಾರಲು ಬಿಟ್ಟಿಲ್ಲ. ಅಡುಗೆ ಎಣ್ಣೆ 200ರೂ. ಆಗಿದ್ದರೂ ಸಹ ಮೊದಲಿನಿಂದ ನಡೆಸಿಕೊಂಡು ಬಂದಿರುವ ಕಸುಬನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ.
ದಿನೇದಿನೆ ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ಸಹ ಸಮೋಸ ವ್ಯಾಪಾರ ವನ್ನು ಮುಂದು ವರೆಸಿಕೊಂಡು ಹೋಗಲಾಗುತ್ತಿದೆ. ಕೇವಲ ಒಂದು ಸಮೋಸ 10ರೂ.ಗೆ ಮಾರಾಟ ಮಾಡಲಾಗುತ್ತದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ. ಬೆಲೆ ಏರಿಕೆ ನಡುವೆಯೂ ಮುಸ್ಲಿಂ ಬಾಂಧವರ ಪವಿತ್ರ ಹಬ್ಬದ ಆಚರಣೆಗೆ ಸಜ್ಜಾಗುತ್ತಿದ್ದಾರೆ. ನಗರದ ಪ್ರಮುಖ ಮಸೀದಿಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸಮೋಸ-ಬೋಂಡ, ತರಹೇವಾರಿ ಹಣ್ಣುಗಳು, ತಿಂಡಿ ತಿನುಸುಗಳು ರಸ್ತೆಯ ಬದಿಯಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿದೆ. ವ್ಯಾಪಾರಿಗಳೂ ಸಹ ಹಬ್ಬದಲ್ಲಿ ಭರ್ಜರಿ ಸಿದ್ದತೆಗಳನ್ನು ಕೈಗೊಂಡಿದ್ದಾರೆ.
2 ಸಾವಿರಕ್ಕೂ ಹೆಚ್ಚು ಸಮೋಸ ಮಾರಾಟ: ಪ್ರತಿ ಸಂಜೆ ಸಮೋಸ ಅಂಗಡಿಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಸಮೋಸ ಮಾರಾಟವಾಗುತ್ತಿದೆ. ಮುಸ್ಲಿಂ ಬಾಂದವರು ತಾಮುಂದು ನೀ ಮುಂದು ಎಂದು ಖರೀದಿಸುವಲ್ಲಿ ನಿರತರಾಗುತ್ತಾರೆ. ಸಮೋಸ ಮಾರಾಟವನ್ನು ಮುಂದುವರೆಸಿಕೊಂಡು ಹೋಗಿ ದ್ದೇವೆ ಎಂದು ವ್ಯಾಪಾರಿ ಫಯಾಜ್ ಹೇಳುತ್ತಾರೆ.
ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್. ಎಷ್ಟೇ ದರ ಏರಿಕೆಯಾದರೂ ಸಹ ಹಬ್ಬ ಆಚ ರಣೆ ಮಾಡು ತ್ತೇವೆ. ಸಮೋಸ 30ರೂ. ಆದರೂ ತಿನ್ನ ಲು ಮನಸ್ಸು ಸೆಳೆಯುತ್ತದೆ. ಒಂದು ಸಮೋಸ ರೂ.10ಕ್ಕೆ ಸಿಗುತ್ತದೆ. ಹಣ್ಣು ಹಂಪಲು, ಖರ್ಜೂರ, ಇತರೆ ಖಾದ್ಯಗಳನ್ನು ಸಹ ತರುತ್ತೇವೆ. – ಹೈದರ್ ಸಾಬ್, ಗ್ರಾಹಕ
ಎಷ್ಟೇ ಬೆಲೆ ಏರಿಕೆಯಾದರೂ ಕಳೆದ 14 ವರ್ಷಗಳಿಂದ ಸಮೋಸ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಪ್ರತಿನಿತ್ಯ 500ರಿಂದ 600 ಸಮೋಸ ವ್ಯಾಪಾರ ವಾಗುತ್ತದೆ. ಮೆಣಸಿನಕಾಯಿ, ಹೀರೆಕಾಯಿ, ಆಲೂಗಡ್ಡೆ ಬಜ್ಜಿ, ಖರ್ಜೂರ, ಬಾದುಶ ವ್ಯಾಪಾರವಾಗುತ್ತದೆ. –ನಸ್ರತ್ ಉಲ್ಲಾ ಖಾನ್, ಚಾಹೀಸ್ ಸಮೋಸ ಸೆಂಟರ್ ಮಾಲೀಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.