Muslim Leaders; ಮುಸ್ಲಿಂ ನಾಯಕರಿಂದ ಗೃಹ ಸಚಿವ ಅಮಿತ್ ಶಾ ಭೇಟಿ
ನಾವು ನೋಡಿದ ಅಮಿತ್ ಶಾ ಅವರೇ ಬೇರೆ: ನಾಯಕರ ಬಣ್ಣನೆ
Team Udayavani, Apr 6, 2023, 6:35 AM IST
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಗೆ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು ಮಂಗಳವಾರ ರಾತ್ರಿ ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಜಮಿಯತ್ ಉಲೇಮ ಇ-ಹಿಂದ್ ಅಧ್ಯಕ್ಷ ಮೌಲಾನ ಮೆಹೂ¾ದ್ ಮದನಿ, ಕಾರ್ಯದರ್ಶಿ ನಿಯಾಜ್ ಫಾರೂಖೀ, ಭಾರತೀಯ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಕಮಲ್ ಫಾರೂಖೀ, ಪ್ರೊ.ಅಖ್ತರುಲ್ ವಸೆ ಇದ್ದ ತಂಡ ಶಾರನ್ನು ಭೇಟಿ ಮಾಡಿ 14 ಸಮಸ್ಯೆಗಳನ್ನು ಅಮಿತ್ ಶಾ ಮುಂದಿಟ್ಟಿತು. ಭೇಟಿಯ ನಂತರ ಪ್ರತಿಕ್ರಿಯಿಸಿದ ನಿಯಾಜ್ ಫಾರೂಖೀ, ರಾಜಕೀಯ ಭಾಷಣಗಳನ್ನು ಮಾಡುವ ಅಮಿತ್ ಶಾಗಿಂತ ಬೇರೆಯದ್ದೇ ವ್ಯಕ್ತಿ ನಮಗಲ್ಲಿ ಕಾಣಿಸಿದರು. ಅವರು ನಾವು ಹೇಳಿದ್ದನ್ನೆಲ್ಲ ತಾಳ್ಮೆಯಿಂದ ಕೇಳಿಸಿಕೊಂಡು ಧನಾತ್ಮಕವಾಗಿ ಪ್ರತಿಕ್ರಿಯಿಸಿದರು. ಮಾತ್ರವಲ್ಲ ಯಾವುದೇ ದುರ್ಘಟನೆಗಳಲ್ಲಿ ಸರ್ಕಾರದ ಪಾತ್ರವಿಲ್ಲ ಎಂದಿದ್ದಾರೆ ಎಂದು ಹೇಳಿದ್ದಾರೆ.
ರಾಮನವಮಿ ದಿನ ಪ.ಬಂಗಾಳ, ಮಹಾರಾಷ್ಟ್ರ, ಬಿಹಾರದಲ್ಲಿ ನಡೆದ ಘಟನೆಗಳನ್ನೂ ಈ ವೇಳೆ ಮುಸ್ಲಿಂ ನಾಯಕರು ಶಾ ಗಮನಕ್ಕೆ ತಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.