Education Department; ಈ ವರ್ಷ ಸಕಾಲಕ್ಕೆ ಮಕ್ಕಳ ಕೈಗೆ ಪಠ್ಯ ಪುಸ್ತಕ
ಶಿಕ್ಷಣ ಇಲಾಖೆಯ ಕೈಸೇರಿದ ಶೇ.87ರಷ್ಟು ಪುಸ್ತಕಗಳು; ಶಾಲೆಗಳಿಗೆ ವಿತರಣೆಯೂ ಆರಂಭ
Team Udayavani, Apr 6, 2023, 7:25 AM IST
ಬೆಂಗಳೂರು: ಶಾಲೆ- ಕಾಲೇಜುಗಳು ಆರಂಭಗೊಂಡ ಅದೆಷ್ಟೋ ದಿನಗಳ ಬಳಿಕ ಪಠ್ಯಪುಸ್ತಕಗಳು ಮಕ್ಕಳ ಕೈ ಸೇರುತ್ತಿದ್ದದ್ದು ವಾಡಿಕೆ. ಆದರೆ ಈ ಬಾರಿ ಹೊಸ ಶೈಕ್ಷಣಿಕ ವರ್ಷ ಆರಂಭಗೊಳ್ಳುವ ಮೊದಲೇ ಪಠ್ಯ ಪುಸ್ತಕಗಳು ಶಾಲೆಯನ್ನು ತಲುಪುತ್ತಿವೆ. ಈಗಾಗಲೇ ಬೇಡಿಕೆಯ ಶೇ.87ರಷ್ಟು ಪುಸ್ತಕಗಳು ಶಿಕ್ಷಣ ಇಲಾಖೆಯ ಸುಪರ್ದಿಗೆ ಬಂದಿವೆ.
ಪ್ರತಿ ವರ್ಷ ಪಠ್ಯಪುಸ್ತಕ ವಿತರಣೆ ಪ್ರಕ್ರಿಯೆ ಇದ್ದೇ ಇರುತ್ತದೆ ಎಂಬ ಅರಿವಿದ್ದರೂ ಪಠ್ಯಪುಸ್ತಕ ಖರೀದಿಯ ಇಂಡೆಂಟ್, ಮುದ್ರಣ, ವಿತರಣೆ ಹೀಗೆ ಎಲ್ಲ ಹಂತದಲ್ಲಿಯೂ ಸಾಕಷ್ಟು ಗೋಜಲುಗಳು ನಡೆದು ಶಾಲಾ ಕಾಲೇಜುಗಳು ಪ್ರಾರಂಭಗೊಂಡ ಒಂದೆರಡು ತಿಂಗಳ ಬಳಿಕ ಪಠ್ಯಗಳು ಮಕ್ಕಳ ಕೈಸೇರುತ್ತಿದ್ದವು. ಆದರೆ ಈ ಬಾರಿ ಪಠ್ಯಪುಸ್ತಕ ವಿತರಣೆ ಸಂಬಂಧಿ ಎಲ್ಲ ಪ್ರಕ್ರಿಯೆಗಳನ್ನು ಕಾಲಮಿತಿಯಲ್ಲಿ, ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ನಿರ್ವಹಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಈಗಾಗಲೇ ಶೇ.80ರಷ್ಟು ಪುಸ್ತಕಗಳನ್ನು ವಿತರಿಸಿದೆ.
ಮಾರಾಟ ಮತ್ತು ಉಚಿತ ವಿತರಣೆಗೆ 6.39 ಕೋಟಿ ಪಠ್ಯ ಪುಸ್ತಕಗಳಿಗೆಂದು ಶಾಲಾ ಶಿಕ್ಷಣ ಇಲಾಖೆಗೆ ಬೇಡಿಕೆ ಬಂದಿತ್ತು. ಈ ಪೈಕಿ 5.56 ಕೋಟಿ ಪುಸ್ತಕಗಳನ್ನು ವೆಂಡರ್‌ಗಳು ಈಗಾಗಲೇ ಶಿಕ್ಷಣ ಇಲಾಖೆಗೆ ಪೂರೈಸಿದ್ದಾರೆ. ಅಂದರೆ ಇಲಾಖೆಯ ಬೇಡಿಕೆಯ ಶೇ.87ರಷ್ಟು ಪುಸ್ತಕಗಳು ಈಗಾಗಲೇ ಇಲಾಖೆಯ ಸುಪರ್ದಿಯಲ್ಲಿವೆ.
ಹಾಗೆಯೇ ತನ್ನ ಅಧೀನಕ್ಕೆ ಬಂದಿರುವ ಪುಸ್ತಕಗಳನ್ನು ಬ್ಲಾಕ್ ಎಜುಕೇಶನ್ ಆಫೀಸ್ (ಬಿಇಒ) ಕಚೇರಿಗಳಿಗೆ ವಿಳಂಬ ಮಾಡದೇ ಇಲಾಖೆ ಕಳುಹಿಸಿದೆ. ಈಗಾಗಲೇ 5.11 ಕೋಟಿ ಪುಸ್ತಕಗಳು ಬಿಇಒ ಕಚೇರಿಗಳನ್ನು ತಲುಪಿವೆ. ತನ್ಮೂಲಕ ಈಗಾಗಲೇ ಶೇ.80ರಷ್ಟು ಪುಸ್ತಕಗಳು ಬಿಇಒ ಕಚೇರಿ ತಲುಪಿದ್ದು ಅಲ್ಲಿಂದ ಶಾಲೆಗಳಿಗೆ ವಿತರಣೆ ಆರಂಭವಾಗಿದೆ.
ಬೇಡಿಕೆಯೆಷ್ಟು, ತಲುಪಿದ್ದೆಷ್ಟು?
ಇನ್ನೊಂದು ಮುಖ್ಯ ವಿಷಯವೆಂದರೆ, ಪುಸ್ತಕ ವಿತರಣೆ ರಾಜ್ಯದ ನಾಲ್ಕು ಕಂದಾಯ ವಲಯಗಳಲ್ಲಿಯೂ ತಾರತಮ್ಯವಿಲ್ಲದೇ ಏಕಪ್ರಕಾರವಾಗಿ ಸಾಗಿದೆ. ಬೆಂಗಳೂರು ವಲಯದಿಂದ 2 ಕೋಟಿ ಪುಸ್ತಕಕ್ಕೆ ಬೇಡಿಕೆ ಬಂದಿದ್ದು 1.56 ಕೋಟಿ ಪುಸ್ತಕ ಬಿಇಒ ಕಚೇರಿ ತಲುಪಿ ಶೇ.78.42ರ ಸಾಧನೆಯಾಗಿದೆ. ಬೆಳಗಾವಿ ವಲಯದಿಂದ 1.86 ಕೋಟಿ ಪುಸ್ತಕಕ್ಕೆ ಬೇಡಿಕೆ ಬಂದಿದ್ದು 1.54 ಕೋಟಿ ಪುಸ್ತಕ (ಶೇ. 82.67), ಕಲಬುರಗಿ ವಲಯದಿಂದ 1.48 ಕೋಟಿ ಪುಸ್ತಕಕ್ಕೆ ಬೇಡಿಕೆ ಇದ್ದು,1.18 ಕೋಟಿ ಪುಸ್ತಕ (ಶೇ. 79.40) ಮತ್ತು ಮೈಸೂರು ವಲಯದಿಂದ 1.03 ಕೋಟಿ ಪುಸ್ತಕಕ್ಕೆ ಬೇಡಿಕೆಯಿದ್ದು 81.64 ಲಕ್ಷ ಪುಸ್ತಕ (ಶೇ. 78.51) ಬಿಇಒಗಳ ಕಚೇರಿ ತಲುಪಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಬಹುತೇಕ ಎಲ್ಲ ಶಿಕ್ಷಣ ಜಿಲ್ಲೆಗಳಲ್ಲಿಯೂ ಶೇ.75ಕ್ಕೂ ಮೀರಿ ಸಾಧನೆಯಾಗಿದೆ. ರಾಮನಗರ ಶೇ. 73.77, ಉತ್ತರ ಕನ್ನಡ ಶೇ. 74.05 ಮತ್ತು ಕೊಪ್ಪಳ ಶೇ. 74.23 ಕನಿಷ್ಠ ಸಾಧನೆ ಮಾಡಿದ ಜಿಲ್ಲೆಗಳಾಗಿವೆ. ಗದಗದಲ್ಲಿ ಗರಿಷ್ಠ ಶೇ. 88.02, ಚಿಕ್ಕೋಡಿ ಶೇ.85 ಸಾಧನೆ ಮಾಡಿವೆ.
ಸರ್ಕಾರಿ ಶಾಲೆಗಳ ಉಚಿತ ಬೇಡಿಕೆಯ ಶೇ. 77.56ರಷ್ಟು ಮತ್ತು ಮಾರಾಟದ ಬೇಡಿಕೆಯ ಶೇ.84.86ರಷ್ಟು ಈಗಾಗಲೇ ಪೂರೈಕೆಯಾಗಿದೆ. ಆದರೆ ಪಿಯುಸಿಯ ಪಠ್ಯ ಪುಸ್ತಕ ವಿತರಣೆ ಇನ್ನಷ್ಟೇ ವೇಗ ಪಡೆಯಬೇಕಿದ್ದು, ಇನ್ನೆರಡು ವಾರದಲ್ಲಿ ಈ ವಿಭಾಗದ ಪುಸ್ತಕಗಳ ಪೂರೈಕೆ ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಆಯುಕ್ತ ಆರ್. ವಿಶಾಲ್, ಪ್ರತಿ ವರ್ಷವೂ ಪಠ್ಯಪುಸ್ತಕ ವಿತರಣೆ ಪ್ರಕ್ರಿಯೆ ಇದ್ದೇ ಇರುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗದಂತೆ ನೋಡಿಕೊಂಡು ಕಾಲಮಿತಿ ಹಾಕಿಕೊಂಡು ಕೆಲಸ ಮಾಡಿದೆವು. ಮುಂದಿನ ಶೈಕ್ಷಣಿಕ ವರ್ಷ ಆರಂಭಗೊಳ್ಳುವುದಕ್ಕಿಂತ ಮುಂಚಿತವಾಗಿ ಪುಸ್ತಕ ವಿತರಿಸಲೇಬೇಕು ಎಂದು ಪಣತೊಟ್ಟಿದ್ದೆವು. ನಮ್ಮ ಗುರಿ ಸಾಧಿಸಿದ್ದೇವೆ. ಈಗಾಗಲೇ ಶೇ.90ರಷ್ಟು ಪುಸ್ತಕ ನಮ್ಮ ಕೈಸೇರಿದೆ. ಶೇ.80ರಷ್ಟು ಪುಸ್ತಕ ವಿತರಣೆ ಆಗಿದೆ. ಉಳಿದಂತೆ ಇನ್ನುಳಿದಿರುವ ಮೂರ್ನಾಲ್ಕು ದಿನದಲ್ಲೇ ಶೇ.100ರಷ್ಟು ಪುಸ್ತಕ ವಿತರಣೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದಿದ್ದಾರೆ.
ಇದೇ ವೇಳೆ, ಮಕ್ಕಳಿಗೆ ಒಂದು ಜೊತೆ ಸಮವಸ್ತ್ರವನ್ನು ಈ ತಿಂಗಳಾಂತ್ಯದೊಳಗೆ ಪೂರೈಸಬೇಕು ಎಂದು ಶಿಕ್ಷಣ ಇಲಾಖೆ ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.