Election 2023: ಗ್ರಾಮ್ ಕೀ ಬಾತ್ – ಹಳ್ಳಿಕಟ್ಟೆಯಲ್ಲೂ ಹಾಲಾಡಿ ಹಾಲಾಡಿ ಹಾಲಾಡಿ..
Team Udayavani, Apr 6, 2023, 8:19 AM IST
ಕುಂದಾಪುರ: ಎಲ್ಲೆಡೆ ರಾಜ್ಯ ವಿಧಾನಸಭೆಯ ಚುನಾವಣೆಯ ಕಾವು ಜೋರು. ರಾಜಕೀಯ ಚಟುವ ಟಿಕೆಗಳು ನಿಧಾನಕ್ಕೆ ಬಿರುಸು ಪಡೆಯುತ್ತಿವೆ. ಕುಂದಾಪುರ, ಬೈಂದೂರು ಭಾಗದಲ್ಲಂತೂ ಎಲ್ ಕಂಡ್ರೂ ಈಗ ಹಾಲಾಡಿ ಬಗೆಯದ್ದೇ ಮಾತು, ಚರ್ಚೆ.
ಕುಂದಾಪುರದಿಂದ 5 ಬಾರಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಚುನಾವಣೆ ಯಲ್ಲಿ ಸ್ಪರ್ಧಿಸೋಲ್ಲ ಎಂದು ಘೋಷಿಸಿದ ಸಂಗ ತಿಯೀಗ ಹಳ್ಳಿಕಟ್ಟೆ, ಗೂಡಂಗಡಿಗಳು, ಹೊಟೇಲ್‌ಗಳು, ಕಚೇರಿ ಸಹಿತ ಎಲ್ಲೆಡೆ ಸದ್ದು ಮಾಡುತ್ತಿದೆ.
ಈ ಚುನಾವಣೆಯಲ್ಲೂ ಹಾಲಾಡಿಯವರೇ ಅಭ್ಯರ್ಥಿ ಅಂದುಕೊಂಡಿದ್ದ ಜನರಿಗೆ, ಅವರೇ ಸ್ಪರ್ಧಾ ಕಣದಿಂದ ಹಿಂದೆ ಸರಿದ ಸುದ್ದಿ ಒಂದು ರೀತಿಯ
ಅಚ್ಚರಿ ತರಿಸಿದೆ. ಅವರು “ನಿಲ್ತಾರೆ ಅಂದಿದ್ರಂತೆ, ಆದರೆ ಟಿಕೆಟ್ ಕೊಡಲ್ಲ ಅಂದ್ರಂತೆ” ಎನ್ನುವ ಮಾತು ಒಂದೆಡೆಯಾದರೆ, “ಅವರೇ ನಿಲ್ಲುವುದಿಲ್ಲ ಎಂದು ಘೋಷಿಸಿದರಂತೆ”, “ಹಿರಿಯರಾದವರು ಕಿರಿಯರಿಗೆ ಅವಕಾಶ ಕಲ್ಪಿಸಲು ಈ ನಿರ್ಧಾರ ಕೈಗೊಂಡಿದ್ದಾರೆ” ಎನ್ನುವ ಮೆಚ್ಚುಗೆಯ ಮಾತೂ ಇನ್ನೊಂದೆಡೆ ಕೇಳಿಬರುತ್ತಿದೆ. ಒಟ್ಟೂ ಪುಂಖಾನುಪುಂಖವಾಗಿ ಹಾಲಾಡಿಯವರ ಬಗೆಗಿನ ಮಾತುಗಳು ರೆಕ್ಕೆಪುಕ್ಕ ಸೇರಿಕೊಂಡು ಎಲ್ಲೆಡೆ ಹಾರುತ್ತಿವೆ.
ಈ ಚರ್ಚೆ ಯಾವುದೋ ರಾಜಕೀಯ ಪಕ್ಷಗಳ ಕಚೇರಿಗಳಿಗೆ ಮಾತ್ರ ಸೀಮಿತವಾಗಿಲ್ಲ.
ಕುಂದಾಪುರ, ಬೈಂದೂರಿನ ಹಳ್ಳಿಯಲ್ಲಿರುವ ಸಣ್ಣ ಕಟ್ಟೆಯಿಂದ ಆರಂಭವಾಗಿ, ಅಂಗಡಿಗಳು, ಹೊಟೇಲ್‌ಗಳು, ಸೆಲೂನ್, ಮದುವೆ ಮನೆ, ರಿಕ್ಷಾ ನಿಲ್ದಾಣಗಳಲ್ಲೂ ಮಾತುಕತೆಗಳು ಜೋರಾಗಿ ನಡೆಯುತ್ತಿವೆ. ಇಲ್ಲಿ ಟಿಕೆಟು ಯಾರಿಗೆ ಕೊಡಬಹುದು ? ಇವರು ಹೇಳಿದವರಿಗೆ ಕೊಡಬಹುದೇ? ಬೇರೆಯವರಿಗೆ ಕೊಟ್ಟರೆ ಇವರೇನು ಮಾಡುತ್ತಾರೆ? ಇವರು ನಿಲ್ಲದಿರು ವುದು ಎದುರು ಪಕ್ಷದವರಿಗೆ ಲಾಭವಾಗಬಹುದೇ? ಇದರಿಂದ ಬೈಂದೂರು ಕ್ಷೇತ್ರದ ಮೇಲೂ ಪರಿಣಾಮವುಂಟಾ? ಇತರೆ ಕಣಗಳ ಚಿತ್ರಣವೂ ಬದಲಾಗಬಹುದಾ? ಎಂಬಿತ್ಯಾದಿ ವಿಷಯಗಳ ಕುರಿತಂತೆ ಚರ್ಚೆ, ವಾಗ್ವಾದ, ಲೆಕ್ಕಾಚಾರ ಎಲ್ಲವೂ ಭರ್ಜರಿಯಾಗಿ ಚಾಲ್ತಿಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.