ಕಾರ್ಕಳ: ಅಭ್ಯರ್ಥಿ ಆಯ್ಕೆ ಕುತೂಹಲ… ಬಿಜೆಪಿಯಲ್ಲಿ ಹಾಲಿಯಂತೆ, ಕಾಂಗ್ರೆಸ್‌ನಲ್ಲಿ ಯಾರಂತೆ ?
Team Udayavani, Apr 6, 2023, 7:17 AM IST
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಈಗ ಎಲ್ಲರ ಗಮನಸೆಳೆದಿರುವ ಕ್ಷೇತ್ರವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಇನ್ನೂ ಪ್ರಕಟ ಗೊಳ್ಳಬೇಕಿದೆ. ಇದರೊಂದಿಗೆ ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ ಕೂಡ ಸ್ಪರ್ಧಿಸಿರುವುದರಿಂದ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ಬಿಜೆಪಿಯಿಂದ ಹಾಲಿ ಶಾಸಕ ಮತ್ತು ಸಚಿವ ವಿ. ಸುನಿಲ್ ಕುಮಾರ್ ಅವರಿಗೇ ಟಿಕೆಟ್ ಎನ್ನಲಾಗುತ್ತಿದೆ. ಇನ್ನೂ ಅಧಿ ಕೃತವಾಗಿ ಪ್ರಕಟಗೊಳ್ಳಬೇಕಿದೆ. ಹಾಗೆಯೇ ಕಾಂಗ್ರೆಸ್‌ನಿಂದ ಅಭ್ಯರ್ಥಿ ಯಾರು ಎಂಬುದೂ ಕುತೂಹಲ ಮೂಡಿಸಿದೆ.
ಸುನಿಲ್ ಕುಮಾರ್ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ನಂಬಿಕೊಂಡೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಹಾಗೆಂದು ಅವರ ವಿರುದ್ಧವೂ ಕ್ಷೇತ್ರದಲ್ಲಿ ಆಂತರಿಕವಾಗಿ ಅಸಮಾಧಾನ ಇಲ್ಲವೆಂದಲ್ಲ. ಈ ಎಲ್ಲ ಅಪಸ್ವರಗಳನ್ನು ಮೆಟ್ಟಿ ನಿಂತು ಅವರು ಗೆಲ್ಲುತ್ತಾರೆಯೇ ಎಂಬುದು ಈಗ ಚರ್ಚೆ ಯಾಗುತ್ತಿರುವ ಸಂಗತಿ.
ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆಯಾಗಿತ್ತು ಕಾರ್ಕಳ. ಮಾಜಿ ಶಾಸಕ ಗೋಪಾಲ ಭಂಡಾರಿಯವರ ನಿಧನದ ಬಳಿಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಎದುರಾಗಿದೆ. ಆದರೂ ನಿಷ್ಠಾ ವಂತ ನಾಯಕರು ಪಕ್ಷ ಕಟ್ಟುವಲ್ಲಿ ಸಕ್ರಿಯ ರಾಗಿದ್ದಾರೆ. ಎಂ. ವೀರಪ್ಪ ಮೊಲಿ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಮಂಜುನಾಥ ಪೂಜಾರಿಯಲ್ಲದೇ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಡಿ.ಆರ್. ರಾಜು ಆಕಾಂಕ್ಷಿಗಳಾಗಿ ಅರ್ಜಿಸಲ್ಲಿಸಿದ್ದಾರೆ. ಇವರಲ್ಲಿ ಯಾರಿಗೆ ಟಿಕೆಟ್ ಎನ್ನುವ ಕುತೂಹಲ ಮುಂದುವರಿದಿದೆ.
ಉದಯ್ ಶೆಟ್ಟಿ ಮತ್ತೆ ಅಖಾಡಕ್ಕೆ
ಈ ಹಿಂದಿನ ಚುನಾವಣೆಯಲ್ಲಿ ಆಕಾಂಕ್ಷಿಯಾಗಿದ್ದು ಕೊನೆ ಕ್ಷಣದಲ್ಲಿ ಟಿಕೆಟ್‌ನಿಂದ ವಂಚಿತರಾಗಿದ್ದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಸಚಿವ ಸುನಿಲ್ ವಿರುದ್ಧ ಬಲಿಷ್ಠ ಅಭ್ಯರ್ಥಿ ಎಂಬಂತೆಯೂ ಚರ್ಚೆ ನಡೆದಿದೆ. ಅವರಿಗೆ ಟಿಕೆಟ್ ನೀಡುವ ಕುರಿತು ಕೆಲವು ಸ್ಥಳೀಯ ಕಾಂಗ್ರೆಸ್ಸಿಗರ ವಿರೋಧವೂ ಇದೆ. ಒಂದು ವೇಳೆ ಹಿರಿಯ ನಾಯಕ ವೀರಪ್ಪ ಮೊಲಿಯವರ ಕೃಪಾಕಟಾಕ್ಷ ದೊರೆತರೆ ಮುನಿಯಾಲು ಅವರಿಗೇ ಅವಕಾಶ ಸಿಗ ಬಹುದು. ಮೊಲಿಯವರಿಗೂ ಕಾಂಗ್ರೆಸ್ ಕಾರ್ಕಳದಲ್ಲಿ ಗೆಲ್ಲಬೇಕಿದೆ. ಒಂದುವೇಳೆ ಅವಕಾಶ ಸಿಗದಿದ್ದರೆ ಮುನಿಯಾಲು ಪಕ್ಷೇತರರಾಗಿ ಸ್ಪರ್ಧಿಸುತ್ತಾರೆಯೇ ಕಾದು ನೋಡಬೇಕಿದೆ.
ಕ್ಷಣಕ್ಷಣಕ್ಕೂ ಕುತೂಹಲ!
ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಸ ರತ್ತು ತೀವ್ರವಾಗಿ ನಡೆಯುತ್ತಿದ್ದು, ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ನಾನಾ ಊಹಾಪೋಹಗಳು ಹರಿ ದಾಡ ತೊಡಗಿವೆ. ಆದರೆ ಇನ್ನೂ ಅಂತಿಮಗೊಂಡಿಲ್ಲ.
ಬಿಜೆಪಿಯಿಂದ ಸಚಿವ ವಿ. ಸುನಿಲ್‌ಕುಮಾರ್ ಪರವಾಗಿ ಕ್ಷೇತ್ರ ದಲ್ಲಿ ಪ್ರಚಾರ ಜೋರಾಗಿ ನಡೆ ಯುತ್ತಿದೆ. ಸ್ಪರ್ಧಿಸುವ ಅವಕಾಶ ಸಿಕ್ಕರೆ ಎ. 19ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದ್ದು, ಅಂದು 30ರಿಂದ 40 ಸಾವಿರ ಕಾರ್ಯ ಕರ್ತರನ್ನು ಸೇರಿಸಿ ಶಕ್ತಿ ಪ್ರದರ್ಶನದ ಸಿದ್ಧತೆಯೂ ನಡೆದಿದೆ ಎನ್ನಲಾಗಿದೆ.
ಇದರ ಬೆನ್ನಿಗೇ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಕೂಡ ಕಾರ್ಕಳದಲ್ಲಿ ಬಿರುಸಿನ ತಿರುಗಾಟ ನಡೆಸುತ್ತಿದ್ದಾರೆ. ವಿವಿಧ ಹಿಂದೂ ಸಂಘಟನೆಗಳ ಯುವ ಕರೂ ಸಹ ಸಾಥ್ ಕೊಡುತ್ತಿರುವುದು ಕಣದ ಚಿತ್ರಣವನ್ನು ಬದಲಿಸುವಂತೆ ತೋರುತ್ತಿದೆ. ಇವರಲ್ಲದೇ ಪಕ್ಷೇತರರಾಗಿ ಡಾ| ಮಮತಾ ಹೆಗ್ಡೆ, ಜೆಡಿಎಸ್‌ನಿಂದ ಕುಚ್ಚಾರು ಶ್ರೀಕಾಂತ್ ಪೂಜಾರಿಯೂ ಕಣ
ದಲ್ಲಿರುವ ಸಂಭವವಿದೆ. ಆಮ್ ಆದ್ಮಿ ಪಾರ್ಟಿ ಸಹ ಅಭ್ಯರ್ಥಿಯನ್ನು ನಿಲ್ಲಿಸುವ ಸಾಧ್ಯತೆ ಇದೆ. ಅಂದ ಹಾಗೆ ಎಂ. ವೀರಪ್ಪ ಮೊಲಿ ಈ ಕ್ಷೇತ್ರದಿಂದ ಆರು ಬಾರಿ ಗೆದ್ದಿದ್ದರೆ, ವಿ. ಸುನಿಲ್ ಕುಮಾರ್ ಮೂರು ಬಾರಿ ಪ್ರತಿನಿಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.