Zerodha Founders: ಫೋರ್ಬ್ಸ್ ಬಿಲಿಯನೇರ್ ಪಟ್ಟಿಗೆ ಕಾಮತ್ ಸಹೋದರರ ಸೇರ್ಪಡೆ, ಯಾರಿವರು?
ಝೆರೋದಾ ಷೇರು ಟ್ರೇಡಿಂಗ್ ಆ್ಯಪ್ಲಿಕೇಶನ್ ಆಗಿದೆ
Team Udayavani, Apr 6, 2023, 1:38 PM IST
ನವದೆಹಲಿ: ಝೆರೋದಾ ಕಂಪನಿ ಸ್ಥಾಪಕರಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಸಹೋದರರು 2023ರ ಫೋರ್ಬ್ಸ್(Forbes) ನ ವಿಶ್ವದ ಬಿಲಿಯನೇರ್ ಗಳ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Congress: ವಲಸೆ ಬಂದ ದತ್ತಾಗೆ ಇಲ್ಲ ಟಿಕೆಟ್: ಬಂಡಾಯದ ಕ್ಷೇತ್ರಗಳಿಗೆ ಕೈ ಹಾಕದ ಕೈ ಹೈಕಮಾಂಡ್
ಭಾರತದ ಅತೀ ದೊಡ್ಡ ಷೇರುದಲ್ಲಾಳಿ(StockBroking) ಕಂಪನಿ ಸಿಇಒ ನಿತಿನ್ ಕಾಮತ್ 1,104ನೇ Rankನಲ್ಲಿದ್ದು, ಸುಮಾರು 2.7 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ. ಅದೇ ರೀತಿ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿರುವ ನಿಖಿಲ್ ಕಾಮತ್ 2,405ನೇ Rankನಲ್ಲಿದ್ದು, ಇವರ ಸಂಪತ್ತಿನ ನಿವ್ವಳ ಮೌಲ್ಯ 1.1 ಬಿಲಿಯನ್ ಡಾಲರ್ ನಷ್ಟಿರುವುದಾಗಿ ವರದಿ ವಿವರಿಸಿದೆ.
ಪದವಿ ಶಿಕ್ಷಣವನ್ನು ಪಡೆಯದ ಕನ್ನಡಿಗ ಸಹೋದರರಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ 2010ರಲ್ಲಿ ಝೆರೋದಾ ಎಂಬ ಷೇರುದಲ್ಲಾಳಿ ಕಂಪನಿಯನ್ನು ಸ್ಥಾಪಿಸಿದ್ದರು. ಝೆರೋದಾ ಷೇರು ಟ್ರೇಡಿಂಗ್ ಆ್ಯಪ್ಲಿಕೇಶನ್ ಆಗಿದೆ. ಷೇರು ವಹಿವಾಟಿಗೆ ಕಡಿಮೆ ಶುಲ್ಕದ ಸೇವೆಯನ್ನು ನೀಡುವುದು ಝೆರೋದಾ ಆ್ಯಪ್ ನ ವಿಶೇಷತೆಯಾಗಿದೆ.
ಷೇರು ವಹಿವಾಟಿನ ಗ್ರಾಹಕರಿಗೆ ಝೆರೋದಾ ಆ್ಯಪ್ ನಿಂದ ದುಬಾರಿಯಲ್ಲದ, ಗ್ರಾಹಕ ಸ್ನೇಹಿ ಟ್ರೇಡಿಂಗ್ ಸೇವೆ ನೀಡುವ ಮೂಲಕ ಹೆಚ್ಚು ಜನಪ್ರಿಯಗೊಂಡಿತ್ತು. ಇದರ ಪರಿಣಾಮ ಭಾರತದಲ್ಲಿ ಝೆರೋದಾ ಷೇರು ಬ್ರೋಕರೇಜಸ್ ಮಾಡುವ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾಗಿದೆ.
ಯಾರಿವರು ಕಾಮತ್ ಬ್ರದರ್ಸ್?
ನಿತಿನ್ ಮತ್ತು ನಿಖಿಲ್ ಕಾಮತ್ ಚಿಕ್ಕ ವಯಸ್ಸಿನಲ್ಲೇ ವ್ಯಾಪಾರ, ವಹಿವಾಟಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಬೆಂಗಳೂರಿನ ಬಸವನಗುಡಿ ನಿವಾಸಿಯಾದ ಕಾಮತ್ ಸಹೋದರರು ಶಿಕ್ಷಣಕ್ಕಿಂತ ಹೆಚ್ಚು ಟ್ರೇಡಿಂಗ್ ಕುರಿತು ಆಸಕ್ತಿ ಹೊಂದಿದ್ದರು. ಆರಂಭದಲ್ಲಿ Reliance Money ಮತ್ತು Way2Wealthನ ಸಬ್ ಬ್ರೋಕರ್ಸ್ ಆಗಿ ಕಾರ್ಯನಿರ್ವಹಿಸತೊಡಗಿದ್ದರು. ಈ ವಹಿವಾಟಿನ ಯಶಸ್ಸಿನ ಪರಿಣಾಮ ಕಾಮತ್ ಸಹೋದರರು ಝೆರೋದಾ ಕಂಪನಿ ಸ್ಥಾಪಿಸಲು ಕಾರಣವಾಯ್ತು.
ಷೇರು ಮಾರುಕಟ್ಟೆ ವಹಿವಾಟು ಪಾರದರ್ಶಕವಾಗಿಲ್ಲ ಎಂಬುದನ್ನು ಮನಗಂಡ ಕಾಮತ್ ಸಹೋದರರು ಷೇರುವಹಿವಾಟಿನ ದಲ್ಲಾಳಿ ಶುಲ್ಕ ಪಡೆಯಲು ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದ್ದರು. ಏತನ್ಮಧ್ಯೆ ಎನ್ ಎಸ್ ಇ (National Stock Exchange) ಮತ್ತು ಫೈನಾಶ್ಶಿಯಲ್ ಟೆಕ್ನಾಲಜೀಸ್ ನಡುವೆ ಜಟಾಪಟಿ ಆರಂಭವಾಗಿತ್ತು. ಹೀಗೆ 2008ರಲ್ಲಿ ಕಾಮತ್ ಸಹೋದರರು ಎನ್ ಎಸ್ ಇ ಸದಸ್ಯರಾಗಲು ಅವಕಾಶ ಸಿಕ್ಕಿತ್ತು. ಈ ಮೂಲಕ ದಲ್ಲಾಳಿಗಳು ಆ್ಯಪ್ ಅನ್ನು ಉಪಯೋಗಿಸಿ ವಹಿವಾಟು ನಡೆಸಲು ಅನುಮತಿ ನೀಡಿತ್ತು. ಇದರ ಪರಿಣಾಮ 2010ರಲ್ಲಿ ಎಲ್ಲಾ ಷೇರು ವಹಿವಾಟುದಾರರು ಝೆರೋದಾ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ವಹಿವಾಟು ಆರಂಭಿಸಿದ್ದರು.
ಪ್ರತಿ ವಹಿವಾಟಿಗೆ ಟ್ರೇಡರ್ಸ್ 20 ರೂಪಾಯಿ ಶುಲ್ಕ ಪಾವತಿಸಬೇಕು. ಆರಂಭಿಕ ವರ್ಷದಲ್ಲಿ 10,000 ಗ್ರಾಹಕರು ಝೆರೋದಾ ಆ್ಯಪ್ ಬಳಸಿದ್ದರು. ಯಾವುದೇ ಜಾಹೀರಾತು ಇಲ್ಲದೇ, ಕೇವಲ ಮೌಖಿಕವಾಗಿಯೇ ಝೆರೋದಾ ಆ್ಯಪ್ ಜನಪ್ರಿಯತೆ ಪಡೆಯುವ ಮೂಲಕ ಇಂದು ಲಕ್ಷಾಂತರ ಷೇರು ವಹಿವಾಟುದಾರರು ಆ್ಯಪ್ ಬಳಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.