![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 6, 2023, 2:33 PM IST
ಎಲ್ಲರನ್ನು ಕೈ ಬೀಸಿ ಸೆಳೆಯುವ ಕ್ಷೇತ್ರವೆಂದರೆ ಅದು ಸಿನಿಮಾ ರಂಗ. ಅದರಲ್ಲೂ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡವರ ಮೊದಲ ಆಯ್ಕೆ ಸಿನಿಮಾ. ಈಗ ಅದೇ ಕನಸಿನಲ್ಲಿ ಸಲೋನಿ ಗುಸ್ಸೇನ್ ಇದ್ದಾರೆ. ಜೈಪುರದಲ್ಲಿ ನಡೆದ ಫ್ಯಾಶನ್ ಷೋದಲ್ಲಿ “ಮಿಸ್ ಇಂಡಿಯಾ 2021′ ವಿಜೇತಳಾಗಿರುವ ಸಲೋನಿ, ನಂತರ “ಮಿಸ್ ಬೆಂಗಳೂರು’ “ಮಿಸ್ ಫೇಸ್ ಆಫ್ ಕರ್ನಾಟಕ’ ಕಿರೀಟಕ್ಕೆ ಭಾಜನರಾಗಿದ್ದಾರೆ. ಸದ್ಯ ಸಿನಿಮಾ ರಂಗಕ್ಕೆ ಬರುವ ಸೆಳೆತ ಹೊಂದಿದ್ದು, ಈಗಾಗಲೇ ಒಂದಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.
ಶಾಲಾ-ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸೌಂದರ್ಯ ಸೃರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಇರುವಂತೆ ಈಕೆಗೂ ನಟಿಸಬೇಕೆಂಬ ಹಂಬಲ ಬಂದಿದೆ. ಮನದ ಬಯಕೆಯನ್ನು ಅಪ್ಪನಿಗೆ ತಿಳಿಸಿದಾಗ ವಿರೋಧ ವ್ಯಕ್ತಪಡಿದೇ ಬೆಂಬಲ ಸೂಚಿಸಿದ್ದಾರಂತೆ.
ಸಿನಿಮಾರಂಗಕ್ಕೆ ಬರುವ ಮುನ್ನ ಎಲ್ಲದರಲ್ಲೂ ಪಕ್ವ ಆಗಿರಬೇಕೆಂಬ ಕಾರಣಕ್ಕೆ ಭರತನಾಟ್ಯ, ಹಿಪ್‌ಹಾಪ್ ನೃತ್ಯ ಇತರೆ ತರಬೇತಿಗಳನ್ನು ಕಲಿಯುತ್ತಿದ್ದಾರೆ. ಅವಕಾಶಗಳ ಕರೆ ಬಂದರೂ ಸರಿಯಾಗಿ ತಯಾರಿ ಮಾಡಿಕೊಳ್ಳದ ಕಾರಣ, ಹಿಂದೇಟು ಹಾಕಿದ್ದರಂತೆ. ಆದರೆ, ಒಳ್ಳೆಯ ಅವಕಾಶಗಳ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಡಲು ಸಿದ್ಧರಾಗಿದ್ದಾರೆ.
“ಗಟ್ಟಿ ಕಥಾಹಂದರವಿರುವ ಸಿನಿಮಾಗಳಲ್ಲಿ ಅಭಿನಯಿಸಿದರೆ ಗುರುತಿಸಿಕೊಳ್ಳಲು ಸಾಧ್ಯ ಎಂಬುದನ್ನು ಹಿರಿಯರು ಸಲಹೆ ಕೊಟ್ಟಿದ್ದಾರೆ. ಭಾರತದ ಸಂಸðತಿ ಮತ್ತು ಇತಿಹಾಸ ಬಿಂಬಿಸುವ ಪಾತ್ರ ಮಾಡುವ ಬಯಕೆ ಇದೆ. ಬಾಲಿವುಡ್‌ನ “ಪದ್ಮಾವತಿ’, “ರಾಜಿ’ ಅಂತಹ ಸಿನಿಮಾಗಳು ನನಗೆ ಇಷ್ಟ’ ಎನ್ನುತ್ತಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.