ಅರಮನೆಯ ದರ್ಬಾರ್ ಹಾಲ್‌ನಲ್ಲಿ ಜಿ 20 ಔತಣ ಕೂಟ: ಸರಕಾರ ವಿರುದ್ಧ ಆಕ್ರೋಶ
Team Udayavani, Apr 7, 2023, 8:00 AM IST
ಅಗರ್ತಲಾ: 122 ವರ್ಷಗಳ ಐತಿಹ್ಯವಿರುವ ತ್ರಿಪುರಾ ಉಜ್ಜಯಂತ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಜಿ20 ಪ್ರತಿನಿಧಿಗಳ ಔತಣಕೂಟ ಆಯೋಜಿಸಲಾಗಿತ್ತು. ಈ ಕ್ರಮ ತೆಗೆದುಕೊಂಡ ರಾಜ್ಯಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ದರ್ಬಾರ್ ಹಾಲ್ ರಾಜಮನೆತನದ ಪಾರುಪತ್ಯದಲ್ಲಿ ಮಹಾರಾಜರ ಪಟ್ಟಾಭಿಷೇಕಕ್ಕೆ ಮಾತ್ರ ಬಳಕೆಯಾಗುತ್ತಿದ್ದ ಸ್ಥಳ. ಇದೇ ಸ್ಥಳದಲ್ಲೇ ಏ.3ರಂದು ನಡೆದ ಜಿ 20 ಪ್ರತಿನಿಧಿಗಳ ಸಭೆಯಲ್ಲಿ ಸರ್ಕಾರ ಔತಣಕೂಟ ಆಯೋಜಿಸಿತ್ತು. ಈ ಹಿನ್ನೆಲೆ 122 ವರ್ಷಗಳಿಂದಲೂ ರಾಜ್ಯದ ಜನತೆ ಪೂಜನೀಯ ಭಾವದಲ್ಲಿ ಕಾಣುತ್ತಿದ್ದ ಸ್ಥಳವನ್ನು ಮನರಂಜನೆಗೆ ಬಳಸುವ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯ, ಜನರ ಭಾವನೆಗಳಿಗೆ ಸರ್ಕಾರ ಧಕ್ಕೆ ತಂದಿದೆ ಎಂದು ಭಾರತ ರಾಷ್ಟ್ರೀಯ ಕಲೆ-ಸಂಸ್ಕೃತಿ ಪಾರಂಪರಿಕ ಟ್ರಸ್ಟ್‌ನ ತ್ರಿಪುರಾ ಸಂಚಾಲಕರಾದ ಎಂ.ಕೆ.ಪ್ರಜ್ಞಾ ದೇಬ್ ಬರ್ಮನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಣಿಕ್ಯ ರಾಜಮನೆನತದ ಆಸ್ಥಾನವಾಗಿದ್ದ ಅರಮನೆಯನ್ನು 2013ರಲ್ಲಿ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.