2024ರಲ್ಲೂ ಜಯ ನಮ್ಮದೇ: ಬಿಜೆಪಿ ಸಂಸ್ಥಾಪನ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ Narendra Modi
Team Udayavani, Apr 7, 2023, 6:40 AM IST
ಹೊಸದಿಲ್ಲಿ: ಬಿಜೆಪಿಯ 44ನೇ ಸಂಸ್ಥಾಪನ ದಿನಾ ಚರಣೆಯ ಮೂಲಕವೇ ಪ್ರಧಾನಿ ನರೇಂದ್ರ ಮೋದಿ ಯವರು 2024ರ ಲೋಕಸಭೆ ಚುನಾವಣ ಕಹಳೆ ಮೊಳಗಿಸಿದ್ದಾರೆ.
2024ರಲ್ಲಿ ಬಿಜೆಪಿಯನ್ನು ಸೋಲಿ ಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಈಗಾಗಲೇ ಜನರು ಹೇಳಲು ಶುರು ಮಾಡಿಕೊಂಡಿದ್ದಾರೆ. ಅದು ನಿಜ, ಮುಂದಿನ ಬಾರಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಹಾಗಂತ, ನಾವು ಮೈಮರೆಯುವಂತಿಲ್ಲ. ಬಿಜೆಪಿ ಕಾರ್ಯಕರ್ತರಾದ ನಾವೆ ಲ್ಲರೂ ಚುನಾವಣೆಯ ಜತೆಗೆ ದೇಶದ ಪ್ರತಿಯೊಬ್ಬ ನಾಗರಿಕನ ಹೃದಯ ವನ್ನೂ ಗೆಲ್ಲಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ವಿಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ವಿಪಕ್ಷ ಗಳು ಇನ್ನೂ ಜೀತಪದ್ಧತಿಯ ಮನಃ ಸ್ಥಿತಿ ಯಿಂದ ಹೊರಬಂದಿಲ್ಲ. ಬಡವರು ಮತ್ತು ಹಿಂದುಳಿದ ವರ್ಗಗಳನ್ನು ಅವಮಾನ ಮಾಡುವುದರಲ್ಲೇ ನಿರತವಾಗಿದೆ ಎಂದೂ ಆರೋಪಿಸಿದ್ದಾರೆ.
ಹನುಮಾನ್ ಸ್ಮರಣೆ
ಹನುಮಾನ್ ಜಯಂತಿಯ ದಿನವಾದ ಗುರುವಾರವೇ ಬಿಜೆಪಿಯ ಸ್ಥಾಪನ ದಿನಾಚರಣೆ ನಡೆದ ಕಾರಣ, ಮೋದಿ ತಮ್ಮ ಭಾಷಣದಲ್ಲಿ ಹಲವು ಬಾರಿ ಆಂಜನೇಯನನ್ನು ಸ್ಮರಿಸಿದ್ದು ಕಂಡುಬಂತು. ಬಿಜೆಪಿಯು ಭ್ರಷ್ಟಾ ಚಾರ, ಸ್ವಜನ ಪಕ್ಷಪಾತ ಮತ್ತು ದೇಶದ ಕಾನೂನು ಸುವ್ಯವಸ್ಥೆ ಸಮಸ್ಯೆಯ ವಿರುದ್ಧ ಹೋರಾಡಲು ಬದ್ಧವಾಗಿದೆ.
ನಾವು ಹನುಮಾನ್‌ನಿಂದ ಸ್ಫೂರ್ತಿ ಪಡೆದವರು. ಇಂದಿನ ಭಾರತವು, ಹನುಮಾನನಂತೆ ಸವಾಲುಗಳ ವಿರುದ್ಧ ಹೋರಾಡುವುದಕ್ಕೆ ಸಜ್ಜಾಗಿದೆ ಎಂದೂ ಅವರು ಹೇಳಿದ್ದಾರೆ.
2014ರಲ್ಲಿ ಮೊತ್ತಮೊದಲ ಬಾರಿಗೆ ಪೂರ್ಣ ಬಹುಮತದಿಂದ ಬಿಜೆಪಿ ಅಧಿ ಕಾರಕ್ಕೆ ಬರುವ ಮೂಲಕ 800 ವರ್ಷಗಳ ಗುಲಾಮಗಿರಿಗೆ ಅಂತ್ಯಹಾಡಿತು ಎಂದೂ ನುಡಿದಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳ ಸಂಕುಚಿತ ಮನಃಸ್ಥಿತಿ, ಭ್ರಷ್ಟಾಚಾರ, ಜಾತಿವಾದ ಮತ್ತು ಕುಟುಂಬ ರಾಜಕಾರಣದ ವಿರುದ್ಧವೂ ಮುಗಿಬಿದ್ದರು. ದ್ವೇಷವನ್ನೇ ಮೈಗೂಡಿಸಿಕೊಂಡಿರುವ ವಿಪಕ್ಷಗಳ ನಾಯಕರು, ಒಂದಾದ ಮೇಲೆ ಒಂದರಂತೆ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದರು.
ಏಕ್ ಬಾರ್ ಫಿರ್ ಸೆ ಭಾಜಪಾ ಸರ್ಕಾರ್
ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಏಕ್ ಬಾರ್ ಫಿರ್ ಸೆ ಭಾಜಪಾ ಸರ್ಕಾರ್’ (ಮತ್ತೂಂದು ಬಾರಿ ಬಿಜೆಪಿ ಸರಕಾರ) ಎಂಬ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದರು.
ವಿಪಕ್ಷಗಳ ವಿರುದ್ಧ ವಾಗ್ಧಾಳಿ
ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ ಮೋದಿ, ಇತ್ತೀಚೆಗೆ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮೋದಿ ನಿಮ್ಮ ಸಮಾಧಿ ತೋಡುತ್ತೇವೆ ಎಂಬ ಘೋಷಣೆಗಳು ಕೇಳಿಬಂದವು. ಇದು ವಿಪಕ್ಷಗಳು ತೀರಾ ಹತಾಶರಾಗಿರುವುದಕ್ಕೆ ಸಾಕ್ಷಿ. ಬಾದಶಾಹಿಗಳ ಮನಃಸ್ಥಿತಿ ಹೊಂದಿರುವ ಇವರು ಇತರರನ್ನು ವಿಶೇಷವಾಗಿ ಬಡವರು ಮತ್ತು ತುಳಿತಕ್ಕೊಳಗಾದವರನ್ನು ಗುಲಾಮರಂತೆ ನಡೆಸಿಕೊಂಡು ಬಂದಿದ್ದಾರೆ. ವಿಪಕ್ಷಗಳು ಕೇವಲ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತವೆ. ಆದರೆ, ಬಿಜೆಪಿ ಪ್ರತಿಯೊಬ್ಬ ಭಾರತೀಯನಿಗೂ ನೆರವಾಗಲು ಶ್ರಮಿಸುತ್ತದೆ ಎಂದರು.
10 ಲಕ್ಷ ಪ್ರದೇಶಗಳಲ್ಲಿ ಪ್ರಸಾರ
ಪ್ರಧಾನಿ ಮೋದಿ ಅವರು ಸುಮಾರು 50 ನಿಮಿಷಗಳ ಕಾಲ ಮಾತನಾಡಿದ್ದು, ದೇಶಾದ್ಯಂತ 10 ಲಕ್ಷ ಸ್ಥಳಗಳಲ್ಲಿ ಅಳವಡಿಸಲಾದ ಪರದೆಗಳಲ್ಲಿ ಈ ಭಾಷಣದ ನೇರಪ್ರಸಾರ ನಡೆಯಿತು. ಬಿಜೆಪಿ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಷಣವನ್ನು ಆಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.