Snake on plane:ಆಕಾಶದಲ್ಲಿ ಹಾರಾಡುತ್ತಿದ್ದ ಹೆಲಿಕ್ಯಾಪ್ಟರ್ ನೊಳಗೆ ಕಾಳಿಂಗ ಸರ್ಪ ದರ್ಶನ!
Team Udayavani, Apr 7, 2023, 8:30 AM IST
ಜೋಹಾನ್ಸ್‌ಬರ್ಗ್: ರಸ್ತೆಯಲ್ಲಿ ನಡೆಯುವಾಗ ದಿಢೀರನೆ ಘಟಸರ್ಪವೊಂದು ಅಡ್ಡಬಂದರೆ ಸಾಕು ಮೈಚಳಿ ಬಂದಂತಾಗುತ್ತದೆ. ಹೀಗಿರುವಾಗ ಹೆಲಿಕಾಪ್ಟರ್ ಓಡಿಸುವ ಪೈಲಟ್ ತನ್ನ ಬೆನ್ನ ಹಿಂದೆಯೇ ಕಾಳಿಂಗಸರ್ಪ ತಲೆ ಹಾಕಿದ್ದನ್ನು ಕಂಡರೆ ಏನಾಗಬಹುದು? ಏನೂ ಅನಾಹುತವಾಗದಂತೆ ಪೈಲಟ್ ರುಡಾಲ್ಫ್ ಎರಾಸ್ಮಸ್ ಪರಿಸ್ಥಿತಿಯನ್ನು ನಿಭಾಯಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.
ದ.ಆಫ್ರಿಕಾದ ವೂರ್ಸೆಸ್ಟರ್‌ನಿಂದ ನೆಲ್ಸ್ ಪ್ರುಟ್‌ಗೆ 4 ಮಂದಿಯಿದ್ದ ಸಣ್ಣ ವಿಮಾನ ವನ್ನು ರುಡಾಲ್ಫ್ ಚಾಲನೆ ಮಾಡುತ್ತಿದ್ದರು. ಅವರಿಗೆ ತಾವು ಆಸನದೊಳಗೇ ಕೂತು ಸ್ವಲ್ಪ ಹೊತ್ತು ಆದಾಗ ಬೆನ್ನಹಿಂದೆ ತಣ್ಣಗಾಗಲು ಆರಂಭವಾಗಿ, ಏನೋ ಹರಿದಾಡಿ ದಂತಾದಾಗ, ತಿರುಗಿ ನೋಡುತ್ತಾರೆ… ಕಾಳಿಂಗ ಸರ್ಪದ ದರ್ಶನ! ಕೂಡಲೇ ಕಾಪ್ಟರ್‌ನೊಳಕ್ಕೆ ಹಾವಿದೆ, ಸದ್ಯದಲ್ಲೇ ಭೂಸ್ಪರ್ಶ ಮಾಡಲಾಗುತ್ತದೆ. ಧೈರ್ಯವಾಗಿ ಕುಳಿತುಕೊಳ್ಳಿ ಎಂದು ಪ್ರಯಾಣಿಕರಿಗೆ ತಿಳಿಸಿದರು.
ಅಲ್ಲೇ ಸನಿಹದಲ್ಲಿದ್ದ ವೆಲ್ಕಾಮ್ ವಿಮಾನ ನಿಲ್ದಾಣದಲ್ಲಿ ಇಳಿಸಿಯೇಬಿಟ್ಟರು. ಎಲ್ಲರು ಇಳಿದ ಬಳಿಕ ಕಡೆಯದಾಗಿ ರುಡಾಲ್ಫ್ ಇಳಿದುಕೊಂಡು ಆಸನದ ಕೆಳಗೆ ನೋಡಿದಾಗ ಕಾಳಿಂಗ ಸರ್ಪ ಸುರುಳಿ ಸುತ್ತಿಕೊಂಡು ಮಲಗಿತ್ತು.
ಮುಂಚೆಯೇ ಸುಳಿವು ಸಿಕ್ಕಿತ್ತು!: ವಸ್ತುಸ್ಥಿತಿಯಲ್ಲಿ ರವಿವಾರ ಕಾಪ್ಟರ್‌ನೊಳಕ್ಕೆ ಹಾವಿರುವುದು ಸ್ವಚ್ಛತಾ ಸಿಬಂದಿಗೆ ಗೊತ್ತಾಗಿತ್ತು. ಹಿಡಿಯಲು ಹೋದಾಗ ಎಂಜಿನ್‌ನ ರಕ್ಷಣ ಕವಚದೊಳಕ್ಕೆ ನುಸುಳಿಹೋಯಿತು. ಅಲ್ಲಿ ಪರಿಶೀಲಿಸಿದಾಗ ಹಾವಿನ ಸುಳಿವೇ ಸಿಕ್ಕಲಿಲ್ಲ. ಕಡೆಗೆ ಹೊರಗೆ ಹೋಗಿರಬಹುದು ಎಂದು ಸಿಬಂದಿ ಸುಮ್ಮನಾದರು. ಸೋಮವಾರ ಘಟನೆ ನಡೆದ ಬಳಿಕ ಮತ್ತೆ ಇಡೀ ಕಾಪ್ಟರ್ ಬಿಚ್ಚಿ ಹುಡುಕಿದ್ದಾರೆ. ಆಗಲೂ ಹಾವು ಪತ್ತೆಯಾಗಿಲ್ಲ, ಈಗ ಹಾವೊಂದು ರಹಸ್ಯವಾಗಿ ಸಿಬಂದಿಯನ್ನು ಕಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.