Indian citizenship: ಭಾರತದ ಪೌರತ್ವ ಕೋರಿ ಸಲ್ಲಿಸಿದ ಅರ್ಜಿ ತಿರಸ್ಕಾರ

ಪಾಕ್‌-ಭಾರತ ದಂಪತಿಗೆ ದುಬೈನಲ್ಲಿ ಜನಿಸಿದ‌ ಇಬ್ಬರು ಮಕ್ಕಳು: ಪಾಕ್‌ ಪೌರತ್ವ ತ್ಯಜಿಸಿ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಿ ಎಂದ ಹೈಕೋರ್ಟ್‌

Team Udayavani, Apr 8, 2023, 7:03 AM IST

high court karnataka

ಬೆಂಗಳೂರು: ಪಾಕಿಸ್ತಾನದ ತಂದೆ ಹಾಗೂ ಭಾರತದ ತಾಯಿಗೆ ದುಬೈನಲ್ಲಿ ಜನಸಿದ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಭಾರತದ ಪೌರತ್ವ ನೀಡಲು ನಿರಾಕರಿಸಿರುವ ಹೈಕೋರ್ಟ್‌, ತನ್ನ ದೇಶದ ಪೌರತ್ವ ತ್ಯಜಿಸಲು 21 ವರ್ಷ ಆಗಬೇಕು ಎಂದು ಪಾಕಿಸ್ತಾನ ಹೇಳಿರುವಾಗ, ಮತ್ತೂಂದು ದೇಶ ಅಪ್ರಾಪ್ತರಿಗೆ ಪೌರತ್ವ ನೀಡುವುದಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಿದೆ.

ಭಾರತದ ಪೌರತ್ವ ನೀಡುವಂತೆ ಕೋರಿ ಬೆಂಗಳೂರಿನಲ್ಲಿ ನೆಲೆಸಿರುವ 17 ಮತ್ತು 14 ವರ್ಷದ ಇಬ್ಬರು ಪಾಕಿಸ್ತಾನಿ ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪೌರತ್ವವನ್ನು ತ್ಯಜಿಸಲು 21 ವರ್ಷ ವಯಸ್ಸಾಗಬೇಕು ಎಂದು ಪಾಕಿಸ್ತಾನ ತಿಳಿಸಿರುವ ಸಂದರ್ಭದಲ್ಲಿ ಪಾಕಿಸ್ತಾನದ ತಂದೆ ಮತ್ತು ಭಾರತದ ತಾಯಿಗೆ ದುಬೈನಲ್ಲಿ ಜನಿಸಿರುವ ಇಬ್ಬರು ಮಕ್ಕಳಿಗೆ 21 ವರ್ಷಕ್ಕಿಂತಲೂ ಮುನ್ನ ಭಾರತದ ಪೌರತ್ವ ನೀಡಲು ನಿರ್ದೇಶನ ನೀಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯ ಪಟ್ಟಿದೆ.

ಅಲ್ಲದೆ, ಪಾಕಿಸ್ತಾನದ ಪೌರತ್ವ ತ್ಯಜಿಸಬೇಕಾದಲ್ಲಿ 21 ವರ್ಷ ಕಳೆದಿರಬೇಕು ಎಂದಿರುವಾಗ, ಅದಕ್ಕೆ ಭಾರತದ ಕಾನೂನುಗಳು ಹೊಂದಿಕೊಳ್ಳಲು ಸಾಧ್ಯವಿಲ್ಲ. ಜತೆಗೆ, ಪಾಕಿಸ್ತಾನದ ಪೌರತ್ವವನ್ನು ತ್ಯಜಿಸಿದ ಬಳಿಕವೇ ಅರ್ಜಿದಾರ ಮಕ್ಕಳು ಭಾರತದ ಪೌರತ್ವ ಕೋರಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ:
ಭಾರತದ ಮೂಲದ ಅಮೀನಾ ಎಂಬುವರು ದುಬೈನಲ್ಲಿರುವ ಪಾಕಿಸ್ತಾನದ ಪ್ರಜೆ ಅಸ್ಸಾದ್‌ ಮಲ್ಲಿಕ್‌ ಎಂಬುವರನ್ನು 2002ರಲ್ಲಿ ಷರಿಯಾ ಕಾನೂನಿನ ಪ್ರಕಾರ ವಿವಾಹವಾಗಿದ್ದರು. ದಂಪತಿಗೆ 2004 ಮತ್ತು 2008ರಲ್ಲಿ ಇಬ್ಬರು ಮಕ್ಕಳು ದುಬೈನಲ್ಲಿ ಜನಿಸಿದ್ದರು. ಈ ದಂಪತಿ ದುಬೈ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದಿದ್ದರು. ಜತೆಗೆ, ಮಕ್ಕಳ ಮೇಲಿನ ಹಕ್ಕನ್ನು ತಾಯಿಗೆ ಬಿಟ್ಟುಕೊಡಲಾಗಿತ್ತು. ಈ ಮಕ್ಕಳು ದುಬೈನಲ್ಲಿ ಉದ್ಯೋಗದಲ್ಲಿದ್ದ ತಾಯಿಯೊಂದಿಗೆ ನೆಲೆಸಿದ್ದರು.

ಈ ಮಧ್ಯೆ ಅಮೀನಾ ಅವರು ದುಬೈನಲ್ಲಿ ಜೀವನ ನಡೆಸುವುದಕ್ಕೆ ಸಾಧ್ಯವಾಗದ ಕಾರಣ ಮಕ್ಕಳೊಂದಿಗೆ ಬೆಂಗಳೂರಿನಲ್ಲಿದ್ದ ತನ್ನ ಪೋಷಕರ ಮನೆಗೆ 2021ರಲ್ಲಿ ಹಿಂದಿರುಗಲು ಮುಂದಾಗಿದ್ದರು. ಇದಕ್ಕಾಗಿ ಪಾಕಿಸ್ತಾನಿ ಪ್ರಜೆಗಳಾಗಿದ್ದ ಮಕ್ಕಳ ಪಾಸ್‌ಪೋರ್ಟ್‌ ಹೊಂದಿದ್ದ ಪರಿಣಾಮ ಮಕ್ಕಳನ್ನು ಭಾರತಕ್ಕೆ ಕರೆತರಲು ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದರು. ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳು ಅರ್ಜಿದಾರರಿಗೆ, ಪಾಕಿಸ್ತಾನದ ಪಾಸ್‌ಪೋರ್ಟ್‌ ಹಿಂದಿರುಗಿಸಿದ ಬಳಿಕ ಅವರ ಪೌರತ್ವದ ಕುರಿತು ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಿ ಮಾನವೀಯತೆ ದೃಷ್ಟಿಯಿಂದ ತಾತ್ಕಾಲಿಕವಾಗಿ ಭಾರತ ಪ್ರವೇಶಕ್ಕೆ ಪಾಸ್‌ ಪೋರ್ಟ್‌ ನೀಡಿದ್ದರು.

ಟಾಪ್ ನ್ಯೂಸ್

Charmadi Ghat ರಸ್ತೆಯಲ್ಲಿ ಪೊಲೀಸ್‌ ಗಸ್ತು: ಪ್ರವಾಸಿಗರ ಮೋಜು ನಿಯಂತ್ರಣಕ್ಕೆ ಕಣ್ಗಾವಲು

Charmadi Ghat ರಸ್ತೆಯಲ್ಲಿ ಪೊಲೀಸ್‌ ಗಸ್ತು: ಪ್ರವಾಸಿಗರ ಮೋಜು ನಿಯಂತ್ರಣಕ್ಕೆ ಕಣ್ಗಾವಲು

Bike Theft ಕೈಕಂಬ: ಬೈಕ್‌ ಕಳವು; ಪ್ರಕರಣ ದಾಖಲು

Bike Theft ಕೈಕಂಬ: ಬೈಕ್‌ ಕಳವು; ಪ್ರಕರಣ ದಾಖಲು

Road Mishap ಶಿರಾಡಿ: ಕೆಎಸ್ಸಾರ್ಟಿಸಿ – ಕಾರು ಢಿಕ್ಕಿ; ಗಾಯ

Road Mishap ಶಿರಾಡಿ: ಕೆಎಸ್ಸಾರ್ಟಿಸಿ – ಕಾರು ಢಿಕ್ಕಿ; ಗಾಯ

Theft Case; ಬ್ಯಾಟರಿ, ಕಾಂಪೌಂಡ್‌ ಗೇಟ್‌ಗಳ ಕಳವು: ಆರೋಪಿಯ ಬಂಧನ

Theft Case; ಬ್ಯಾಟರಿ, ಕಾಂಪೌಂಡ್‌ ಗೇಟ್‌ಗಳ ಕಳವು: ಆರೋಪಿಯ ಬಂಧನ

Bantwal ಮಾರ್ನಬೈಲು: ಸ್ಕೂಟರ್‌ ಢಿಕ್ಕಿಯಾಗಿ ಪಾದಚಾರಿಗೆ ಗಾಯ

Bantwal ಮಾರ್ನಬೈಲು: ಸ್ಕೂಟರ್‌ ಢಿಕ್ಕಿಯಾಗಿ ಪಾದಚಾರಿಗೆ ಗಾಯ

Kundapura ಕುಸಿದು ಬಿದ್ದು ವ್ಯಕ್ತಿ ಸಾವು

Kundapura ಕುಸಿದು ಬಿದ್ದು ವ್ಯಕ್ತಿ ಸಾವು

Udupi ಅಪರಿಚಿತನಿಂದ ಮಹಿಳೆಗೆ ವಂಚನೆ

Udupi ಅಪರಿಚಿತನಿಂದ ಮಹಿಳೆಗೆ ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R.Ashok

Assembly Electionನಲ್ಲಿ ಮೈತ್ರಿಗೆ ದೇವೇಗೌಡರು ಒಪ್ಪಲಿಲ್ಲ: ಅಶೋಕ್‌

Sanganna-Kardi

BJPಯಲ್ಲಿ ಆರೆಸ್ಸೆಸ್‌ ಮಾತು ನಡೆಯಲ್ಲ: ಸಂಗಣ್ಣ ಕರಡಿ

renukaacharya

Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ

ಪ್ರಹ್ಲಾದ ಜೋಶಿ

Hubli; ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ: ಪ್ರಹ್ಲಾದ ಜೋಶಿ

CM-Police

Karnataka Police: ಡ್ರಗ್ಸ್‌, ಜೂಜು ಮಟ್ಟಹಾಕಿ: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Charmadi Ghat ರಸ್ತೆಯಲ್ಲಿ ಪೊಲೀಸ್‌ ಗಸ್ತು: ಪ್ರವಾಸಿಗರ ಮೋಜು ನಿಯಂತ್ರಣಕ್ಕೆ ಕಣ್ಗಾವಲು

Charmadi Ghat ರಸ್ತೆಯಲ್ಲಿ ಪೊಲೀಸ್‌ ಗಸ್ತು: ಪ್ರವಾಸಿಗರ ಮೋಜು ನಿಯಂತ್ರಣಕ್ಕೆ ಕಣ್ಗಾವಲು

Bike Theft ಕೈಕಂಬ: ಬೈಕ್‌ ಕಳವು; ಪ್ರಕರಣ ದಾಖಲು

Bike Theft ಕೈಕಂಬ: ಬೈಕ್‌ ಕಳವು; ಪ್ರಕರಣ ದಾಖಲು

Road Mishap ಶಿರಾಡಿ: ಕೆಎಸ್ಸಾರ್ಟಿಸಿ – ಕಾರು ಢಿಕ್ಕಿ; ಗಾಯ

Road Mishap ಶಿರಾಡಿ: ಕೆಎಸ್ಸಾರ್ಟಿಸಿ – ಕಾರು ಢಿಕ್ಕಿ; ಗಾಯ

Theft Case; ಬ್ಯಾಟರಿ, ಕಾಂಪೌಂಡ್‌ ಗೇಟ್‌ಗಳ ಕಳವು: ಆರೋಪಿಯ ಬಂಧನ

Theft Case; ಬ್ಯಾಟರಿ, ಕಾಂಪೌಂಡ್‌ ಗೇಟ್‌ಗಳ ಕಳವು: ಆರೋಪಿಯ ಬಂಧನ

Bantwal ಮಾರ್ನಬೈಲು: ಸ್ಕೂಟರ್‌ ಢಿಕ್ಕಿಯಾಗಿ ಪಾದಚಾರಿಗೆ ಗಾಯ

Bantwal ಮಾರ್ನಬೈಲು: ಸ್ಕೂಟರ್‌ ಢಿಕ್ಕಿಯಾಗಿ ಪಾದಚಾರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.