Military copter: ಜಪಾನ್ ಸೇನಾ ಕಾಪ್ಟರ್ ಅವಶೇಷ ಪತ್ತೆ
Team Udayavani, Apr 8, 2023, 7:33 AM IST
ಟೋಕಿಯೋ : ಸಮುದ್ರದಲ್ಲಿ ಗುರುವಾರ ಪತನವಾಗಿದ್ದ ಜಪಾನ್ ಸೇನಾ ಹೆಲಿಕಾಪ್ಟರ್‌ನ ಕೆಲವು ಅವಶೇಷಗಳು ಪತ್ತೆಯಾಗಿದೆ. ಆದರೆ ಹೆಲಿಕಾಪ್ಟರ್‌ನಲ್ಲಿದ್ದ 10 ಮಂದಿ ಇದುವರೆಗೆ ಪತ್ತೆಯಾಗಿಲ್ಲ. ಅವರಿಗಾಗಿ ಶೋಧಕಾರ್ಯ ಭರದಿಂದ ಸಾಗಿದೆ.
ಮಿಯಾಕೊ ದ್ವೀಪದಿಂದ ಟೇಕ್‌ಆಫ್ ಆದ ಜಪಾನ್ ಸೇನೆಗೆ ಸೇರಿದ ಬ್ಲಾಕ್ ಹಾಕ್ ಹೆಲಿಕಾಪ್ಟರ್, ಗುರುವಾರ ಸ್ಥಳೀಯ ಸಮಯ ಮಧ್ಯಾಹ್ನ 3.56ರ ವೇಳೆಗೆ ರಾಡಾರ್‌ನಿಂದ ಸಂಪರ್ಕ ಕಡಿತಗೊಂಡಿತ್ತು. ಮಿಯಾಕೊ ದ್ವೀಪ ಮತ್ತು ವಾಯುವ್ಯ ಇರಾಬು ದ್ವೀಪದ ನಡುವೆ ಹೆಲಿಕಾಪ್ಟರ್ ಪತನವಾಗಿರುವ ಸಾಧ್ಯತೆಯಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದವರಲ್ಲಿ ಇಬ್ಬರು ಪೈಲಟ್‌ಗಳು, ಇಬ್ಬರು ಮೆಕ್ಯಾನಿಕ್‌ಗಳು ಹಾಗೂ ಜಿಎಸ್‌ಡಿಎಫ್ ಹಿರಿಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಯುಚಿ ಸಕಾಮೊಟೊ ಕೂಡ ಸೇರಿದ್ದಾರೆ. ಜಪಾನ್ ಕರಾವಳಿ ಪಡೆಯು ಶೋಧ ಕಾರ್ಯವನ್ನು ಮುಂದುವರಿಸಿದ್ದು, ಶುಕ್ರವಾರ ಬೆಳಗ್ಗೆ ಹೆಲಿಕಾಪ್ಟರ್‌ನ ಬಾಗಿಲು ಮತ್ತು ಕಿಟಕಿಯ ಫ್ರೆàಮ್ ದೊರೆತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.