ಕೈಕೊಟ್ಟ ನಾಯಕರು:ದಿಕ್ಕೆಟ್ಟ ಮೇಷ್ಟ್ರು; Siddaramaiah ಜತೆ ಸಾಮೀಪ್ಯ ಮುಳುವಾಯಿತೇ?


Team Udayavani, Apr 8, 2023, 7:27 AM IST

1-cssd-sd

ಚಿಕ್ಕಮಗಳೂರು: ಕಾಂಗ್ರೆಸ್‌ ಪಕ್ಷಕ್ಕೆ ಕಡೂರು ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕೆ.ಎಸ್‌.ಆನಂದ್‌ ಹೆಸರು ಘೋಷಣೆ­ಯಾಗುತ್ತಿದ್ದಂತೆ ದತ್ತ ಮೇಷ್ಟ್ರು ನಡೆ ಏನು ಎಂಬ ಚರ್ಚೆ ಕ್ಷೇತ್ರದಲ್ಲಿ ವ್ಯಾಪಕ­ವಾಗಿ ನಡೆಯುತ್ತಿದೆ. ಮೇಷ್ಟ್ರು ಪಕ್ಷೇ­ತರರವಾಗಿ ನಿಲ್ಲುತ್ತಾರೋ, ಕಾಂಗ್ರೆಸ್‌ನವರು ಮನವೊಲಿಸು­ತ್ತಾರೋ, ಬಂಡಾಯ ಏಳುತ್ತಾರೋ, ಅಭಿಮಾನಿ­ಗಳನ್ನು ಸಮಾಧಾನ ಪಡಿಸುತ್ತಾರೋ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

ದೊಡ್ಡಗೌಡರ ಮಾನಸಪುತ್ರ ಎಂದೇ ಗುರುತಿಸಿಕೊಂಡಿದ್ದ ದತ್ತ ಮೇಷ್ಟ್ರು ಕಳೆದ ಕೆಲವು ತಿಂಗಳ ಹಿಂದೆ ತೆನೆ ಇಳಿಸಿ ಕಾಂಗ್ರೆಸ್‌ ನಾಯಕರ ಕೈ ಹಿಡಿದಿದ್ದರು. ಮೇಷ್ಟ್ರು ಕಾಂಗ್ರೆಸ್‌ ಸೇರ್ಪ ಡೆಗೊಳ್ಳುತ್ತಿದ್ದಂತೆ ಕ್ಷೇತ್ರದಾದ್ಯಂತ ಈ ಬಾರಿ ದತ್ತಣ್ಣನಿಗೆ ಟಿಕೆಟ್‌ ಎನ್ನಲಾಗುತ್ತಿತ್ತು. ಮೇಷ್ಟ್ರು ನಾನು ಯಾವುದೇ ಷರತ್ತು ವಿ ಧಿಸದೆ ಕೈ ಹಿಡಿ ದಿದ್ದೇನೆ ಎನ್ನುತ್ತಿದ್ದರೂ ಒಳಗೊಳಗೆ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದರು. ಆದರೆ ಕಾಂಗ್ರೆಸ್‌ 2ನೇ ಪಟ್ಟಿಯಲ್ಲಿ ಮೇಷ್ಟ್ರಿಗೆ ಕೈ ನಾಯಕರು ಬಿಗ್‌ ಶಾಕ್‌ ನೀಡಿದ್ದಾರೆ.

ಕೈ ನಾಯಕರನ್ನು ನಂಬಿ ಬಂದಿದ್ದ ಮೇಷ್ಟ್ರು ಕೈ ಬಿಟ್ಟಿದ್ದಾರೆ. ಇತ್ತ ಜೆಡಿಎಸ್‌ ಮನೆ ತೊರೆದಿದ್ದಾರೆ. ಇದೇ ನನ್ನ ಕೊನೆಯ ಚುನಾವಣೆ ಎನ್ನುತ್ತಿದ್ದ ಮೇಷ್ಟ್ರು ಅಡಕತ್ತರಿ­ಯಲ್ಲಿ ಸಿಲುಕಿದ್ದು, ಯಾವ ನಿರ್ಧಾರಕ್ಕೆ ಬರಲಿದ್ದಾರೆಂಬ ಕುತೂಹಲ ಕೆರಳಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಎ.9ರಂದು ಅಭಿಮಾ ನಿಗಳ ಸಭೆ ಕರೆದಿರುವುದು ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರೋ? ಕಾಂಗ್ರೆಸ್‌ ನಾಯಕರ ಮನವೊಲಿಸ್ತಾರೋ? ಕಾಂಗ್ರೆಸ್‌ ವಿರುದ್ಧ ಬಂಡಾಯವಾಗಿ ಕಣಕ್ಕಿಳಿಯುತ್ತಾರೋ, ಅಭಿಮಾನಿ­ಗಳನ್ನು ಸಮಾ ಧಾನ ಪಡಿಸುತ್ತಾರೋ ಎಂಬ ಚರ್ಚೆಗಳು ರೆಕ್ಕೆಪುಕ್ಕ ಪಡೆದು ಕೊಂಡಿದೆ. ಕಾಂಗ್ರೆಸ್‌ 2ನೇ ಪಟ್ಟಿಯಲ್ಲಿ ಕೆ.ಎಸ್‌.ಆನಂದ್‌ ಹೆಸರು ಘೋಷಣೆಯಾಗುತ್ತಿದ್ದಂತೆ ದತ್ತ ಅಭಿಮಾನಿಗಳು, ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್‌ ಪ್ರಾಮಾ­ಣಿಕ ವ್ಯಕ್ತಿಗೆ ವಿಶ್ವಾಸ ದ್ರೋಹ ಮಾಡಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಮರಳಿ ಜೆಡಿಎಸ್‌ಗೆ ಬನ್ನಿ ಎಂದು ಕಾರ್ಯಕರ್ತರು ಆಹ್ವಾನಿ­ಸುತ್ತಿದ್ದರೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಾಗಿಲು ಬಂದ್‌ ಮಾಡಿದ್ದಾರೆ. ಇದರ ನಡುವೆ ದತ್ತ ಅವರು ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಪತ್ರ ಬರೆದು ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪತ್ರ ಹರಿ­ಯ ಬಿಡುತ್ತಿದ್ದಂತೆ ದತ್ತ ಮೇಷ್ಟ್ರು ನಡೆಯ ನಿಗೂಢತೆ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ. “ಅತ್ತ ಧರೆ, ಇತ್ತ ಹುಲಿ’ ಎಂಬ ಸ್ಥಿತಿಗೆ ಸಿಲುಕಿರುವ ಮೇಷ್ಟ್ರು ತಮ್ಮ ನಿರ್ಧಾರದ ಮೇಲೆ ಅವರ ರಾಜ­ಕೀಯ ಭವಿಷ್ಯ ನಿಂತಿದೆ ಎನ್ನುವುದು ಅಭಿ­ಮಾನಿಗಳು, ಕಾರ್ಯಕರ್ತರ ಅಭಿಪ್ರಾಯ­ವಾಗಿದೆ.

ಮೇಷ್ಟ್ರು ಅಭಿಮಾನಿಗಳಿಗೆ ಬರೆದ ಪತ್ರದಲ್ಲೇನಿದೆ?: ಆತ್ಮೀಯರೂ ನನ್ನ ಪ್ರೀತಿ ಪಾತ್ರರಾದ ನನ್ನ ಎಲ್ಲ ಅಭಿಮಾನಿಗಳಲ್ಲಿ ವಿನಂತಿ ಎಂದು ಆರಂಭಿಸಿರುವ ಅವರು, ನೀವು ನನಗೆ ಪ್ರೀತಿಯನ್ನು ಧಾರೆ ಎರೆದಿ­ದ್ದೀರಿ. ಹಣವಿಲ್ಲದ, ಜಾತಿಯಿಲ್ಲದ ನನ್ನನ್ನು ದತ್ತ, ನಮ್ಮ ದತ್ತಣ್ಣ ಎಂದು ಅಭಿಮಾನದಿಂದ ತಬ್ಬಿಕೊಂಡು ಬೆಳೆಸಿದ್ದೀರಿ. ಈಗ ಬಂದಿರುವ ವಿಶೇಷ ರಾಜಕೀಯ ಪರಿಸ್ಥಿತಿ­ಯಲ್ಲಿ, ನಿಮ್ಮ ಜತೆಗೆ ನಾನಿರಬೇಕು. ನನ್ನ ಜತೆಗೆ ನೀವಿರಬೇಕು. ಎಂಬುದು ಅನಿವಾರ್ಯ ವಾಗಿದೆ. ಈ ಕಾರಣದಿಂದ ಇದು ನನ್ನ ಮತ್ತು ನಿಮ್ಮೆಲ್ಲರ ಆತ್ಮಗೌರವಕ್ಕೆ, ಸ್ವಾಭಿಮಾನಕ್ಕೆ ಆದ ಅವಮಾನವಾಗಿದೆ. ಕ್ಷೇತ್ರದ ಮತದಾರರ ಸ್ವಾಭಿಮಾನಕ್ಕಾಗಿ ನಾನು ನಿಮ್ಮೆಲ್ಲರ ಆಶೀರ್ವಾದ­ವನ್ನು ಬೇಡಲು ಕಡೂರು ಪಟ್ಟಣದಲ್ಲಿ ಎ.9ರಂದು ಬೆಳಗ್ಗೆ 11ಕ್ಕೆ ನನ್ನ ಅಭಿಮಾನಿಗಳ ಸಭೆ ಕರೆದಿದ್ದೇನೆ. ನನ್ನನ್ನು ಹರಸಿ ಆಶೀರ್ವದಿಸಬೇಕೆಂದು ಕೋರುತ್ತೇನೆ’ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

ಎಚ್‌ಡಿಕೆ ನಿರುತ್ಸಾಹ
ಮೇಷ್ಟ್ರಿಗೆ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆಯಲ್ಲಿ ಮರಳಿ ಜೆಡಿಎಸ್‌ ಮನೆ ಸೇರಬಹುದು ಎಂಬ ಚರ್ಚೆಯೂ ನಡೆದಿತ್ತು. ಕಡೂರಿನಲ್ಲಿ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ವೈ.ಎಸ್‌.ವಿ. ದತ್ತ ಬಗ್ಗೆ ಪ್ರತಿಕ್ರಿಯಿಸಿ ವೈ.ಎಸ್‌.ವಿ. ದತ್ತ ಯಾರು ಅಂತ ನನಗೆ ಗೊತ್ತಿಲ್ಲ, ಅವರು ತುಂಬಾ ದೊಡ್ಡವರು. ಅವರ ಬಗ್ಗೆ ಗೊತ್ತಿಲ್ಲ. ಅವರ ಬಗ್ಗೆ ನಾನೇಕೆ ಚರ್ಚೆ ಮಾಡಲಿ. ನನ್ನದು ಸಣ್ಣ ಪಕ್ಷ. ನನ್ನ ಪಕ್ಷಕ್ಕೆ ಅವರೇಕೆ ಬರುತ್ತಾರೆ. ಅವರು ಇಂಟರ್‌ನ್ಯಾಶನಲ್‌ ಪಕ್ಷ ಸೇರಲು ಹೊರಟಿರುವವರು. ನನ್ನ ಪಕ್ಷದಲ್ಲಿ ಪಾಪ ಅವರಿಗೆ ಏನು ಸಿಗುತ್ತದೆ. ಅವರು ದೊಡ್ಡ ಪಕ್ಷದಲ್ಲೇ ಇರಲಿ ಎಂದು ಹೇಳುವ ಮೂಲಕ ಜೆಡಿಸ್‌ಗೆ ಸೇರಿಸಿ­ಕೊಳ್ಳುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಸಿದ್ದು ಜತೆ ಸಾಮೀಪ್ಯ ಮುಳುವಾಯಿತೇ?
ದತ್ತ ಅವರು ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿ ಕೊಂಡಿದ್ದು, ಈ ಸಂಬಂಧ ಇತ್ತೀಚೆಗೆ ವೈಎಸ್‌ವಿ ದತ್ತ ಮಾತನಾಡಿದ್ದಾರೆಂಬ ಆಡಿಯೋವೊಂದು ವೈರಲ್‌ ಆಗಿತ್ತು. ಕೆ.ಎಸ್‌.ಆನಂದ್‌ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತ. ಪಕ್ಷಕ್ಕಾಗಿ ದುಡಿದಿದ್ದಾನೆಂಬ ಕಾರಣಕ್ಕೆ ಟಿಕೆಟ್‌ ನೀಡಲಾಗಿದೆ. ಒಂದು ವೇಳೆ ದತ್ತರಿಗೆ ಟಿಕೆಟ್‌ ನೀಡಿದರೆ ಕೆ.ಎಸ್‌.ಆನಂದ್‌ ಬಂಡಾಯ ಏಳಬಹುದು ಅಥವಾ ಬೇರೆ ಪಕ್ಷಕ್ಕೆ ಜಂಪ್‌ ಆಗಬಹುದು ಎಂಬುದು ಮತ್ತೂಂದು ಕಾರಣ. ಹಾಗೇ ವೈಎಸ್‌ವಿ ದತ್ತ ಇತ್ತೀಚೆಗೆ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದು, ಒಂದು ವೇಳೆ ಟಿಕೆಟ್‌ ನೀಡಿದಲ್ಲಿ ವಲಸೆ ಬಂದವರಿಗೆ ಕೈ ನಾಯಕರು ಮಣೆ ಹಾಕಿದ್ದಾರೆಂಬ ಅಪಕೀರ್ತಿಗೆ ಪಾತ್ರರಾಗಬೇಕಾಗುತ್ತದೆ ಎಂಬ ಕಾರ ಣ ದಿಂದ ಟಿಕೆಟ್‌ ನೀಡಿಲ್ಲ ಎನ್ನಲಾಗಿದೆ.

ಸಂದೀಪ ಜಿ.ಎನ್‌.ಶೇಡ್ಗಾರ್‌

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

9

Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ

8

Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.