Veeram movie review: ಫ್ಯಾಮಿಲಿ ಡ್ರಾಮಾದಲ್ಲಿ ಮಾಸ್‌ ಮಿಂಚು


Team Udayavani, Apr 8, 2023, 10:40 AM IST

veeram kannada movie review

ಒಂದು ಕಡೆ ಫ್ಯಾಮಿಲಿ ಸೆಂಟಿಮೆಂಟ್‌, ಇನ್ನೊಂದು ಕಡೆ ಲವ್‌, ಮತ್ತೂಂದು ಕಡೆ ಬೇಡ ಬೇಡವೆಂದರೂ ಕೈ ಬೀಸಿ ಕರೆಯುವ ರೌಡಿಸಂ… ನಾಯಕನ ಬಾಳಲ್ಲಿ ಈ ಮೂರು ಅಂಶಗಳು ಬಂದು ಹೋಗುತ್ತವೆ. ಅಂತಿಮವಾಗಿ ಆತ ಯಾವುದನ್ನು ಆಯ್ಕೆ ಮಾಡುತ್ತಾನೆ… ಈ ಕುತೂಹಲ ನಿಮಗಿದ್ದರೆ ನೀವು “ವೀರಂ’ ಸಿನಿಮಾ ನೋಡಬೇಕು.

“ವೀರಂ’ ಒಂದು ಔಟ್‌ ಅಂಡ್‌ ಔಟ್‌ ಮಾಸ್‌ ಸಿನಿಮಾ. ಇಲ್ಲಿನ ಮಾಸ್‌ ಅಂಶಗಳಿಗೆ ಕ್ಲಾಸ್‌ ಫ್ರೆàಮ್‌ ಕೂಡಾ ಇದೆ. ಹಾಗಾಗಿ, ಇದನ್ನು ಫ್ಯಾಮಿಲಿ ಡ್ರಾಮಾವಾಗಿಯೂ ನೋಡಬಹುದು. ಈ ಚಿತ್ರದ ನಿರ್ದೇಶಕರ ಪರಮುದ್ದೇಶ ಇಡೀ ಸಿನಿಮಾವನ್ನು ಹೈವೋಲ್ಟೆàಜ್‌ ಆ್ಯಕ್ಷನ್‌ ಜೊತೆಗೆ ಫ್ಯಾಮಿಲಿ ಅಂಶಗಳೊಂದಿಗೆ ಕಟ್ಟಿಕೊಡೋದು. ಅದನ್ನು ನೀಟಾಗಿ ಮಾಡಿದ್ದಾರೆ ಕೂಡಾ. ಆ ಮಟ್ಟಿಗೆ “ವೀರಂ’ ಮೆಚ್ಚುಗೆಗೆ ಪಾತ್ರವಾಗುವ ಸಿನಿಮಾ. ನಿರ್ದೇಶಕರಿಗೆ ತಾನು ಏನು ಹೇಳಬೇಕು ಮತ್ತು ಅದನ್ನು ಹೇಗೆ ಹೇಳಬೇಕು ಎಂಬ ಸ್ಪಷ್ಟತೆ ಇರುವುದರಿಂದ ಚಿತ್ರ ಗೊಂದಲಮುಕ್ತ.

ಇನ್ನು ಕಥೆಯ ಬಗ್ಗೆ ಹೇಳುವುದಾದರೆ ಅಕ್ಕನ ಪ್ರೀತಿಯಲ್ಲಿ ಬೆಳೆದಿರುವ ಇಬ್ಬರು ಹುಡುಗರು ಅನಿವಾರ್ಯವಾಗಿ ರೌಡಿಸಂ ಫೀಲ್ಡ್‌ ಗೆ ಎಂಟ್ರಿಕೊಟ್ಟಾಗ, ಅದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ. ಅದು ಫ್ಯಾಮಿಲಿ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂಬ ಅಂಶಗಳೊಂದಿಗೆ ಚಿತ್ರದ ಕಥೆ ಸಾಗುತ್ತದೆ. ಕಾಲೇಜ್‌ ಹಿನ್ನೆಲೆಯಿಂದ ಆರಂಭವಾಗುವ ಕಥೆ ಮುಂದೆ ಹಲವು ಮಜಲುಗಳನ್ನು ದಾಟಿಕೊಂಡು ಬರುತ್ತದೆ. ಅಂತಿಮವಾಗಿ ಒಂದು ಮಾಸ್‌ ಸಿನಿಮಾವಾಗಿ ರಂಜಿಸುತ್ತದೆ. ಈ ಸಿನಿಮಾದ ಹೈಲೈಟ್‌ಗಳಲ್ಲಿ ಚಿತ್ರದ ಸಂಭಾಷಣೆ ಎನ್ನಬಹುದು. ರಗಡ್‌ ಹಿನ್ನೆಲೆಯ ಕಥೆಗೆ ಅಷ್ಟೇ ಖಡಕ್‌ ಆಗಿರುವ ಪಂಚಿಂಗ್‌ ಸಂಭಾಷಣೆ ಬರೆಯಲಾಗಿದೆ.

ಇನ್ನು, ಚಿತ್ರದಲ್ಲಿ ಲವ್‌ಸ್ಟೋರಿ, ಫ್ಯಾಮಿಲಿ ಸೆಂಟಿಮೆಂಟ್‌ ಎಲ್ಲವೂ ಇದೆ. ಆದರೆ, ಯಾವುದನ್ನೂ ಅತಿಯಾಗಿ ತೋರಿಸದೇ, ಕಥೆಯನ್ನು ಮುಂದುವರೆಸಲಾಗಿದೆ. ಇಡೀ ಸಿನಿಮಾದ ಹೈಲೈಟ್‌ ಎಂದರೆ ಅದು ನಾಯಕ ಪ್ರಜ್ವಲ್‌ ದೇವರಾಜ್‌. ಇಲ್ಲಿ ಅವರು ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲವರ್‌ಬಾಯ್‌, ಆ್ಯಕ್ಷನ್‌ ಹೀರೋ ಹಾಗೂ ಫ್ಯಾಮಿಲಿ ಮ್ಯಾನ್‌… ಈ ಮೂರರಲ್ಲೂ ಪ್ರಜ್ವಲ್‌ ಇಷ್ಟವಾಗುತ್ತಾರೆ. ಅದರಲ್ಲೂ ತಾನು ಔಟ್‌ ಅಂಡ್‌ ಔಟ್‌ ಮಾಸ್‌ ಸಿನಿಮಾಗಳಿಗೂ ಸೈ ಎಂಬುದನ್ನು ಮತ್ತೂಮ್ಮೆ ಪ್ರಜ್ವಲ್‌ ಸಾಬೀತು ಮಾಡಿದ್ದಾರೆ.

ನಾಯಕಿ ರಚಿತಾ ರಾಮ್‌, ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ವಿಲನ್‌ ಆಗಿ ನಟಿಸಿರುವ “ಶಿಷ್ಯ’ ದೀಪಕ್‌ ಗಮನ ಸೆಳೆಯುತ್ತಾರೆ. ಮುಂದೆ ಒಳ್ಳೆಯ ಅವಕಾಶ ಸಿಕ್ಕರೆ ನೆಗೆಟಿವ್‌ ಪಾತ್ರಗಳಲ್ಲಿ ದೀಪಕ್‌ ಮಿಂಚುವ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಬಲರಾಜವಾಡಿ, ಅಚ್ಯುತ್‌ ಕುಮಾರ್‌, ಶ್ರುತಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಒಂದು ಆ್ಯಕ್ಷನ್‌ ಕಂ ಫ್ಯಾಮಿಲಿ ಡ್ರಾಮಾವನ್ನು ಬಯಸುವವರಿಗೆ “ವೀರಂ’ ಇಷ್ಟವಾಗಬಹುದು.

ರವಿ ರೈ

ಟಾಪ್ ನ್ಯೂಸ್

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Out of syllabus movie review

Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್‌

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

police

Kasaragod; ಬಂದೂಕು ತೋರಿಸಿ ಹಲ್ಲೆ : ನಾಲ್ವರ ಮೇಲೆ ಕೇಸು

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.