James Webb Space; ಯುರೇನಸ್ ಉಂಗುರ
Team Udayavani, Apr 8, 2023, 11:52 AM IST
ಹೊಸದಿಲ್ಲಿ: ಬಾಹ್ಯಾಕಾಶ ಚಿತ್ರಣ ಸೆರೆಹಿಡಿಯುವಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ ತನ್ನ ಸಾಮರ್ಥ್ಯವನ್ನು ಮತ್ತೆ ಪ್ರದರ್ಶಿಸಿದ್ದು, ಸೌರವ್ಯೂಹದ ವಿಶಿಷ್ಟಗ್ರಹ ಯುರೇನಸ್ ಮತ್ತದರ ಪರಿವಾರದ ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದೆ.
ಅದ್ಭುತ ವಾತಾವರಣದಲ್ಲಿ ಉಂಗುರದಿಂದ ಸುತ್ತುವರಿ ಯಲ್ಪಟ್ಟಿರುವ ಪ್ರಭಾವಳಿಯೊಂದು ಯುರೇನಸ್ ಸುತ್ತ ಕಾಣುತ್ತಿದೆ. ಈ ಚಿತ್ರಗಳು ನೋಡುಗರನ್ನು ಆಕರ್ಷಿಸುತ್ತಿವೆ ಮಾತ್ರವಲ್ಲದೇ, ಉಪಗ್ರಹದ ವಸ್ತುಸ್ಥಿತಿ ಅರ್ಥೈಸಿಕೊಳ್ಳಲು ವಿಜ್ಞಾನಿಗಳ ಅಧ್ಯಯನಕ್ಕೂ ಸಹಕಾರಿಯಾಗಿದೆ. ಈ ರಚನೆಯನ್ನು ಸೆರೆ ಹಿಡಿದಿದ್ದು ಅಪರೂಪ ವೆನಿಸಿಕೊಂಡಿದೆ. 1986ರಲ್ಲಿ ವಾಯೇ ಜರ್ 2 ಬಾಹ್ಯಾಕಾಶ ನೌಕೆ ಅಂಥ ಉಂಗುರ ವ್ಯವಸ್ಥೆಯ ಚಿತ್ರಣವನ್ನು ಸೆರೆ ಹಿಡಿದಿತ್ತು.
ಆ ಬಳಿಕ ಈಗ ಜೇಮ್ಸ್ ವೆಬ್ ಯುರೇನಸ್‌ನ ಉಂಗುರ ಪ್ರಭಾವಳಿ ಅತ್ಯಂತ ಅದ್ಭುತವಾಗಿ ಸೆರೆ ಹಿಡಿಯಲ್ಪಟ್ಟಿದೆ. ಉಪಗ್ರಹದ ಸುತ್ತಲೂ ರಚನೆಗೊಂಡಿರುವ 13 ಉಂಗುರಗಳ ಪೈಕಿ, 11 ಉಂಗು ರಗಳ ಸ್ಪಷ್ಟ ಚಿತ್ರಣವನ್ನು ಗಮನಿಸಬಹುದಾಗಿದೆ. ಇದಲ್ಲದೇ ಉಪಗ್ರಹದ ಸುತ್ತಲೂ ಸುತ್ತುವ 27 ಚಂದ್ರರ ಪೈಕಿ, 6 ಚಂದ್ರರು ಹಾಗೂ ಪೋಲಾರ್ ಕ್ಯಾಪ್ (ಸೂರ್ಯನಿಗೆ ಎದುರಾಗಿರುವ ಯುರೇನಸ್‌ನ ಧ್ರುವ)ನ ಬೆಳಕಿನ ವೈಶಿಷ್ಟ್ಯ, ಮೋಡದ ಚಿತ್ರಣವನ್ನು ಸೆರೆಹಿಡಿಯಲಾಗಿದೆ. ಈ ಅದ್ಭುತ ಚಿತ್ರಣವನ್ನು ಸರೆ ಹಿಡಿಯಲು ಜೇಮ್ಸ್ ವೆಬ್ 12 ನಿಮಿಷಗಳ ದೀರ್ಘ ವೀಕ್ಷಣೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.