ಅಮಾನಿಬೈರಸಾಗರ ಕೆರೆ ನೀರು ದುರ್ವಾಸನೆ

Team Udayavani, Apr 8, 2023, 2:27 PM IST

tdy-16

ಗುಡಿಬಂಡೆ: ಪಟ್ಟಣದ ಅಮಾನಿಬೈರಸಾಗರ ಕೆರೆ ನೀರು ದುರ್ವಾಸನೆ ಬರುತ್ತಿದ್ದರೂ ಈ ನೀರನ್ನೇ ಪಟ್ಟಣಕ್ಕೆ ಕುಡಿಯಲು ಬಳಕೆ ಮಾಡುತ್ತಿರು ವುದರಿಂದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಪಟ್ಟಣದಲ್ಲಿ ಸುಮಾರು 2000 ಕ್ಕೂ ಹೆಚ್ಚು ಮನೆಗಳಿದ್ದು, ಇವುಗಳಿಗೆ ಕುಡಿಯುವ ನೀರು ಒದಗಿಸಲು 20ಕ್ಕೂ ಹೆಚ್ಚಿನ ಕೊಳವೆಬಾವಿಗಳು ಇದ್ದು, ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕ ‌ಡಿಮೆಯಾಗಿ , ಕುಡಿಯುವ ನೀರಿನ ಸರಬರಾಜುಗೆ ಪಟ್ಟಣ ಪಂಚಾಯತಿ ಹೆಣಗಾಡುತ್ತಿದ್ದೆ.

ಕೊಳವೆಬಾವಿ ನೀರು ಪೂರೈಸಲು ಆಗ್ರಹ: ಈ ಸಮಯದಲ್ಲಿ ಕುಡಿ ಯುವ ನೀರಿನ ತೊಂದರೆ ನೀಗಿಸಲು ಪಟ್ಟಣ ಪಂಚಾಯಿತಿ ಯವರು ಅಮಾನಿ ಬೈರಸಾಗರ ಕೆರೆಯ ನೀರನ್ನು ಶುದ್ಧೀಕರಣ ಮಾಡಿ, ಮನೆಗಳಿಗೆ ಒದಗಿಸುತ್ತಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಕೆರೆ ನೀರು ದುರ್ವಾಸನೆ ಬೀರುತ್ತಿದ್ದು, ಈ ನೀರನ್ನು ಸರಿಯಾಗಿ ಶುದ್ಧೀಕರಣ ಮಾಡಿ, ಪಟ್ಟಣಕ್ಕೆ ಒದಗಿಸುತ್ತಿರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮನೆಗಳಿಗೆ ಕೆರೆ ನೀರು ಒದಗಿಸುವುದನ್ನು ನಿಲ್ಲಿಸಿ ಕೊಳವೆಬಾವಿ ನೀರು ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೆಟ್ಟು ನಿಂತ ಘಟಕ: ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು, ಬಾಗೇಪಲ್ಲಿ ಸಮೀಪದ ಪರಗೋಡು ಗ್ರಾಮದ ಚಿತ್ರಾವತಿ ನದಿ ನೀರನ್ನು ಗುಡಿಬಂಡೆ ಪಟ್ಟಣದ ಹೊರ ಹೊಲಯದಲ್ಲಿ ಶುದ್ಧೀಕರಣ ಘಟಕ ಪ್ರಾರಂಭ ಮಾಡಿ ನೀರು ಒದಗಿಸುತ್ತಿದ್ದರು. ನಂತರದ ದಿನಗಳಲ್ಲಿ ಈ ಘಟಕ ಕೆಟ್ಟು ನಿಂತು, ಮೂಲೆ ಗುಂಪಾಗಿದ್ದು, ಈಗ ಇದೇ ಘಟಕದಲ್ಲಿ ಅಮಾನಿಬೈರಸಾಗರ ನೀರನ್ನು ಕೇವಲ ಆಲಂ ಹಾಕಿ, ಸರಿಯಾಗಿ ಶುದ್ಧೀಕರಣ ಮಾಡದೇ ನೀರು ಬಿಡುತ್ತಿದ್ದು, ಮನೆಗೆ ಬರುವ ಕೆರೆ ನೀರು ವಾಸನೆ ಬರು ತ್ತಿದೆ ಎಂಬ ಆರೋಪ ನಿವಾಸಿಗಳಿಂದ ಕೇಳಿಬರುತ್ತಿದೆ.

ದುರಸ್ತಿಪಡಿಸದ ಕೊಳವೆ ಬಾವಿಗಳು: ಪಟ್ಟಣದಲ್ಲಿ 2-3 ವರ್ಷಗಳಿಂದ ಸುಮಾರು 10 ಕೊಳವೆ ಬಾವಿಗಳನ್ನು ಕೊರೆಯಿಸಿದ್ದು, ಇವುಗಳಿಗೆ ಪಂಪ್‌ ಮೋಟಾರು, ಪೈಪ್‌ಗ್ಳನ್ನು ಅಳವಡಿಸಿ, ಖಜಾನೆಯಿಂದ ಹಣ ಸಹ ಡ್ರಾ ಮಾಡಲಾಗಿದೆ. ಆದರೆ ಕೊಳವೆಬಾವಿ ಕೊರೆಯಿಸಿದಾಗ ಮಾತ್ರ ಬಂದ ನೀರು, ಪಂಪ್‌ ಮೋಟಾರು ಅಳವಡಿಸಿದಾಗ ನೀರು ಬಾರದೆ ನಿರುಪಯುಕ್ತವಾಗಿವೆ. ಇನ್ನು ಹಳೇ ಕೊಳವೆ ಬಾವಿಗಳಲ್ಲಿ ಕೆಲವಕ್ಕೆ ಪಂಪು ಮೋಟಾರು ಸುಟ್ಟು ಹೋಗಿ, ನೀರು ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಂಪು, ಮೋಟಾರು ದುರಸ್ತಿಪಡಿಸದೇ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ.

ಮೂಲೆ ಸೇರಿದ ಯಂತ್ರಗಳು: ಶುದ್ಧೀಕರಣ ಘಟಕವನ್ನು ಪುನರ್‌ ಪ್ರಾರಂಭಿಸಲು ಪಟ್ಟಣ ಪಂಚಾಯಿತಿ ಬೇಕಾದ ಯಂತ್ರೋಪಕರಣಗಳನ್ನು ತರೆಸಿದ್ದು, ಅವುಗಳನ್ನು ಜೋಡಿಸಿ ಸರಿಯಾಗಿ ಶುದ್ಧೀಕರಣ ಮಾಡದೇ, ಯಂತ್ರೋಪಕರಣಗಳನ್ನು ಮೂಲೆಯಲ್ಲಿಡಲಾಗಿದೆ.

ಗುಡಿಬಂಡೆ ಪಟ್ಟಣಕ್ಕೆ ದುರ್ವಾಸನೆ ಬೀರುತ್ತಿರುವ ಕೆರೆ ನೀರನ್ನು ಬಿಡುತ್ತಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಬೀತಿಯಲ್ಲಿ ಜನರಿದ್ದಾರೆ. ಕೂಡಲೇ ಕೆರೆ ನೀರು ಸರಬರಾಜು ಮಾಡಲು ನಿಲ್ಲಿಸಬೇಕು. ● ನಾ.ರಾ.ವೆಂಕಟೇಶ್‌ ಮೂರ್ತಿ, ಸಮಾಜ ಸೇವಕರು, ಗುಡಿಬಂಡೆ

ಪಟ್ಟಣದಲ್ಲಿನ ಕೊಳವೆ ಬಾವಿಗಳು ಕೆಟ್ಟು ನಿಂತಿದ್ದು ಇದನ್ನು ದುರಸ್ತಿಪಡಿಸಿ, ಕೆರೆ ನೀರು ಬಳಕೆಯನ್ನು ನಿಲ್ಲಿಸಬೇಕು. ● ಬಿ.ಎ.ರಾಜೇಶ್‌, ಮಾಜಿ ಸದಸ್ಯರು, ಪಪಂ, ಗುಡಿಬಂಡೆ

ಪಟ್ಟಣದ ಅಮಾನಿ ಬೈರಸಾಗರ ಕೆರೆ ನೀರು ವಾಸನೆ ಬರುತ್ತಿದೆ ಎಂದು ಹೇಳುತ್ತಿದ್ದು, ನೀರನ್ನು ಲ್ಯಾಬ್‌ಗ ಪರೀಕ್ಷೆಗೆ ಕಳುಹಿಸುತ್ತಿದ್ದು, ಪರೀಕ್ಷಾ ವರದಿ ಬರುವವರೆಗೂ ನೀರನ್ನು ಮನೆಗಳಿಗೆ ಬಿಡದಂತೆ ಸಿಬ್ಬಂದಿಗೆ ತಿಳಿಸಲಾಗಿದೆ. ● ಸಬಾಶಿರನ್‌, ಮುಖ್ಯಾ ಧಿಕಾರಿ, ಪ.ಪಂ, ಗುಡಿಬಂಡೆ

ಟಾಪ್ ನ್ಯೂಸ್

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CKB-Crime

Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.