Andhra Pradesh: ಅನಂತಪುರದಲ್ಲಿ ಹದಿನೈದು ಅಪರೂಪದ ಖನಿಜ ಸಂಪತ್ತು ಪತ್ತೆ
ಫೋನ್‌ಗಳಿಂದ ಕಾರು ತಯಾರಿಕೆವರೆಗೆ ಅವುಗಳು ಬೇಕೇ ಬೇಕು
Team Udayavani, Apr 9, 2023, 7:14 AM IST
ಹೈದರಾಬಾದ್: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಅತ್ಯಂತ ವಿರಳಾತಿ ವಿರಳ ಹದಿನೈದು ಖನಿಜಗಳ ನಿಕ್ಷೇಪ (ಆರ್‌ಇಇ)ಗಳನ್ನು ಪತ್ತೆ ಹಚ್ಚಲಾಗಿದೆ. ಹೈದರಾಬಾದ್‌ನ ಸಿಎಸ್‌ಐಆರ್-ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಎನ್‌ಜಿಆರ್‌ಐ)ನ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ.
ಇವುಗಳನ್ನು ಕಾರು, ಮೊಬೈಲ್, ಟಿವಿ, ವಿಮಾನಯಾನ, ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆ ಮಾಡುವ ಉಪಕರಣಗಳು, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಳಕೆ ಮಾಡಲಾಗುತ್ತದೆ.
ಅನಂತಪುರ ಜಿಲ್ಲೆಯಲ್ಲಿ ಎನ್‌ಜಿಆರ್‌ಐನ ವಿಜ್ಞಾನಿಗಳು ಸಾಂಪ್ರದಾಯಿಕವಲ್ಲದ ಶಿಲೆಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ವೇಳೆ ಹೊಸ ಖನಿಜದ ಇರುವಿಕೆಯ ಬಗ್ಗೆ ದೃಢಪಟ್ಟಿತು ಎಂದು ಸಂಸ್ಥೆಯ ವಿಜ್ಞಾನಿ ಡಾ. ಪಿ.ವಿ.ಸುಂದರ ರಾಜು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಇದೇನಿದ್ದರೂ ಆರಂಭಿಕ ಹಂತ. ಹೊಸ ಮಾದರಿಯ ಖನಿಜಗಳು ಇರುವ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಾಗಿದೆ. ಭೂಮಿಯ ತೀರ ಆಳಭಾಗವಲ್ಲದ ಪ್ರದೇಶಗಳಲ್ಲಿ ಸಂಶೋಧನೆ ನಡೆಸುವ ಶೋರ್ ಎನ್ನುವ ಯೋಜನೆಯ ಭಾಗವಾಗಿ ಅದನ್ನು ನಡೆಸಲಾಗಿದೆ ಎಂದು ಹೇಳಿದ್ದಾರೆ.
ಪತ್ತೆಯಾದದ್ದು ಹೇಗೆ?
ಎನ್‌ಜಿಆರ್‌ಐನ ವಿಜ್ಞಾನಿಗಳು ಅನಂತಪುರ ಜಿಲ್ಲೆಯಲ್ಲಿ ಸಾಂಪ್ರದಾಯಿಕವಲ್ಲದ ಶಿಲೆ ಸಯೋನೈಟ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಹೊಸ ಖನಿಜ ಸಂಪನ್ಮೂಲ ಇರುವುದರ ಬಗ್ಗೆ ದೃಢಪಟ್ಟಿತು. ಈ 15 ಖನಿಜಗಳನ್ನು ಲ್ಯಾಂಥೆನೈಡ್ ಮತ್ತು ಆ್ಯಕ್ಟಿನೈಡ್ ಸರಣಿಯಲ್ಲಿ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ.
ಏನಿದು ನಿಕ್ಷೇಪ?
ಕರ್ನಾಟಕಕ್ಕೆ ಹೊಂದಿಕೊಂಡು ಇರುವ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಅಪರೂಪದ ಲೈಟ್ ರೇರ್ ಅರ್ಥ್ ಎಲೆಮೆಂಟ್ಸ್ (ಆರ್‌ಇಇ) ಖನಿಜ ನಿಕ್ಷೇಪ ಪತ್ತೆ ಹಚ್ಚಲಾಗಿದೆ. ಅದರಲ್ಲಿ ಮೊಬೈಲ್, ಕಾರು, ಟಿವಿ, ಕಂಪ್ಯೂಟರ್, ವೈದ್ಯಕೀಯ ತಂತ್ರಜ್ಞಾನ, ವಿಮಾನಯಾನ, ವಾಹನೋದ್ಯಮ, ರಕ್ಷಣೆ ಸೇರಿದಂತೆ ವಿವಿಧ ಕೈಗಾರಿಕೆಗಳಿಗೆ ಬೇಕಾಗುವ ಬಿಡಿಭಾಗಗಳಿಗೆ ಬೇಕಾಗುವ ಖನಿಜಗಳಿವು.
ಯಾವ ಲೋಹಗಳು ಪತ್ತೆ?
ಲ್ಯಾಂಥನಮ್, ಸೀರಿಯಮ್, ಪ್ರಸೆಯೋಡೈಮಿಯಮ್, ನಿಯೋಡೈಮಿಯಮ್, ಯಟ್ರಿಯಮ್, ಹ್ಯಾಫಿ°ಯಮ್, ಟ್ಯಾಂಟಲಮ್, ನಿಯೋಬಿಯಮ್, ಜಿರ್ಕೋನಿಯಮ್ ಹಾಗೂ ಸ್ಕ್ಯಾಂಡಿಯಮ್ ಪತ್ತೆಯಾಗಿವೆ. ಭೂಮಿಯ ಅಪರೂಪದ ಖನಿಜಾಂಶಗಳ ಕುರಿತ ಲೋಹಶಾಸ್ತ್ರ ಅಧ್ಯಯನ, ಸಂಪನ್ಮೂಲಗಳ ಮೌಲ್ಯಮಾಪನ, ಆರ್ಥಿಕ ಅಭಿವೃದ್ಧಿಯಲ್ಲಿ ಅವುಗಳ ಪಾತ್ರವನ್ನು ಅರಿತು ಗಣಿಗಾರಿಕೆಗಾಗಿ ಸಂಭಾವ್ಯ ತಾಣಗಳನ್ನು ಗುರುತಿಸಿ, ಆರ್ಥಿಕತೆಗೆ ಒತ್ತು ನೀಡುವ ಉದ್ದೇಶವನ್ನು ಯೋಜನೆ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.