ಹೈಕಮಾಂಡ್‌ ಪಟ್ಟಿಯಲ್ಲಿ ಮೂವರು : ಆಕಾಂಕ್ಷಿಗಳಲ್ಲಿ ತಳಮಳ

ಅನ್ಯರಿಗೆ ಟಿಕೆಟ್‌: 1989ರ ಪ್ರಯೋಗ?

Team Udayavani, Apr 9, 2023, 8:20 AM IST

ಹೈಕಮಾಂಡ್‌ ಪಟ್ಟಿಯಲ್ಲಿ ಮೂವರು : ಆಕಾಂಕ್ಷಿಗಳಲ್ಲಿ ತಳಮಳ

ಪುತ್ತೂರು : ಪುತ್ತೂರು ಕ್ಷೇತ್ರಕ್ಕೆ ಬಿಜೆಪಿ ವರಿಷ್ಠರು ಬೇರೆಯೇ ಮೂರು ಹೆಸರುಗಳನ್ನು ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದ್ದು, ಪ್ರಸ್ತುತ ಆಕಾಂಕ್ಷಿಗಳ ಸಾಲಿನಲ್ಲಿರುವವರ ನಿದ್ದೆಗೆಡಿಸಿದೆ.
ಈ ಬಾರಿ ಹೊಸ ಮುಖವನ್ನು ಕಣ ಕ್ಕಿಳಿಸುವ ಬಗ್ಗೆ ಈಗಾಗಲೇ ವರಿಷ್ಠರು ಬಹುತೇಕ ತೀರ್ಮಾನಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ಆಕಾಂಕ್ಷಿ ಗಳ ಪಟ್ಟಿಯೂ ಬಹಳ ದೊಡ್ಡದಾಗಿದೆ. ಆದರೆ ವರಿಷ್ಠರು ಬೇರೆಯೇ ಮೂರು ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ ಎನ್ನುವ ಅಂಶ ಕುತೂಹಲಕ್ಕೆ ಕಾರಣವಾಗಿದೆ.

1989 ರ ಪ್ರಯೋಗ?
ಪುತ್ತೂರಿನ ಬಿಜೆಪಿ ಪಾಳಯದಲ್ಲಿ ಎರಡು ಬಣಗಳ ರಾಜಕೀಯ ಮುಂದುವರಿದಿದೆ. ಹೀಗಾಗಿ ಯಾವುದೇ ಗುಂಪಿನವರಿಗೆ ಅವಕಾಶ ಕೊಟ್ಟರೆ ಸಮಸ್ಯೆ ಹೆಚ್ಚಾಗಲೂ ಬಹುದು. ಇದಕ್ಕಾಗಿ ಪರ್ಯಾಯ ದಾರಿಯಾಗಿ 1989 ರಲ್ಲಿನ ಪ್ರಯೋಗದ ಪುನರಾವರ್ತನೆಗೂ ವರಿಷ್ಠರು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

1989 ರಲ್ಲಿ ಕಾಂಗ್ರೆಸ್‌ನ ವಿನಯ ಕುಮಾರ್‌ ಸೊರಕೆ ವಿರುದ್ಧ ಪುತ್ತೂರಿನ ಬಿಜೆಪಿ ಅಭ್ಯರ್ಥಿಯಾಗಿ ಸುಳ್ಯ ಕ್ಷೇತ್ರದಿಂದ ಡಿ.ವಿ. ಸದಾನಂದ ಗೌಡರನ್ನು ಕರೆಸಿ ಅವಕಾಶ ನೀಡಲಾ ಗಿತ್ತು. ಈ ಬಾರಿಯ ಬಣ ರಾಜಕೀಯ ಹತ್ತಿಕ್ಕಲು ಹೊರಗಿನ ಅಭ್ಯರ್ಥಿಯನ್ನೂ ತಂದು ನಿಲ್ಲಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎನ್ನುತ್ತವೆ ಪಕ್ಷದ ಮೂಲಗಳು.

ಯಾವ ಕ್ಷೇತ್ರದ ಅಭ್ಯರ್ಥಿ..!
ಬಿಜೆಪಿ ರಾಜ್ಯಾಧ್ಯಕ್ಷರು ಮಂಗಳೂರಿನಲ್ಲಿ ಶುಕ್ರವಾರ ನಡೆಸಿದ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಕೇಳಿದ ಮೇಲೆ, ಹೈಕಮಾಂಡ್‌ ಮಟ್ಟದಲ್ಲೂ ಮೂರು ಹೆಸರುಗಳಿವೆ ಎಂದು ಪ್ರಸ್ತಾವಿಸಿದ್ದರಂತೆ. ಅವುಗಳಲ್ಲಿ ಸುಳ್ಯ ಭಾಗದವರ ಹೆಸರೂ ಸೇರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿ ಜಾತಿ ಲೆಕ್ಕಾಚಾರದಲ್ಲಿ ಆಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೋ ಅಥವಾ ಪಕ್ಷದ ಲೆಕ್ಕದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೋ ಕಾದು ನೋಡಬೇಕಿದೆ.

ಒಪ್ಪಿಸುವುದೇ ಸವಾಲು..!
ಹೊರ ಕ್ಷೇತ್ರದ ಅಭ್ಯರ್ಥಿಯನ್ನು ನಿಲ್ಲಿಸದೆ, ಕ್ಷೇತ್ರದ ಅಭ್ಯರ್ಥಿಗೆ ಮಣೆ ಹಾಕಬೇಕು ಎನ್ನುವ ಬಗ್ಗೆ ಈಗಾಗಲೇ ಪುತ್ತೂರು ಕ್ಷೇತ್ರದ ಮುಖಂಡರು ಪಟ್ಟು ಹಿಡಿದಿದ್ದಾರೆ. ಹಾಗಾಗಿ ವರಿಷ್ಠರು ಹೇಗೆ ಮುಖಂಡರ ಮನವೊಲಿಸುವರು ಎಂಬುದು ಮುಂದಿರುವ ಬೆಳವಣಿಗೆಯಾಗಿದೆ.

ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ತವರು ಕ್ಷೇತ್ರವಾದ ಪುತ್ತೂರನ್ನು ಗೆಲ್ಲಲೆಬೇಕಾದ ಒತ್ತಡದಲ್ಲಿರುವ ಕಾರಣ ಅವರ ನಿರ್ಧಾರವನ್ನು ಸ್ಥಳೀಯ ಮುಖಂಡರು ಒಪ್ಪುವ ಅನಿವಾರ್ಯವೂ ಬರಬಹುದು ಎನ್ನಲಾಗಿದೆ.

ಬೆಂಬಲಿಗರ ಪ್ರಚಾರ ಬಿರುಸು
ಪುತ್ತೂರಿನ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗುತ್ತಿರುವ ಬೆನ್ನಲ್ಲೇ ಆಕಾಂಕ್ಷಿತರ ಬೆಂಬಲಿಗರು ಅಭ್ಯರ್ಥಿತನಕ್ಕೆ ಆಗ್ರಹಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿರುಸಿನ ಪ್ರಚಾರ, ಅಭಿಯಾನ ನಡೆಸುತ್ತಿದೆ.

ಟಾಪ್ ನ್ಯೂಸ್

1-congress

By Election; ಕೈ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಅನ್ನಪೂರ್ಣ

u

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಚೀನಾದಲ್ಲೂ ಭಾರತದ ಜ್ಞಾನದ ಕುರಿತು ಮಾಹಿತಿ ಇದೆ:ಭಾಟೇ

somashekar st

Karnataka BJP ; 8 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ..!; ಎಸ್.ಟಿ.ಸೋಮಶೇಖರ್ ಬಾಂಬ್

KSRTC: ಬಸ್ ಪಲ್ಟಿ, ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

Harapanahalli: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

BBK11: ಮಹಿಳಾ ಸ್ಪರ್ಧಿಯ ಹೊಟ್ಟೆಗೆ ಏಟು; ಉಗ್ರಂ ಮಂಜುರನ್ನು ಆಚೆ ಕರೆಸಿ ಎಂದ ನೆಟ್ಟಿಗರು

BBK11: ಮಹಿಳಾ ಸ್ಪರ್ಧಿಯ ಹೊಟ್ಟೆಗೆ ಏಟು; ಉಗ್ರಂ ಮಂಜುರನ್ನು ಆಚೆ ಕರೆಸಿ ಎಂದ ನೆಟ್ಟಿಗರು

Middle Class Family Tulu movie

Middle Class Family: ಮತ್ತೆ ರಂಜಿಸಲು ಬರುತ್ತಿದ್ದಾರೆ ಸೌಂಡ್‌ ಲೈಟ್ಸ್‌ ಹುಡುಗರು

Udupi: ಪ್ರಾಚ್ಯವಿದ್ಯಾ ಸಮ್ಮೇಳನ ದಕ್ಷಿಣೋತ್ತರದ ಸಂಗಮ: ಪುತ್ತಿಗೆ ಶ್ರೀ

Udupi: ಪ್ರಾಚ್ಯವಿದ್ಯಾ ಸಮ್ಮೇಳನ ದಕ್ಷಿಣೋತ್ತರದ ಸಂಗಮ: ಪುತ್ತಿಗೆ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Bellare: ಆಡನ್ನು ಪೇಟೆಗೆ ಬಿಟ್ಟ ಮಾಲಕರಿಗೆ ದಂಡ

1

Uppinangady: ಹೆದ್ದಾರಿ ಸಂಚಾರ ಅಡ್ಡಾದಿಡ್ಡಿ!

Kadaba-Rain

Heavy Rain: ಕಡಬ ಪರಿಸರದಲ್ಲಿ ಭಾರೀ ಮಳೆ: ರಸ್ತೆ ಜಲಾವೃತ

Dharmasthala

Dharmasthala: ಇಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರ 57ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

Puuturu-VHP

Putturu: ವಿಶ್ವ ಹಿಂದೂ ಪರಿಷತ್‌ನಿಂದ ಸಾಮಾಜಿಕ ಸಮರಸದ ಭಾವ: ಗೋಪಾಲ್‌ ಜಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-congress

By Election; ಕೈ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಅನ್ನಪೂರ್ಣ

u

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಚೀನಾದಲ್ಲೂ ಭಾರತದ ಜ್ಞಾನದ ಕುರಿತು ಮಾಹಿತಿ ಇದೆ:ಭಾಟೇ

Zee Kannada Kutumba Awards-2024

Kutumba Awards-2024: ವೀಕೆಂಡ್ ನಲ್ಲಿ ವೀಕ್ಷಕರಿಗೆ ಮನರಂಜನೆಯ ಸಡಗರ

somashekar st

Karnataka BJP ; 8 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ..!; ಎಸ್.ಟಿ.ಸೋಮಶೇಖರ್ ಬಾಂಬ್

KSRTC: ಬಸ್ ಪಲ್ಟಿ, ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

Harapanahalli: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಮಹಿಳೆ ಸಾವು; ಹಲವರಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.